Author: roovari

ಬಂಟ್ವಾಳ : ಹೊಸ ಚಿಗುರು ಹಳೆಬೇರು ಕೂಡಿರಲು ಮರ ಸೊಬಗು ಎಂಬಂತೆ ಕಳೆದ 13 ವರ್ಷಗಳಿಂದ ಸನಾತನ ಭಾರತೀಯ ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ಒದಗಿಸುತ್ತಾ, ಪಠ್ಯ-ಪಠ್ಯೇತರ ಚಟುವಟಿಕೆಗಳಿಗೆ ಮಹತ್ವ ಕೊಡುತ್ತಾ ಬಂದಿರುವ ಕಲ್ಲಡ್ಕ ಶ್ರೀರಾಮ ಪ್ರಥಮ ದರ್ಜೆ ಕಾಲೇಜಿನ 2023-24ನೇ ವರ್ಷದ ವಾರ್ಷಿಕೋತ್ಸವ ‘ಆಕರ್ಷ್’ – ಪ್ರತಿಭಾ ಪುರಸ್ಕಾರ ಹಾಗೂ ಪ್ರತಿಭಾ ದಿನೋತ್ಸವವು ದಿನಾಂಕ 18-05-2024ರಂದು ಸಂಪನ್ನಗೊಂಡಿತು. ವಿದ್ಯಾಕೇಂದ್ರದ ಸಂಸ್ಥಾಪಕರು, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರೂ ಆದ ಡಾ. ಪ್ರಭಾಕರ ಭಟ್ ಕಲ್ಲಡ್ಕ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಸಿಕ್ಕಿದ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮನ್ನು ತಾವೇ ಬೆಳೆಸಿಕೊಳ್ಳಬೇಕು ಎಂಬ ಕಿವಿಮಾತು ನುಡಿದರು. ಖ್ಯಾತ ಯಕ್ಷಗಾನ ಭಾಗವತರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟಿನ ಅಧ್ಯಕ್ಷರಾದ ಶ್ರೀ ಸತೀಶ್ ಶೆಟ್ಟಿ ಪಟ್ಲ, ಖ್ಯಾತ ಯೂಟ್ಯೂಬರ್ ಕಂಟೆಂಟ್ ಕ್ರಿಯೇಟರ್ ಧನರಾಜ್ ಆಚಾರ್ಯ, ಪ್ರಜ್ಞಾ ಧನರಾಜ್ ಹಾಗೂ ಹಿರಿಯ ವಿದ್ಯಾರ್ಥಿ ಹಾಗೂ ಬೆಂಗಳೂರು ರಾಜವೃಕ್ಷ ರಿಲೇಟರ್ಸ್ ಪೈ.ಲಿ.ನ ನಿರ್ದೇಶಕ ಲಕ್ಷ್ಮೀಶ್ ಕೆ.ಜೆ. ಅತಿಥಿಗಳಾಗಿ…

