Subscribe to Updates

    Get the latest creative news from FooBar about art, design and business.

    What's Hot

    ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ‘ಕನ್ನಡ ಝೇಂಕಾರ’

    April 27, 2026

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ‘ಮಹಾನಾಯಕ ಕವಿಗೋಷ್ಠಿ’

    April 27, 2026

    ರಂಗ ನಿರ್ದೇಶಕ ಯಶವಂತ ಡಿ.ಎಸ್. ಶಕ್ತಿನಗರ ಇವರಿಗೆ ಸಮ್ಮಾನ

    April 27, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಅಮೋಘವಾಗಿ ಪ್ರಸ್ತುತಗೊಂಡ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಭರತನಾಟ್ಯ
    Bharathanatya

    ಅಮೋಘವಾಗಿ ಪ್ರಸ್ತುತಗೊಂಡ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಭರತನಾಟ್ಯ

    April 27, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಸುರತ್ಕಲ್‌ನ ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ನಾಗರಿಕ ಸಲಹಾ ಸಮಿತಿ ಸಹಯೋಗದಲ್ಲಿ ಸುರತ್ಕಲ್‌ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ದಿನಾಂಕ 25 ಏಪ್ರಿಲ್ 2026ರಂದು ಆಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ಮತ್ತು ಭರತನಾಟ್ಯ ಕಾರ್ಯಕ್ರಮವು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಚೆನ್ನೈಯ ಹಿರಿಯ ಸಂಗೀತ ಕಲಾವಿದ ವಿದ್ವಾನ್ ಶ್ರೀಕಾಂತ್ ಗೋಪಾಲಕೃಷ್ಣನ್ ಇವರು ಮಾತನಾಡಿ “ಶಾಸ್ತ್ರೀಯ ಸಂಗೀತ ಮತ್ತು ಶಾಸ್ತ್ರೀಯ ನೃತ್ಯ ದೈವಿಕ ಕಲೆಗಳಾಗಿದ್ದು ಹಿರಿಯ ಕಲಾವಿದರು ಕಿರಿಯ ತಲೆಮಾರಿಗೆ ವರ್ಗಾಯಿಸುವ ಕಾರ್ಯ ಮಾಡಬೇಕು. ಅವಿಭಜಿತ ದಕ್ಷಿಣ ಕನ್ನಡದಲ್ಲಿ ಕಳೆದ ಕೆಲವು ದಶಕಗಳಿಂದ ಪ್ರತಿಭಾವಂತ ಯುವ ಕಲಾವಿದರು ಪ್ರಕಾಶಕ್ಕೆ ಬರುತ್ತಿದ್ದು, ಸಂಗೀತ ಮತ್ತು ನೃತ್ಯ ಕಲಾ ಸಂಘಟಕರ ಪಾತ್ರ ಹಿರಿದಾಗಿದೆ. ಪ್ರತಿಭವಂತ ಯುವ ಕಲಾವಿದರಿಗೆ ಅವಕಾಶಗಳನ್ನು ನೀಡುವ ಮೂಲಕ ಸಾಂಸ್ಕೃತಿಕ ಸಂಘಟನೆಗಳು ಸಂಸ್ಕೃತಿ ಪ್ರಚಾರದ ಕಾರ್ಯ ಮಾಡಬಹುದಾಗಿದೆ” ಎಂದು ಹೇಳಿದರು.

    ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಗೌರವಾಧ್ಯಕ್ಷ ಕರ್ಮಯೋಗಿ ಹರಿಕೃಷ್ಣ ಪುನರೂರು ಶುಭ ಹಾರೈಸಿದರು. ಶ್ರೀ ಕ್ಷೇತ್ರ ಎಡನೀರು ಮಠದ ರಾಜೇಂದ್ರ ಕಲ್ಲೂರಾಯ ಇವರು ಕಲಾವಿದ ಶ್ರೀಕಾಂತ್ ಗೋಪಾಲಕೃಷ್ಣನ್ ಇವರನ್ನು ಗೌರವಿಸಿದರು. ಹಿರಿಯ ಕಲಾವಿದ ವಿದ್ವಾನ್ ಚಂದ್ರಶೇಖರ ನಾವಡ, ನಾಗರಿಕ ಸಲಹಾ ಸಮಿತಿಯ ಸದಸ್ಯ ಕೃಷ್ಣಮೂರ್ತಿ ಪಿ., ನೃತ್ಯ ವಿದುಷಿ ಪ್ರವಿತಾ ಅಶೋಕ್, ಜಯಶ್ರೀ ಆರ್. ಭಟ್, ವಿಭು ರಾವ್ ಉಪಸ್ಥಿತರಿದ್ದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದರಾವ್ ಸ್ವಾಗತಿಸಿದರು. ಶೋಭಿತ ಭಟ್ ಕಿನ್ನಿಗೋಳಿ ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಿತು. ಮಹತೀ ಕೆ. ಕಾರ್ಕಳ ವಯಲಿನ್‌ನಲ್ಲಿ ಸಂದೀಪ್ ರಾಮಮೂರ್ತಿ ಮೃದಂಗದಲ್ಲಿ ಮತ್ತು ವಿದ್ವತ್ ರಾವ್ ತಂಬೂರದಲ್ಲಿ ಸಹಕರಿಸಿದರು. ಗಾರ್ಗಿದೇವಿ ಕುಂದಾಪುರ ಇವರು ಭರತನಾಟ್ಯ ಪ್ರದರ್ಶನ ನೀಡಿದರು.

    baikady bharatanatyam dance Music roovari
    Share. Facebook Twitter Pinterest LinkedIn Tumblr WhatsApp Email
    Previous Articleಪುಸ್ತಕ ವಿಮರ್ಶೆ | ಸಾಂಸ್ಕೃತಿಕ ಪುನರ್ ನಿರ್ಮಾಣದ ಆಶಯ
    Next Article ಶ್ರೀ ಆಂಜನೇಯ ಮಂತ್ರಾಲಯದ ವಠಾರದಲ್ಲಿ ಪಾಕ್ಷಿಕ ತಾಳಮದ್ದಳೆ
    roovari

    Add Comment Cancel Reply


    Related Posts

    ಕರ್ನಾಟಕ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನದಿಂದ ‘ಕನ್ನಡ ಝೇಂಕಾರ’

    April 27, 2026

    ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ವತಿಯಿಂದ ರಾಜ್ಯಮಟ್ಟದ ‘ಮಹಾನಾಯಕ ಕವಿಗೋಷ್ಠಿ’

    April 27, 2026

    ರಂಗ ನಿರ್ದೇಶಕ ಯಶವಂತ ಡಿ.ಎಸ್. ಶಕ್ತಿನಗರ ಇವರಿಗೆ ಸಮ್ಮಾನ

    April 27, 2026

    ಕಡೆಂಗೋಡ್ಲು ಕಾವ್ಯ ಪ್ರಶಸ್ತಿಗೆ ‘ಗೋಡೆಗೆ ನೇತುಬಿದ್ದ ಭೂಪಟ’ ಕವನ ಸಂಕಲನ ಆಯ್ಕೆ

    April 27, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.