ಮಂಗಳೂರು : ಅಖಿಲ ಭಾರತೀಯ ಸಾಹಿತ್ಯ ಪರಿಷತ್ನ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ವತಿಯಿಂದ ‘ಅಯೋಧ್ಯೆಯಲ್ಲಿ ರಾಮಮಂದಿರ-ಮನೆಮನಗಳಲ್ಲಿ ಶ್ರೀರಾಮ ಚಂದಿರ’ ವಿಷಯದ ಬಗ್ಗೆ ದ.ಕ. ಜಿಲ್ಲಾ ಮಟ್ಟದ ಕವನ ಸ್ಪರ್ಧೆ ಏರ್ಪಡಿಸಲಾಗಿದೆ.
ಕನಿಷ್ಠ 60 ಪದಗಳು, ಗರಿಷ್ಠ 100 ಪದಗಳು. ವಯೋಮಿತಿ ಇಲ್ಲ. ಸ್ಪಧೆಯಲ್ಲಿ ಆಯ್ಕೆಯಾದ ಮೊದಲ ಮೂರು ಕವಿತೆಗಳಿಗೆ ನಗದು ಸಹಿತ ಪ್ರಮಾಣಪತ್ರ ನೀಡಲಾಗುವುದು. ವಿಜೇತರಿಗೆ ಹಾಗೂ ಆಯ್ದ ಕವಿಗಳಿಗೆ ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಕವನ ವಾಚನಕ್ಕೆ ಅವಕಾಶ ಕಲ್ಪಿಸಲಾಗುವುದು. ಕವನಗಳನ್ನು ಪ್ರಧಾನ ಕಾರ್ಯದರ್ಶಿ, ಅ.ಭಾ.ಸಾ.ಪ., ದ.ಕ. ಜಿಲ್ಲಾ ಸಮಿತಿ, 2ನೇ ಮಹಡಿ, ರಘು ಬಿಲ್ಡಿಂಗ್, ಕವಿತಾ ರೆಸಿಡೆನ್ಸಿ ಮುಂಭಾಗ, ಉರ್ವಸ್ಟೋರ್, ಅಂಚೆ: ಅಶೋಕನಗರ, ಮಂಗಳೂರು-6 ಈ ವಿಳಾಸಕ್ಕೆ ದಿನಾಂಕ 22-01-2024ರೊಳಗೆ ಕಳುಹಿಸಬೇಕು. ಕವನ ಕಳುಹಿಸುವವರು ವಿಳಾಸ ಮತ್ತು ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.