Read More

ಮಂಗಳೂರು : ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಕೇಂದ್ರೀಯ ಹಿಂದಿ ನಿರ್ದೇಶನಾಲಯ, ಮಂಗಳೂರು ವಿಶ್ವವಿದ್ಯಾನಿಲಯ, ವಿಶ್ವವಿದ್ಯಾನಿಲಯ ಕಾಲೇಜು ಹಂಪನಕಟ್ಟ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶದ ಸಹಭಾಗಿತ್ವದಲ್ಲಿ ಐದು ದಿನಗಳ ಕಾಲ ನಡೆದ ‘ಹಿಂದಿ ಯುವ ಬರಹಗಾರರ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 17-05-2024ರಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ನಡೆಯಿತು. ಈ ಸಮಾರಂಭದಲ್ಲಿ ಮಾತನಾಡಿದ ಮೂಡುಬಿದಿರೆ ಮಹಾವೀರ ಕಾಲೇಜು ನಿವೃತ್ತ ಪ್ರಾಧ್ಯಾಪಕ ಡಾ. ವಿದ್ಯಾಕುಮಾ‌ರ್ “ಭಾರತದಲ್ಲಿ ಹಿಂದಿ ರಾಜ್ಯಭಾಷಾ ಸ್ಥಾನ ಪಡೆದಿದ್ದು, ವಿಶ್ವದ ಮೂಲೆ ಮೂಲೆಗೂ ಹಿಂದಿ ಭಾಷೆಯ ಸಾರ ತಲುಪಿದೆ. ಈ ಮೂಲಕ ಹಿಂದಿ ಭಾಷೆ ವಿಶ್ವಮಾನ್ಯವಾಗಿದೆ. ಭಾಷೆ ಎಂಬುದು ಸಂವಹನ ಮಾಧ್ಯಮ ಮಾತ್ರವಲ್ಲದೆ ಸಂಸ್ಕೃತಿ ಜನಾಂಗಗಳನ್ನು ಒಗ್ಗೂಡಿಸುವ ಕೆಲಸ ಮಾಡುತ್ತದೆ. ದೇಶದಲ್ಲಿ ಅತಿ ಹೆಚ್ಚಿನ ಜನರು ಹಿಂದಿ ಭಾಷೆ ಮಾತನಾಡಬಲ್ಲವರಾಗಿದ್ದಾರೆ. ಹಾಗಾಗಿ ಹಿಂದಿ ಭಾಷೆ ಮಾತನಾಡುವುದಕ್ಕೆ ಯಾವುದೇ ರೀತಿಯ ಸಂಕೋಚ ಇರಕೂಡದು. ವಿದ್ಯಾರ್ಥಿಗಳನ್ನು ಲೇಖಕರನ್ನಾಗಿ ಪ್ರೇರೇಪಿಸುವ ಉದ್ದೇಶದಿಂದ ಶಿಬಿರ ಆಯೋಜಿಸಲಾಗಿದೆ” ಎಂದು ಹೇಳಿದರು. ವಿ.ವಿ. ಕಾಲೇಜಿನ…

Read More

ಮಂಗಳೂರು : ನಾದನೃತ್ಯ ಸ್ಕೂಲ್ ಆಫ್ ಡಾನ್ಸ್ ಎಂಡ್ ಕಲ್ಚರಲ್ ಟ್ರಸ್ಟ್ (ರಿ.) ಆಯೋಜಿಸಿದ ‘ಬಣ್ಣಗಳ ಭಾವಲೋಕ’ ಭಾರತನಾಟ್ಯ ಕಾರ್ಯಕ್ರಮ ದಿನಾಂಕ 18 -05-2024 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೀಪಬೆಳಗಿಸಿ ಉದ್ಘಾಟಿಸಿದ ವಿದುಷಿ ವಸುಂಧರಾ ದೊರೆಸ್ವಾಮಿ ಮಾತನಾಡಿ “ನಾದ ನೃತ್ಯ ಕೇಂದ್ರವನ್ನು ನಡೆಸಿಕೊಂಡು ಬಂದಿರುವ ನನ್ನ ಶಿಷ್ಯೆ ಭ್ರಮರಿ ಶಿವಪ್ರಕಾಶ್ ತಾನು ನೃತ್ಯ ಪ್ರದರ್ಶಿಸುವುದಲ್ಲದೆ ತನ್ನ ಶಿಷ್ಯೆಯರಿಗೆ ಆ ವಿದ್ಯೆಯನ್ನು ಧಾರೆಯೆರೆದು ಇಂದು ಆ ಮಕ್ಕಳ ಜೊತೆಯಲ್ಲಿ ನೃತ್ಯ ಕಾರ್ಯಕ್ರಮ ನೀಡುತಿದ್ದಾರೆ. ಗುರುವಾಗಿ ನನಗೆ ಇಂದು ಶಿಷ್ಯೆಯನ್ನು ಪ್ರಶಿಷ್ಯೆಯರ ಜೊತೆ ನೋಡುವ ಸಂಭ್ರಮ. ಇಂದು ಭ್ರಮರಿ ಪ್ರಸ್ತುತ ಪಡಿಸಿದ ‘ಬಣ್ಣಗಳ ಭಾವ ಲೋಕ’ ಪದವರ್ಣದಲ್ಲಿ ಎಲ್ಲವೂ ನಾಯಕ ಹಾಗೂ ನಾಯಕಿ ಭಾವದಲ್ಲಿದ್ದರೂ ಮೊದಲು ಏಕವ್ಯಕ್ತಿಯಾಗಿ ಅಭಿನಯಿಸಿ, ಎರಡನೇ ನೃತ್ಯ ಪ್ರದರ್ಶನದಲ್ಲಿ ಇಬ್ಬರು ಜೊತೆಯಾಗಿ ದ್ವಿಗುಳ ನೃತ್ಯಬಂಧವನ್ನು ಪ್ರದರ್ಶಿಸಿ, ಅಂತಿಮವಾಗಿ ನೃತ್ಯ ರೂಪಕವನ್ನು ಪ್ರದರ್ಶಿಸಲಿರುವುದು ಹಾಗೂ ನೃತ್ಯ ಚೌಕಟ್ಟಿನಲ್ಲಿ ಇದೆಲ್ಲವನ್ನು ಪ್ರದರ್ಶಿಸುತ್ತಿರುವುದು ಅವಳ ಒಳಗಿರುವ ಕ್ರಿಯಾಶೀಲತೆಗೆ ಹಿಡಿದ…

