‘ಮಾತಿನ ಗಾರುಡಿ’,’ ಶಬ್ದ ಬ್ರಹ್ಮ’ , ‘ಮಂತ್ರ ಶಕ್ತಿಯ ವಾಗ್ಮಿ ‘, ಎಂಬ ವಿಶೇಷಣಗಳಿಂದ ಪ್ರಸಿದ್ಧರಾಗಿ, ವಿಶ್ವದ ಶ್ರೇಷ್ಠ ಕವಿಗಳ ಸಾಲಿನಲ್ಲಿ ನಿಲ್ಲಬಲ್ಲವರು, ಅಂಬಿಕಾತನಯದತ್ತ ಎಂಬ ಕಾವ್ಯನಾಮದಿಂದ ಪ್ರಸಿದ್ಧರಾದ ದತ್ತಾತ್ರೇಯ ರಾಮಚಂದ್ರ ಬೇಂದ್ರೆಯವರು.
ಸುಡುವ ಬಿಸಿಲು, ಕಿತ್ತು ಹೋದ ಚಪ್ಪಲಿಯೊಂದಿಗೆ ಚಪ್ಪಲಿ ಹೊಲಿಯುವುದಕ್ಕಾಗಿ ಮೋಚಿಯಲ್ಲಿಗೆ ಬೇಂದ್ರೆ ಬಂದಾಗ, ಕಿತ್ತುಹೋದ ಚಪ್ಪಲಿ ಹೊಲಿಯುವವರೆಗೆ ಪಾದ ಸುಡದಿರಲೆಂದು ಅಡಿಗಿಡಲು ಮೋಚಿ ಬೇರೆಚಪ್ಪಲಿಯನ್ನು ನೀಡಿದ. ಆದರೆ ದಿನವಿಡೀ ಉರಿಬಿಸಿಲಿನಲ್ಲಿ ಕುಳಿತು ಚಪ್ಪಲಿ ಹೊಲಿಯುವ ಮೋಚಿಯನ್ನು ಕಂಡು ಕಣ್ಣು ತುಂಬಿಕೊಂಡ ಬೇಂದ್ರೆಯವರು. ಚಪ್ಪಲಿ ಹೊಲಿದು ಮುಗಿಸುವವರೆಗೆ ತನ್ನ ಛತ್ರಿಯನ್ನು ಆತನಿಗೆ ಹಿಡಿದು ಸರಳತೆಯನ್ನು ತ್ರಿಕರಣ ಪೂರ್ವಕವಾಗಿ ಮೆರೆದರು. ನವೋದಯದ ಪ್ರಧಾನ ಕವಿಗಳಲ್ಲೊಬ್ಬರಾದ ಬೇಂದ್ರೆಯವರು ಅಗ್ನಿ ಪರ್ವತದಂತಹ ದುಃಖವನ್ನು ಒಳಗೆ ಅದುಮಿಕೊಂಡು, ನಗುವ, ನಗಿಸುವ, ನಗಿಸಿ ನಗುತ ಬಾಳುವ ಎದೆಗಾರಿಕೆಯವರು. ಜೀವನದಲ್ಲಿ ಹೂವಿನಂತೆ ಚೆಲುವು ತೋರಿ, ಪರಿಮಳ ಬೀರಿ, ವಿಧಿಯ ಪರೀಕ್ಷೆಗೆ ಚೆಂಡಿನಂತೆ ಪುಟಿದೆದ್ದರೂ, ಅಂತರಂಗದಾ ಮೃದಂಗ ತೋಮ್ ತನನ ನುಡಿಸಿದಾಗ, ಚಿತ್ತ ತಾಳ ಬಾರಿಸಿ, ನೆನಪು ತಂತಿ ಮೀಟಿದಾಗ ಹೊರ ಹೊಮ್ಮಿದ್ದು ಸಾಹಿತ್ಯ ಸುಧೆಯ ರಸದೌತಣ. ಇಂತಹ ಮಹಾನ್ ಚೇತನಕ್ಕೆ ಅವರ ಜನ್ಮ ದಿನದಂದು ಹೃದಯ ಪೂರ್ವಕ ನಮನಗಳು.
Subscribe to Updates
Get the latest creative news from FooBar about art, design and business.
ತನ್ನಾತ್ಮ ತನ್ನನ್ನು ತೊರೆಯುವ ಮುನ್ನ ಎಲ್ಲವನ್ನೂ ತೊರೆದು ಬದುಕಿದ ಭುವನದ ಭಾಗ್ಯ “ಬೇಂದ್ರೆ”
Previous Articleತುಳು ಪಾಡ್ದನ ಕಲಿಕಾ ಕಮ್ಮಟ