Subscribe to Updates

    Get the latest creative news from FooBar about art, design and business.

    What's Hot

    ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17

    October 16, 2026

    ಯಕ್ಷ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ನಿಧನ

    October 16, 2026

    ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’

    October 16, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ದಸರಾ ಬಹುಭಾಷಾ ಕವಿಗೋಷ್ಠಿ’
    Literature

    ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ‘ದಸರಾ ಬಹುಭಾಷಾ ಕವಿಗೋಷ್ಠಿ’

    October 16, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ವತಿಯಿಂದ ತುಳುಭವನದಲ್ಲಿ ತುಳು ಪರಿಷತ್ ಹಾಗೂ ಮಯೂರಿ ಫೌಂಡೇಶನ್ ಸಹಯೋಗದಲ್ಲಿ ಆರನೇ ವರ್ಷದ ದಸರಾ ಬಹುಭಾಷಾ ಕವಿಗೋಷ್ಠಿಯು ದಿನಾಂಕ 15 ಅಕ್ಟೋಬರ್ 2026ರಂದು ಮಂಗಳೂರಿನ ತುಳು ಭವನದಲ್ಲಿ ನಡೆಯಿತು.

    ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಲೇಖಕ ಡಾ.ವಾಸುದೇವ ಬೆಳ್ಳೆಯವರು ಮಾತನಾಡಿ “ತುಳುನಾಡು ವಿವಿಧ ಭಾಷೆಗಳ ನೆಲೆವೀಡು, ವಿವಿಧ ಸಮುದಾಯಗಳಲ್ಲಿ ಅಂತರ್ಗತವಾಗಿರುವ ತಮ್ಮ ತಾಯ್ನುಡಿಯ ಬಗ್ಗೆ ಪ್ರತಿಯೊಬ್ಬರೂ ಅಭಿಮಾನಪಡಬೇಕು” ಎಂದು ಹೇಳಿದರು.

    ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಪೂವರಿ ತುಳು ಪತ್ರಿಕೆಯ ಸಂಪಾದಕ ವಿಜಯಕುಮಾರ್ ಭಂಡಾರಿ ಹೆಬ್ಬಾರಬೈಲ್ ಇವರು ವಹಿಸಿದ್ದು, ಲೇಖಕಿ ಡಾ. ಝೀಟಾ ಲೋಬೋ, ಕವಿ ಯು.ಕೆ. ಖಾಲಿದ್ ಉಳ್ಳಾಲ್ಕಾರ್, ವಿ.ಬಿ. ಆಚಾರ್ಯ ಮುಖ್ಯ ಅತಿಥಿಯಾಗಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು. ಅಕಾಡೆಮಿ ಅಧ್ಯಕ್ಷರಾದ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಾಸ್ತಾವಿಕ ಮಾತುಗಳಾನ್ನಾಡಿದರು.

    ಬಹುಭಾಷಾ ಕವಿಗೋಷ್ಠಿಯಲ್ಲಿ ಶಾರದಾ ಶೆಟ್ಟಿ (ತುಳು), ವಿಜಯರಾಜ್ ಪುಣಿಂಚತ್ತಾಯ (ಶಿವಳ್ಳಿ ತುಳು), ರಾಜೇಂದ್ರ ಟಿ. ಕಾರಿಕೆ (ಮಾವಿಲನ್ ತುಳು), ಪ್ರೊ. ಸಂಜೀವ ಕುದ್ಪಾಜೆ (ಅರೆಭಾಷೆ), ಶರತ್ ಕುಮಾರ್ ತುಳುಪುಳೆ (ಚಿತ್ಪಾವನಿ), ಆಯಿಷಾ ಯು.ಕೆ. (ಬ್ಯಾರಿ), ಸುಭಾಷ್ ಪೆರ್ಲ (ಮರಾಠಿ), ಆಂಡ್ರ್ಯೂ ಎಲ್. ಡಿ’ಕೂನ್ಹಾ (ಕೊಂಕಣಿ), ಮಂಜುನಾಥ ಗುಂಡ್ಮಿ (ಕುಂದಗನ್ನಡ), ದೀಪಿಕಾ ಉಡುಪಿ (ಕೊರಗ ಭಾಷೆ), ಜೋತ್ಸ್ನ ಎಂ. ಕಡಂದೇಲು (ಕರಾಡ), ರವೀಂದ್ರನ್ ಪಾಡಿ (ಮಲೆಯಾಳಂ), ಶ್ರೀ ಮುದ್ರಾಡಿ (ಕನ್ನಡ), ಮಂಗಳಾ ಎಸ್. ಭಟ್ (ಕೊಂಕಣಿ), ವನಜಾಕ್ಷಿ ಪಿ. ಚೆಂಬ್ರಕಾನ (ಕನ್ನಡ) , ಎನ್. ಸುಬ್ರಾಯ ಭಟ್ (ಹವ್ಯಕ) ಅವರು ಕವಿತೆ ವಾಚಿಸಿದರು. ಅಕಾಡೆಮಿ ಸದಸ್ಯ ಸಂತೋಷ್ ಶೆಟ್ಟಿ ಹಿರಿಯಡ್ಕ ಸ್ವಾಗತಿಸಿ, ಸದಸ್ಯರಾದ ಪಾಂಗಾಳ ಬಾಬು ಕೊರಗ ಕಾರ್ಯಕ್ರಮ ನಿರ್ವಹಿಸಿ, ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವರು ವಂದಿಸಿದರು.

    baikady Literature roovari
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿ ‘Mr. ಮನುಜ’ ಏಕವ್ಯಕ್ತಿ ನಾಟಕ ಪ್ರದರ್ಶನ | ನವೆಂಬರ್ 07
    Next Article ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ತಾಳಮದ್ದಲೆ ‘ಶರಸೇತು ಬಂಧ’
    roovari

    Add Comment Cancel Reply


    Related Posts

    ‘ಯಕ್ಷ ಸಿರಿ’ ಯಕ್ಷಗಾನ ತರಬೇತಿ ಕೇಂದ್ರದ ಚತುರ್ಥ ವಾರ್ಷಿಕೋತ್ಸವ ಸಮಾರಂಭ | ಅಕ್ಟೋಬರ್ 17

    October 16, 2026

    ಯಕ್ಷ ಕಲಾವಿದ ಶ್ರೀಪಾದ ಭಟ್ ಥಂಡಿಮನೆ ನಿಧನ

    October 16, 2026

    ಅಜೆಕಾರು ಕಲಾಭಿಮಾನಿ ಬಳಗ ‘ರಜತ ಪರ್ವ’ಕ್ಕೆ ಕಳಶವಿಟ್ಟ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’

    October 16, 2026

    ‘ಕೇಶವ ಪ್ರಶಸ್ತಿ’ಗೆ ಹಿರಿಯ ಜಾನಪದ ವಿದ್ವಾಂಸ ಡಾ. ಕೆ. ಚಿನ್ನಪ್ಪ ಗೌಡ ಆಯ್ಕೆ

    October 16, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.