Read More

ಉಡುಪಿ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕದಿಂದ ‘ಮನೆಯೇ ಗ್ರಂಥಾಲಯ’ ವಿನೂತನ‌ ಕಾರ್ಯಕ್ರಮಕ್ಕೆ ನಾಡಿನ ಪ್ರಸಿದ್ಧ ಸಾಹಿತಿ ವಿದ್ವಾಂಸ ನಾಡೋಜ ಡಾ. ಕೆ.ಪಿ. ರಾವ್ ಇವರು ಉಡುಪಿಯ ಬೈಲೂರಿನಲ್ಲಿರುವ ರಂಗ ಕಲಾವಿದರಾದ ಶಶಿಪ್ರಭಾ ಹಾಗೂ ವಿವೇಕಾನಂದ ದಂಪತಿಗಳ ಮನೆ ‘ವಾಟಿಕಾ’ದಲ್ಲಿ ದಿನಾಂಕ 21-05-2024ರಂದು ಚಾಲನೆ ನೀಡಿದರು. “ಆರ್ಟಿಫಿಶಿಯಲ್ ಇಂಟಲಿಜೆನ್ಸಿ ಎನ್ನುವಂತದ್ದು ಇವತ್ತಿನ ಆಧುನಿಕ ಸಂದರ್ಭದಲ್ಲಿ ಎಲ್ಲಾ ಸಾಧ್ಯತೆಗಳನ್ನು ಇಟ್ಟುಕೊಂಡು ಬೆಳೆಯುತ್ತಿದೆ. ಆದರೆ ಅನೇಕ ಶತಮಾನಗಳ ಹಿಂದೆ ನಾವು ಕಂಡುಕೊಂಡ ಮುದ್ರಣ ಮಾಧ್ಯಮದ ಆವಿಷ್ಕಾರದಿಂದಾಗಿ ಗಳಿಸಿದ ಜ್ಞಾನ ಸಂಪತ್ತನ್ನು ಅಕ್ಷರರೂಪವಾಗಿ ಪರಿವರ್ತಿಸಿ, ಮುಂದೆ ಅವುಗಳನ್ನು ಮುದ್ರಣ ರೂಪದಲ್ಲಿ ದಾಖಲೀಕರಣಗೊಳಿಸಿರುವುದರ ಪರಿಣಾಮವಾಗಿ ನಮಗಿಂದು ಕೋಟಿ ಕೋಟಿ ಗ್ರಂಥಗಳು ನಮ್ಮ ಅಧ್ಯಯನಕ್ಕೆ ಸಾಧ್ಯವಾಗಿವೆ, ಮುಂದೆಯೂ ಇವು ಸಾಧ್ಯವಾಗುತ್ತವೆ. ಅಷ್ಟು ಮಾತ್ರವಲ್ಲ ಒಂದು ಗ್ರಂಥವನ್ನು ತೆರೆದು ಅದರೊಳಗಿನ ಒಂದು ಪುಟದ ಸುವಾಸನೆಯನ್ನು ಗಮನಿಸಿದಾಗ ಅಲ್ಲಿ ಸಿಗುವ ಆನಂದವೇ ಬೇರೆ ಆಗಿರುತ್ತದೆ. ಅದನ್ನು ಪದಗಳಲ್ಲಿ ಕಟ್ಟಿಕೊಡಲು ಸಾಧ್ಯವಿಲ್ಲ. ಅಂತಹ ಅನುಭವವನ್ನು ಗ್ರಂಥಗಳನ್ನು ಸ್ಪರ್ಶಿಸುವುದರಿಂದ…

