08-03-2023, ಧರ್ಮಸ್ಥಳ: ‘ಸಾಹಿತ್ಯವನ್ನು ಪೋಷಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳ ಪಾಲೂ ಬಹುಮುಖ್ಯ’- ಡಾ.ಹೇಮಾವತಿ.ವೀ.ಹೆಗ್ಗಡೆ
‘ಬರೆಹಗಾರರನ್ನು ಪ್ರೋತ್ಸಾಹಿಸುವುದರಲ್ಲಿ ಸ್ಥಳೀಯ ದಿನಪತ್ರಿಕೆಗಳೂ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಅಂತರ್ಜಾಲ ಲಭ್ಯವಾಗದ ಗ್ರಾಮೀಣ ಭಾಗಗಳಲ್ಲಿ ಓದಿಗೆ ಲಭ್ಯವಾಗುವ ಸ್ಥಳೀಯ ಪತ್ರಿಕೆಗಳು ಸುತ್ತಮುತ್ತಲಿನ ಘಟನೆಗಳ ಬಗ್ಗೆ ಮಾಹಿತಿಗಳನ್ನು ಕೊಡುವುದಲ್ಲದೆ ಜನರನ್ನು ಮತ್ತಷ್ಟು ಆತ್ಮೀಯರಾಗಲು ಸಹಕಾರಿಯಾಗುತ್ತದೆ. ಆದುದರಿಂದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗುವ ಅಂಕಣಗಳು ಓದುಗರನ್ನು ಹೆಚ್ಚು ತಟ್ಟಬಲ್ಲದು. ಸ್ತ್ರೀಪರ ಚಿಂತನೆಗಳು ಅಂಕಣಗಳು ಸ್ಥಳೀಯ ಪತ್ರಿಕೆಗಳಲ್ಲಿ ಹೆಚ್ಚು ಪ್ರಕಟವಾಗಬೇಕಿದೆ’ ಎಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಸಂದರ್ಭದಲ್ಲಿ ಲೇಖಕಿ ಶ್ರೀಮತಿ ಅಕ್ಷತಾ ರಾಜ್ ಪೆರ್ಲ ಅವರು ಬರೆದ ಕರಾವಳಿ ಲೇಖಕಿಯರ ವಾಚಕಿಯರ ಸಂಘದ ಚಂದ್ರಭಾಗಿ ರೈ ದತ್ತಿನಿಧಿ ಪುರಸ್ಕೃತ ಲೇಖನ ಸಂಕಲನ ‘ಅವಲಕ್ಕಿ ಪವಲಕ್ಕಿ’ ಬಿಡುಗಡೆ ಹಾಗೂ ಸಾಹಿತ್ಯ ಪ್ರಕಾಶನದ ಲಾಂಛನ ಅನಾವರಣಗೊಳಿಸಿ ನುಡಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಬೀಡಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿ ಅಕ್ಷತಾರಾಜ್ ಪೆರ್ಲ, ಪತ್ರಕರ್ತ ರಾಜೇಶ್ ಶೆಟ್ಟಿ ದೋಟ, ರೇಡಿಯೋ ನಿನಾದ ಸಮುದಾಯ ಬಾನುಲಿಯ ಕಾರ್ಯಕ್ರಮ ಸಂಯೋಜಕರಾದ ವಿ.ಕೆ ಕಡಬ, ನಿರೂಪಕ ಪ್ರವೀಣ್ ಅಮ್ಮೆಂಬಳ, ಡಾ.ಮಹಾವೀರ ಅಜ್ರಿ, ಸುನೀಲ್ ಶೆಟ್ಟಿ ಹಾಗೂ ಲೇಖಕಿಯ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

