ಬೆಂಗಳೂರು : ಸ್ಪಷ್ಟ ಥಿಯೇಟರ್ ಪ್ರಸ್ತುತ ಪಡಿಸುವ ಗಗನ್ ಪ್ರಸಾದ್ ಇವರ ಕಥೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ‘ಲೆಕ್ಕಕ್ಕುಂಟು ಆಟಕ್ಕಿಲ್ಲ’ ನಾಟಕ ಪ್ರದರ್ಶನವನ್ನು ದಿನಾಂಕ 07 ಜೂನ್ 2026ರಂದು ಸಂಜೆ 7-00 ಗಂಟೆಗೆ ಬೆಂಗಳೂರು ಮಲ್ಲೇಶ್ವರದ ಸೇವಾ ಸದನದಲ್ಲಿ ಹಮ್ಮಿಕೊಳ್ಳಲಾಗಿದೆ. ಸಂಜನಾ ಎಸ್. ಮತ್ತು ಪ್ರಶಾಂತ್ ಹೆಚ್.ಎಸ್. ಸಂಭಾಷಣೆ ಬರೆದಿದ್ದು, ಮಧುರ ಚೆನ್ನಿಗ ಸುಬ್ಬಣ್ಣ ಮತ್ತು ಎಸ್. ಸುಮೇಧ ಕಶ್ಯಪ್ ಇವರು ಸಂಗೀತ ನೀಡಿದ್ದಾರೆ.