Read More

ಪುತ್ತೂರು : ಶ್ರೀ‌ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಇದರ ವತಿಯಿಂದ ತಿಂಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಬನ್ನೂರು ಭಾರತೀ ನಗರದ ಶ್ರೀ ಬಲಮುರಿ ವಿದ್ಯಾಗಣಪತಿ ದೇವಳದ ವಠಾರದಲ್ಲಿ‌ ದಿನಾಂಕ 21-05-2024ರಂದು ‘ತರಣಿ ಸೇನ ಕಾಳಗ’ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಎಲ್.ಎನ್. ಭಟ್, ಆನಂದ ಸವಣೂರು, ನಿತೀಶ್ ಮನೊಳಿತ್ತಾಯ ಎಂಕಣ್ಣಮೂಲೆ, ಪದ್ಯಾಣ ಶಂಕರನಾರಾಯಣ ಭಟ್, ವಿಷ್ಣು ಶರಣ ಬನಾರಿ, ಮಾಸ್ಟರ್ ಪರೀಕ್ಷಿತ್ ಪುತ್ತೂರು, ಮಾಸ್ಟರ್ ಅಭಯ ಕೃಷ್ಣ ಸಹಕರಿಸಿದರು. ಮುಮ್ಮೇಳದಲ್ಲಿ ಕು೦ಬ್ಳೆ ಶ್ರೀಧರ್ ರಾವ್ (ಶ್ರೀರಾಮ), ಪಕಳಕುಂಜ ಶ್ಯಾಮ್ ಭಟ್ (ರಾವಣ), ಭಾಸ್ಕರ್ ಶೆಟ್ಟಿ ಸಾಲ್ಮರ (ತರಣಿಸೇನ), ಭಾಸ್ಕರ್ ಬಾರ್ಯ (ಸರಮೆ), ಮಾಂಬಾಡಿ ವೇಣುಗೋಪಾಲ ಭಟ್ (ವಿಭೀಷಣ) ಹಾಗೂ ಚಂದ್ರಶೇಖರ್ ಭಟ್ ಬಡೆಕ್ಕಿಲ (ಸುಪಾರ್ಶ್ವಕ) ಸಹಕರಿಸಿದರು. ದೇವಳದ ಸಂಚಾಲಕ ವೆಂಕಟಕೃಷ್ಣ ಪ್ರಾಯೋಜಿಸಿದ್ದರು.

