ಮೈಸೂರು : ಕರ್ನಾಟಕ ಸರ್ಕಾರದ ರಂಗಾಯಣ ಮೈಸೂರು ಇದರ ವತಿಯಿಂದ ಸಿ.ಜಿ.ಕೆ. ನೆನಪಿನ ; ಗ್ರೀಷ್ಮ ರಂಗೋತ್ಸವ -2026’ವನ್ನು ದಿನಾಂಕ 05 ಜುಲೈ 2026ರಿಂದ 02 ಆಗಸ್ಟ್ 2026ರವರೆಗೆ ಪ್ರತಿ ಭಾನುವಾರ ಸಂಜೆ 6-30 ಗಂಟೆಗೆ ಮೈಸೂರು ರಂಗಾಯಣ ಭೂಮಿಗೀತ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.
ಹಿರಿಯ ರಂಗಕರ್ಮಿಗಳಾದ ಪ್ರಸಾದ್ ಕುಂದೂರು ಇವರು ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಿದ್ದು, ರಂಗಾಯಣ ಮೈಸೂರು ಇದರ ನಿರ್ದೇಶಕರಾದ ಸತೀಶ್ ತಿಪಟೂರು ಇವರು ಅಧ್ಯಕ್ಷತೆ ವಹಿಸಲಿದ್ದಾರೆ.
ದಿನಾಂಕ 05 ಜುಲೈ 2026ರಂದು ಮೈಸೂರಿನ ನಿರಂತರ ರಂಗ ತಂಡದವರು ಮಹೇಶ್ ಎಲಕುಂಚವಾರ್ ಇವರ ‘ಪಾರ್ಟಿ’ ನಾಟಕವನ್ನು ಚಿದಂಬರ ರಾವ್ ಜಂಬೆ ಇವರ ನಿರ್ದೇಶನದಲ್ಲಿ ಅಭಿನಯಿಸಲಿದ್ದಾರೆ. ದಿನಾಂಕ 12 ಜುಲೈ 2026ರಂದು ಮೈಸೂರಿನ ಸಂಚಲನ ತಂಡದವರು ಶ್ವೇತಾ ಶ್ರೀನಿವಾಸ್ ಮತ್ತು ಆಸಿಫ್ ಕ್ಷತ್ರಿಯ ಇವರ ನಿರ್ದೇಶನದಲ್ಲಿ ‘ಎರಡೆರಡ್ಲಾ ಐದು’ ನಾಟಕ ಪ್ರದರ್ಶನ ನೀಡಲಿದ್ದಾರೆ. ದಿನಾಂಕ 19 ಜುಲೈ 2026ರಂದು ಮೈಸೂರಿನ ಸಮತೆಂತೋ ತಂಡದವರು ಎಚ್.ಎಸ್. ಉಮೇಶ್ ಇವರ ನಿರ್ದೇಶನದಲ್ಲಿ ‘ದುಡ್ಡಿನ ದೇವರು’ ನಾಟಕ ಪ್ರದರ್ಶಿಸಲಿದ್ದಾರೆ. ದಿನಾಂಕ 26 ಜುಲೈ 2026ರಂದು ಬೆಂಗಳೂರಿನ ಸಂಚಾರಿ ಥಿಯೇಟರ್ ತಂಡದವರು ಮಂಗಳಾ ಎನ್. ಇವರ ನಿರ್ದೇಶನದಲ್ಲಿ ‘ರೊಶೊಮನ್’ ಹಾಗೂ ದಿನಾಂಕ 02 ಆಗಸ್ಟ್ 2026ರಂದು ಮೈಸೂರಿನ ರಂಗಸಮೂಹ ತಂಡ ಅಮಿತ್ ಜೆ. ರೆಡ್ಡಿ ಇವರ ನಿರ್ದೇಶನದಲ್ಲಿ ‘ಘಾಟಿ’ ನಾಟಕ ಪ್ರದರ್ಶನ ನಡೆಯಲಿದೆ.


