ಪುತ್ತೂರು : ಶ್ರೀ ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ಜನಪ್ರಿಯ ಸರಣಿ ನೃತ್ಯಾಂತರಂಗದ 143ನೇ ಆವೃತ್ತಿ ದಿನಾಂಕ 11 ಜುಲೈ 2026ರಂದು ಪುತ್ತೂರಿನ ಶಶಿಶಂಕರ ಸಭಾಂಗಣದಲ್ಲಿ ನಡೆಯಿತು.


ಕುಂದಾಪುರದ ನೃತ್ಯಗುರು ಶ್ರೀಮತಿ ಪ್ರವಿತಾ ಅಶೋಕ್ ಇವರ ಶಿಷ್ಯೆಯಾದ ಕುಮಾರಿ ಸನ್ವಿತಾ ಶ್ರೀಧರ ಪೂಜಾರಿಯವರ ಭರತನಾಟ್ಯ ಕಾರ್ಯಕ್ರಮವು ಈ ಸರಣಿಯಲ್ಲಿ ಬಹಳ ಅದ್ಭುತವಾಗಿ ನಡೆಯಿತು. ಕಿರಿಯ ಪ್ರಾಯದಲ್ಲಿ ಹಿರಿಯ ಸಾಧನೆ ಮಾಡಿದ ಈ ಕಲಾವಿದೆ ಸುಮಾರು 45 ನಿಮಿಷಗಳ ಕಾಲ ಬಹಳ ಅಚ್ಚುಕಟ್ಟು ಮತ್ತು ಶಿಸ್ತಿನ ನೃತ್ಯ ಪ್ರಸ್ತುತಿಗೈದರು. ಕಾರ್ಯಕ್ರಮಕ್ಕೆ ಪುತ್ತೂರಿನ ಯುವ ಹೂಡಿಕೆ ಸಲಹೆಗಾರರಾದ ಶ್ರೀ ಪವನ್ ಎಸ್. ಭಟ್ ಹಾಗೂ ಅವರ ಪತ್ನಿ ವಿದುಷಿ ಅಪೂರ್ವ ಗೌರಿ ಆಗಮಿಸಿ ಮೆಚ್ಚುಗೆ ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ನಿರೂಪಣೆಯಲ್ಲಿ ಕುಮಾರಿ ಮಾತಂಗಿ, ಪ್ರಾರ್ಥನೆಯಲ್ಲಿ ಕುಮಾರಿಯರಾದ ಭಾರ್ಗವಿ ಶೆಣೈ, ತಶ್ವಿ, ಮಾನ್ವಿ, ಯಶ್ವಿ ಯು. ನಾಯ್ಕ್ , ಉತ್ಸವಿ, ನಯೋಮಿ ಹಾಗೆಯೇ ಶಂಖ ನಾದದಲ್ಲಿ ಶೌರಿ ಕೃಷ್ಣ, ಓಂಕಾರ ನಾದದಲ್ಲಿ ವಿದುಷಿ ಪ್ರೀತಿಕಲಾ, ಪಂಚಾಂಗ ವಾಚನದಲ್ಲಿ ಕುಮಾರಿ ಧೃತಿ, ವಿಷಯ ಮಂಡನೆಯಲ್ಲಿ ಹಿಮನೀಶ್, ಅಭ್ಯಾಗತರ ಪರಿಚಯದಲ್ಲಿ ಕುಮಾರಿ ಪ್ರೇರಣಾ ಜಲದುರ್ಗ, ಕಲಾವಿದರ ಪರಿಚಯದಲ್ಲಿ ಕುಮಾರಿ ಸನ್ನಿಧಿ ಎಸ್. ಕಾರ್ಯ ನಿರ್ವಹಿಸಿದರು. ಗುರು ಪ್ರವಿತಾ ಅಶೋಕ್ ಹಾಗೂ ದೀಪಕ್ ಕುಮಾರ್ ರವರ ಹಿರಿಯ ವಿದ್ಯಾರ್ಥಿನಿ ವಿದುಷಿ ತೇಜಸ್ವಿನಿ ಬಿ. ಇವರು ಅಭಿಪ್ರಾಯ ಹಂಚಿಕೊಂಡರು. ಸಂಸ್ಥೆಯ ನಿರ್ದೇಶಕರಾದ ವಿದ್ವಾನ್ ದೀಪಕ್ ಕುಮಾರ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.


ಫೋಟೋ : ಶ್ಯಾಮ್ ಪ್ರಸಾದ್ ಪಾರೆ