Read More

ಗಿರಿಮನೆ ಶ್ಯಾಮರಾವ್ ಅವರ ಮನೋವೈಜ್ಞಾನಿಕ ಕಾದಂಬರಿ ಸರಣಿಯ ನಾಲ್ಕನೇ ಕೃತಿಯಾಗಿರುವ ‘ಸಂಪ್ರಾಪ್ತಿ’ ಎಂಬ ಕಾದಂಬರಿಯು ಬದುಕಿನ ಪ್ರತಿಯೊಂದು ಆಯಾಮಗಳಲ್ಲಿ ಮಹತ್ವದ ಪಾತ್ರವನ್ನು ವಹಿಸುವ ಮಾನಸಿಕ ಸ್ವಾಸ್ಥ್ಯದ ಕುರಿತು ಚರ್ಚಿಸುತ್ತದೆ. ಮೇಲ್ನೋಟಕ್ಕೆ ಸಾಮಾಜಿಕ ಕಾದಂಬರಿಯಂತೆ ಕಾಣುತ್ತಿದ್ದರೂ ಮನೋವೈಜ್ಞಾನಿಕ ಅಂಶಗಳನ್ನು ಓದುಗರ ಸೂಕ್ಷ್ಮ ದೃಷ್ಟಿಗೆ ಕಾಣುವಂತೆ ಚಿತ್ರಿಸಿರುವ ಲೇಖಕರು ವ್ಯಕ್ತಿಯ ಮನಸ್ಥಿತಿಗಳು ಕೌಟುಂಬಿಕ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರುವ ರೀತಿ, ಹದಗೆಟ್ಟ ಮಾನಸಿಕ ಪರಿಸ್ಥಿತಿಯಿಂದ ಏಳಬಹುದಾದ ಗುಲ್ಲುಗಳು ಜೀವನದ ಏರು ಪೇರುಗಳಿಗೆ ಮುನ್ನುಡಿ ಬರೆಯುವ ವಿಧಾನವನ್ನು ವಿವರಿಸುತ್ತದೆ. ಸಭ್ಯನೂ, ಸಹೃದಯಿಯೂ, ಅಪಾರ ತಾಳ್ಮೆಯುಳ್ಳವನೂ ಆದ ರವಿಶಂಕರ್ ಯಾರಿಗೂ ಕೇಡು ಬಗೆಯದ ವ್ಯಕ್ತಿ. ತನಗೆ ಕೇಡು ಬಗೆದವರನ್ನು ದ್ವೇಷಿಸದೆ, ಅವರಲ್ಲಿ ನೈತಿಕತೆಯನ್ನು ಪೋಷಿಸುವ ವಿಶಾಲ ಮನೋಭಾವದವನು. ತಾಯಿಯ ಮುದ್ದಿನ ಮಗನಾಗಿ, ಕವಿತಾಳ ಪ್ರೀತಿಯ ಅಣ್ಣನಾಗಿ ಕುಟುಂಬದ ಹೊಣೆ ಹೊತ್ತ ರವಿಶಂಕರ್ ವೃತ್ತಿಧರ್ಮದಲ್ಲೂ ಸಾರ್ಥಕತೆ ಕಾಣುವ ಸಲುವಾಗಿ ಉನ್ನತ ವ್ಯಾಸಂಗಕ್ಕೆ ಸಿದ್ಧತೆ ನಡೆಸುವಾಗ ಪರಿಚಿತಳಾದ ತನ್ನ ತಂಗಿಯ ಗೆಳತಿ ವಿನುತಾಳ ಅಕ್ಕ ಚಿತ್ರಾಳನ್ನು ಪ್ರೇಮಿಸಿ, ಕುಟುಂಬಸ್ಥರ…

