ಮಂಗಳೂರು : ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಸಹಯೋಗದಲ್ಲಿ ಜರ್ನಿ ಥೇಟರ್ ಗ್ರೂಪ್ (ರಿ.) ಮಂಗಳೂರು ಪ್ರಸ್ತುತ ಪಡಿಸುವ ‘ರಾಮಾಂಜನೇಯ ಕಾಳಗ’ ಯಕ್ಷಗಾನ ಪ್ರದರ್ಶನವನ್ನು ದಿನಾಂಕ 06 ಜೂನ್ 2026ರಂದು ಮಂಗಳೂರಿನ ಸಂತ ಅಲೋಶಿಯಸ್ ಪರಿಗಣಿತ ವಿ.ವಿ.ಯ ಎಲ್.ಸಿ.ಆರ್.ಐ. ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸುನಿಲ್ ಪಲ್ಲಮಜಲು ಇವರ ನಿರ್ದೇಶನದಲ್ಲಿ ಪ್ರದರ್ಶನಗೊಳ್ಳುವ ಯಕ್ಷಗಾನದ ಹಿಮ್ಮೇಳದಲ್ಲಿ ವಿಶ್ವಾಸ್ ಕಾರ್ಬೆಟ್ಟು, ಮಯೂರ ನಾಯಿಗ, ಸಮರ್ಥ ಉಡುಪ, ಶ್ರೀನಾಥ್ ಜ್ಯೋತಿಗುಡ್ಡೆ ಹಾಗೂ ಮುಮ್ಮೇಳದಲ್ಲಿ ರೋಹಿಲ್ ಶೆಟ್ಟಿ, ರಾಹುಲ್ ಕುಡುಪು, ಗೌತಮ್ ಶೆಟ್ಟಿ, ವಸುಂಧರ ಹರೀಶ್, ಸೃಷ್ಟಿ ಸೋಮೇಶ್ವರ, ರೋಹನ್ ಎಸ್. ಉಚ್ಚಿಲ್, ಹರೀಶ್ ಶೆಟ್ಟಿ ನೀಲಿಪಾಲ್, ಮೇಘನಾ ಕುಂದಾಪುರ, ಕೃತಿ ಪೆರ್ಲ, ಶಮಿತಾ, ಜೀವನ ಸೋಮೇಶ್ವರ, ಸುನಿಲ್ ಅತ್ತಾವರ, ಗಗನ, ಅದ್ವಯ ಯಥರ್ವ, ಸತ್ಯ ಜೀವನ್, ಶರಣ್ಯ, ಹರ್ಷಿತ್, ತೃಪ್ತಿ, ಯುಕ್ತ, ರಶ್ಮಿತಾ ಇವರುಗಳು ಭಾಗವಹಿಸಲಿದ್ದಾರೆ.

