Subscribe to Updates

    Get the latest creative news from FooBar about art, design and business.

    What's Hot

    ಮೈಸೂರಿನ ರಂಗಯಾನ ಟ್ರಸ್ಟ್ ಸಂಸ್ಥೆಯಿಂದ ರಂಗಭೂಮಿ ಡಿಪ್ಲೋಮಾಕ್ಕೆ ಅರ್ಜಿ ಆಹ್ವಾನ

    June 7, 2025

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    Article | The End of an Era in the Malayalam Literary World

    June 7, 2025
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    Home » ಬಂಟ್ವಾಳದಲ್ಲಿ ‘ಜೀವಸತ್ವ’ ಒಗಟು ಸಂಕಲನದ ಕೃತಿ ಲೋಕಾರ್ಪಣೆ
    Book Release

    ಬಂಟ್ವಾಳದಲ್ಲಿ ‘ಜೀವಸತ್ವ’ ಒಗಟು ಸಂಕಲನದ ಕೃತಿ ಲೋಕಾರ್ಪಣೆ

    June 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ವಿಟ್ಲ : ಬಂಟ್ವಾಳ ತಾಲೂಕಿನ ವಿಟ್ಲದ ಚಂದಳಿಕೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ಹಿರಿಯ ಕವಿ ಭಾಸ್ಕರ ಆಡ್ವಳ ಇವರ ‘ಜೀವಸತ್ವ’ ವಿನೂತನ ‘ಜ್ಞಾನದ ಕೆಕೆ’ (ಹೃದಯವಂತಿಕೆ, ಬುದ್ಧಿವಂತಿಕೆ) ಒಗಟಿನ ಸಂಕಲನವು ದಿನಾಂಕ 08-06-2024ರಂದು ಲೋಕಾರ್ಪಣೆಗೊಂಡಿತು.

    ಈ ಕಾರ್ಯಕ್ರಮದಲ್ಲಿ ಕೃತಿ ಬಿಡುಗಡೆ ಮಾಡಿದ ವ್ಯಂಗ್ಯಚಿತ್ರಕಾರ ವಿರಾಜ್ ಅಡೂರು ಇವರು ಮಾತನಾಡಿ “ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣ ಏಕಾಗ್ರತೆಯೂ ಬಲವಾಗುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಳಿಗಾಗಿ ಒಗಟುಗಳನ್ನು ರಚಿಸಿ, ಸ್ಪರ್ಧಾತ್ಮಕ ಮನೋಭಾವದಲ್ಲಿ ಉತ್ತರ ಕಂಡುಕೊಳ್ಳುತ್ತಿದ್ದರು. ಒಗಟುಗಳು ಬುದ್ಧಿವಂತಿಕೆಯ ಜೀವಸತ್ವ” ಎಂದು ಹೇಳಿದರು.

    ಬಂಟ್ವಾಳ ಕನ್ನಡ ಸಾಹಿತ್ಯ ಪರಿಷತ್ತಿನ ಮಕ್ಕಳ ಕಲಾಲೋಕ ಅಧ್ಯಕ್ಷ ರಮೇಶ ಎಂ. ಬಾಯಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೃತಿಕಾರರಾದ ಭಾಸ್ಕರ ಆಡ್ವಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಶಿಕ್ಷಕ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿ, ಶಿಕ್ಷಕ ವೆಂಕಟೇಶ್ವರ ಭಟ್ ವಂದಿಸಿ, ಶಿಕ್ಷಕಿ ರೇಶ್ಮಾ ಲೂಯಿಸ್ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ನಡೆದ ಒಗಟಿಗೆ ಉತ್ತರ ನೀಡುವ ಸಂವಾದದಲ್ಲಿ ಶಾಲೆಯ ಮಕ್ಕಳು ಉತ್ಸಾಹದಿಂದ ಪಾಲ್ಗೊಂಡರು.

    Share. Facebook Twitter Pinterest LinkedIn Tumblr WhatsApp Email
    Previous Articleಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಕನ್ನಡ ನಾಟಕ ಪ್ರದರ್ಶನ | ಜೂನ್ 12 ಮತ್ತು 13
    Next Article ಸಾಹಿತ್ಯ ಪುರಸ್ಕಾರಕ್ಕೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31
    roovari

    Add Comment Cancel Reply


    Related Posts

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸಾಹಿತಿಗಳ ಜನ್ಮದಿನಾಚರಣೆ

    June 7, 2025

    Article | The End of an Era in the Malayalam Literary World

    June 7, 2025

    ಪ್ರೊ. ಕು.ಶಿ. ಹರಿದಾಸ ಭಟ್ ಶತಮಾನೋತ್ಸವ ಜಾನಪದ ಪ್ರಶಸ್ತಿ ಹಾಗೂ ಪ್ರೊ. ಕು.ಶಿ. ಹರಿದಾಸ ಭಟ್ ಜಾನಪದ ಪ್ರಶಸ್ತಿ ಪ್ರಕಟ

    June 7, 2025

    ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ 105ನೇ ‘ಸಾಹಿತ್ಯ ಅಭಿರುಚಿ ಕಾರ್ಯಕ್ರಮ’ | ಜೂನ್ 10

    June 7, 2025

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2025 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.