Read More

ಪುತ್ತೂರು: ಹಿರಿಯ ಜಾನಪದ ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ, ನಿವೃತ್ತ ಉಪನ್ಯಾಸಕ ಡಾ. ಪಾಲ್ತಾಡಿ ರಾಮಕೃಷ್ಣ ಆಚಾರ್ ಇವರ ವೈಕುಂಠ ಸಮಾರಾಧನೆ ಮತ್ತು ಶ್ರದ್ಧಾಂಜಲಿ ಸಭೆಯು ಪುತ್ತೂರು ಸುಕೃತೀಂದ್ರ ಕಲಾ ಮಂಟಪದಲ್ಲಿ ದಿನಾಂಕ 19-05-2024ರಂದು ನಡೆಯಿತು. ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಹಿರಿಯ ಸಾಹಿತಿ ಡಾ. ವಿವೇಕ ರೈ ಮಾತನಾಡಿ “ಡಾ. ರಾಮಕೃಷ್ಣ ಆಚಾರ್ ಅವರು ಎಲ್ಲೆಲ್ಲ ಇದ್ದರೋ ಅಲ್ಲೆಲ್ಲ ಸಂಘಟನೆ ಇದೆ. ಹಾಗಾಗಿ ಅವರಿಗೆ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಸಮುದಾಯವೆಂಬುದು ನಾಲ್ಕು ಚಕ್ರವಿದ್ದಂತಿತ್ತು. ಇದರೊಳಗೆ ತುಳು ಭಾಷೆಯ ಅಧ್ಯಯನ ವಿಶೇಷವಾಗಿತ್ತು. ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ, ಉಪನ್ಯಾಸಕರಾಗಿ, ತನ್ನ ನಿವೃತ್ತಿಯ ತನಕ ಅಭ್ಯಾಸ ಮಾಡುತ್ತಾ ಬಂದಿರುವ ಅವರು ಬದುಕಿನಲ್ಲಿ ವಿಶ್ರಾಂತಿಯನ್ನು ಪಡೆದಿಲ್ಲ. 2010ರಲ್ಲಿ ಅನಾರೋಗ್ಯದ ಕಾರಣದಿಂದ ಕಾಲನ್ನು ಕಳೆದುಕೊಂಡರೂ 14 ವರ್ಷಗಳ ಕಾಲ ಒಂದೇ ಕಾಲಿನಲ್ಲಿ ನಿರಂತರ ಕೆಲಸ ಮಾಡುತ್ತಾ ಬಂದರು. ಅವರ ಮಹತ್ವದ ಕೃತಿಗಳು ಬಂದದ್ದೇ 2010ರ…

