ಪುತ್ತೂರು : ಶ್ರೀ ಆಂಜನೇಯ ಯಕ್ಷಗಾನ ಕಲಾಸಂಘ ಬೊಳುವಾರು ಪುತ್ತೂರು ಇದರ ಪಾಕ್ಷಿಕ ತಾಳಮದ್ದಳೆ ದಿನಾಂಕ 25 ಏಪ್ರಿಲ್ 2026ನೇ ಶನಿವಾರ ಶ್ರೀ ಆಂಜನೇಯ ಮಂತ್ರಾಲಯದ ವಠಾರದಲ್ಲಿ ‘ಕರ್ಣಾರ್ಜುನ’ ಪ್ರಸಂಗದೊಂದಿಗೆ ನಡೆಯಿತು.
ಹಿಮ್ಮೇಳದಲ್ಲಿ ಹೊಸಮೂಲೆ ಗಣೇಶ್ ಭಟ್, ಲಕ್ಷ್ಮೀನಾರಾಯಣ ಭಟ್ ಭಟ್ಯಮೂಲೆ, ಆನಂದ ಸವಣೂರು, ನಿತೀಶ್ ಎಂಕಣ್ಣ ಮೂಲೆ, ಮುರಳಿಧರ ಕಲ್ಲೂರಾಯ, ಸಮರ್ಥ ವಿಷ್ಣು ಕದಂಬಳಿಕೆ, ಅನೀಶ್ ಕೃಷ್ಣ ಫುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಕರ್ಣ (ಗುಂಡ್ಯಡ್ಕ ಈಶ್ವರ ಭಟ್), ಶ್ರೀ ಕೃಷ್ಣ (ಭಾಸ್ಕರ್ ಬಾರ್ಯ), ಶಲ್ಯ (ಗುಡ್ಡಪ್ಪ ಬಲ್ಯ), ಅರ್ಜುನ (ಮಾಂಬಾಡಿ ವೇಣುಗೋಪಾಲ್ ಭಟ್), ಅಶ್ವಸೇನ (ಪ್ರೇಮಲತಾ ರಾವ್) ಸಹಕರಿಸಿದರು. ವೇಣುಗೋಪಾಲ್ ಭಟ್ ಮಾಂಬಾಡಿ ಪ್ರಾಯೋಜಿಸಿದರು.