Read More

ಮಂಗಳೂರು : ಮಂಗಳೂರು ರಥಬೀದಿ ಶ್ರೀ ಕಾಳಿಕಾಂಬಾ ವಿನಾಯಕ ದೇವಸ್ಥಾನದಲ್ಲಿ ಗುರುಸೇವಾ ಪರಿಷತ್ತು ಮಂಗಳೂರು ಘಟಕ ವತಿಯಿಂದ ಕಳೆದ 7 ದಿನಗಳಿಂದ ನಡೆದ ‘ಜ್ಞಾನ ವಿಕಾಸ ಶಿಬಿರ’ದ ಸಮಾರೋಪ ಸಮಾರಂಭವು ದಿನಾಂಕ 19-05-2024ರಂದು ದೇವಸ್ಥಾನದ ಪಟ್ಟೆ ಲಿಂಗಪ್ಪಾಚಾರ್ಯ ಕಲ್ಯಾಣ ಮಂಟಪದಲ್ಲಿ ನಡೆಯಿತು. ಸಮಾರಂಭದಲ್ಲಿ ಆಶೀರ್ವಚನ ನೀಡಿದ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠ ಪಡುಕುತ್ಯಾರು ಇಲ್ಲಿನ ಪೀಠಾಧಿಪತಿ ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿ “ನಾವು ಯಾವ ವ್ಯಕ್ತಿಗಳ ಸ್ನೇಹವನ್ನು ಅಥವಾ ಸಂಗವನ್ನು ಹೊಂದಿರುತ್ತೇವೆಯೋ ಅದುವೇ ನಮ್ಮ ವ್ಯಕ್ತಿತ್ವ ಹಾಗೂ ಬದುಕನ್ನು ನಿರ್ಧರಿಸುತ್ತದೆ. ಬೀಜವೊಂದನ್ನು ಭೂಮಿಯಲ್ಲಿ ಬಿತ್ತಿದಾಗ ಅದು ಕೊಳೆತು ಹೋಗುವುದನ್ನು ‘ವಿಕಾರ’ ಎನ್ನಬಹುದು. ಒಂದು ವೇಳೆ ಅದೇ ಬೀಜ ಚಿಗುರಿಕೊಂಡರೆ ಅದನ್ನೇ ‘ವಿಕಾಸ’ ಎನ್ನುತ್ತೇವೆ. ಶಿಬಿರದಲ್ಲಿ ಶಿಬಿರಾರ್ಥಿಗಳು ಪಡೆದ ಜ್ಞಾನ ಅವರೆಲ್ಲರ ಬುದ್ಧಿ ವಿಕಾಸಕ್ಕೆ ಹಾಗೂ ಬದುಕಿನ ವಿಕಾಸಕ್ಕೆ ನಾಂದಿಯಾಗಲಿ.” ಎಂದು ಹರಸಿದರು. ಅತಿಥಿಯಾಗಿ ಆಗಮಿಸಿದ ವೆಂಕಟರಮಣ ಆಚಾರ್ಯ ಮಾತನಾಡಿ “ಮಕ್ಕಳಲ್ಲಿ ಜ್ಞಾನ ಮತ್ತು ತಂತ್ರಜ್ಞಾನ ಮಿಳಿತಗೊಂಡಾಗ ಅದ್ಭುತವಾದ…

Read More

ಮಂಗಳೂರು: ಮೈಸೂರು ರಂಗಾಯಣದ 2023-24 ನೆ ಸಾಲಿನ ಭಾರತೀಯ  ರಂಗಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳ ಅಭಿನಯ ಮೂರು ನಾಟಕ ಗಳ ಪ್ರದರ್ಶನದ ನಾಂದಿ ನಾಟಕೋತ್ಸವವು, ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಸಹೋದಯ ಸಭಾಂಗಣದಲ್ಲಿ ಮೇ 24 ರಿಂದ 26 ರ ತನಕ ಪ್ರತಿದಿನ ಸಂಜೆ 7.00 ಕ್ಕೆ ನಡೆಯಲಿದೆ ಅರೆಹೊಳೆ ಪ್ರತಿಷ್ಠಾನ ಆಯೋಜಿಸಿರುವ ಈ ನಾಟಕೋತ್ಸವವು, ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾಲಯದ ರಂಗ ಅಧ್ಯಯನ ಕೇಂದ್ರದ ಸಹಯೋಗದೊಂದಿಗೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲಾಭಿ (ರಿ) ಮಂಗಳೂರು ಸಹಕಾರದಲ್ಲಿ ನಡೆಯಲಿದೆ. 24 ರಂದು ಹೈಸ್ನಾಂ ತೊಂಬಾ ರಂಗ ಪಠ್ಯ, ನಿರ್ದೇಶನದ ವೃಕ್ಷರಾಜ, 25 ರಂದು ಕೀರ್ತಿನಾಥ ಕುರ್ತುಕೋಟಿ ರಚನೆಯ ಮಂಜುನಾಥ ಬಡಿಗೇರ ನಿರ್ದೇಶನದ ಆ ಮನಿ ಹಾಗೂ 26 ರಂದು ವಿಲಿಯಮ್ ಶೇಕ್ಸ್ ಪಿಯರ್ ರಚನೆಯ ವೆನಿಸಿನ ವ್ಯಾಪಾರ ನಾಟಕ ಅಮಿತ್ ರೆಡ್ಡಿ ನಿರ್ದೇಶನದ ನಾಟಕ ಪ್ರದರ್ಶನಗೊಳ್ಳಲಿದೆ. ಈ ಎಲ್ಲ ನಾಟಕಗಳಿಗೂ ಉಚಿತ ಪ್ರವೇಶ ಇದೆ ಎಂದು ರಂಗಾಯಣದ ಮುಖ್ಯಸ್ಥ ರಾಮನಾಥ್ ಮತ್ತು…

Read More

ಕರಾವಳಿಯ ಸರ್ವಶ್ರೇಷ್ಠ ಕಲೆ ಯಕ್ಷಗಾನ, ಆಕರ್ಷಕ ವೇಷಭೂಷಣ, ಸಂಗೀತ, ನಾಟ್ಯ, ಅಭಿನಯ , ಮಾತುಗಾರಿಕೆಯಿಂದ ಕೂಡಿದ ಸರ್ವಾಂಗ ಸುಂದರ ಕಲೆಗೆ ವಿಶ್ವದೆಲ್ಲೆಡೆಯ ಜನ ಮಾರು ಹೋಗಿದ್ದಾರೆ. ಇಂತಹ ಮಹೋನ್ನತ ಕಲೆಯ ತಮ್ಮ ಪ್ರತಿಭೆಯನ್ನು ಪ್ರದರ್ಶನ ನೀಡಿತ್ತಿರುವ ಕಲಾವಿದ ಆದಿತ್ಯ ಹೆಗಡೆ ಯಡೂರು. ಹೊಸನಗರ ತಾಲೂಕು ನಿಟ್ಟೂರಿನ ಮಹಾಬಲಗಿರಿ ಹಾಗೂ ಶ್ರೀದೇವಿ ಇವರ ಮಗನಾಗಿ 16.05.1996 ರಂದು ಜನನ. ಕರೆಸ್ಪಾಂಡೆನ್ಸ್ ನಲ್ಲಿ ದ್ವಿತೀಯ ವರ್ಷದ B.A ವ್ಯಾಸಂಗವನ್ನು ಮಾಡುತ್ತಿದ್ದಾರೆ. ಮಾವ, ಅಜ್ಜ, ಚಿಕ್ಕಪ್ಪಂದಿರಿಂದ ಹವ್ಯಾಸಿ ಯಕ್ಷಗಾನ ಕಲಾವಿದರಾದದಿಂದ ಆದಿತ್ಯ ಅವರು ಯಕ್ಷಗಾನ ರಂಗಕ್ಕೆ ಬರಲು ಪ್ರೇರಣೆಯಾಯಿತು. ಡಿ.ಎಸ್ ಸುಬ್ರಹ್ಮಣ್ಯ ಮೂರ್ತಿ ನಿಟ್ಟೂರು, ಸತ್ಯನಾರಾಯಣ ಆಚಾರ್ ಮೇಳಿಗೆ(ಹೆಜ್ಜೆ), ಉದಯ ಹೊಸಾಳ, ಸದಾನಂದ ಐತಾಳ್ ಇವರ ಯಕ್ಷಗಾನ ಗುರುಗಳು. ಯಕ್ಷಗಾನ ರಂಗದ ಎಲ್ಲಾ ಪ್ರಸಂಗ ಹಾಗೂ ವೇಷಗಳು ಇವರ ನೆಚ್ಚಿನನದು. ಹಿರಿಯ ಕಲಾವಿದರಲ್ಲಿ ಕೇಳಿ ರಂಗಕ್ಕೆ ಹೋಗುವ ಮೊದಲು ಪಾತ್ರದ ಬಗ್ಗೆ ತಯಾರಿಯನ್ನು ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಾರೆ ಆದಿತ್ಯ ಹೆಗಡೆ ಯಡೂರು. ಯಕ್ಷಗಾನದ ಇಂದಿನ ಸ್ಥಿತಿ…

Read More