Subscribe to Updates

    Get the latest creative news from FooBar about art, design and business.

    What's Hot

    ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜುಲೈ 15

    June 29, 2026

    ಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಚೆನ್ನವೀರ ಕಣವಿ ಜನ್ಮದಿನಾಚರಣೆ | ಜೂನ್ 30

    June 29, 2026

    ಮೈಸೂರು ಕಲಾಮಂದಿರದಲ್ಲಿ ಅಕ್ಕ ನಾಗಲಾಂಬಿಕೆಯ ಬದುಕು ಜೀವಂತಗೊಳಿಸಿದ ಏಕವ್ಯಕ್ತಿ ನಾಟಕ

    June 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಬೈಂದೂರಿನಲ್ಲಿ ಗಮಕ ಕಾರ್ಯಕ್ರಮ
    Literature

    ಬೈಂದೂರಿನಲ್ಲಿ ಗಮಕ ಕಾರ್ಯಕ್ರಮ

    January 19, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಬೈಂದೂರು : ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಲಾವಣ್ಯ (ರಿ) ಬೈಂದೂರು ಹಾಗೂ ಸುರಭಿ (ರಿ) ಬೈಂದೂರು ಸಂಸ್ಥೆಗಳೊಂದಿಗೆ ಜಂಟಿಯಾಗಿ ಆಯೋಜಿಸಿದ ಕರ್ಣಾಟಕ ಸಂಭ್ರಮ 50 ‘ಸಾಂಸ್ಕೃತಿಕ ಸೌರಭ 2023-24’ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ ಗಮಕ ವಾಚನ ಕಾರ್ಯಕ್ರಮವು ದಿನಾಂಕ 04-01-2024ರಂದು ಬೈಂದೂರಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಮೊಗೇರಿ ಗೋಪಾಲಕೃಷ್ಣ ಅಡಿಗ ವೇದಿಕೆಯಲ್ಲಿ ನೆರವೇರಿತು.

    ಅನುಭಾವಿ ಸಂತ ಕವಿ ಕನಕದಾಸರ ನಳ ಚರಿತ್ರೆಯ ಕಾರ್ಕೋಟಕ ದಂಶನ ಭಾಗದ ಕಥಾವಸ್ತುವನ್ನು ಆಯ್ದುಕೊಂಡಿದ್ದು, ಗಂಗೊಳ್ಳಿ ಸರಸ್ವತಿ ವಿದ್ಯಾಲಯದ ಕನ್ನಡ ಉಪನನ್ಯಾಸಕ ಸುಜಯೀಂದ್ರ ಹಂದೆ ಎಚ್. ಗಮಕ ವಾಚನ ಮಾಡಿ, ಉಡುಪಿ ಎಂ. ಜಿ. ಎಂ. ಕಾಲೇಜಿನ ಕನ್ನಡ ಉಪನ್ಯಾಸಕ ಕೋಟ ರಾಘವೇಂದ್ರ ತುಂಗ ವ್ಯಾಖ್ಯಾನ ನಡೆಸಿಕೊಟ್ಟರು.

    ಬೈಂದೂರು ವಿಧಾನ ಸಭಾ ಶಾಸಕರಾದ ಗುರುರಾಜ ಶೆಟ್ಟಿ ಗಂಟಿಹೊಳೆ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಪೂರ್ಣಿಮಾ, ಪ್ರಾಂಶುಪಾಲ ಮಂಜುನಾಥ ಪಿ. ನಾಯ್ಕ್, ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ್ ನಾಯ್ಕ್, ಉಪ ಪ್ರಾಂಶುಪಾಲ ಪದ್ಮನಾಭ ಪಿ, ಲಾವಣ್ಯ (ರಿ.) ಬೈಂದೂರಿನ ಅಧ್ಯಕ್ಷ ನರಸಿಂಹ ಬಿ. ನಾಯಕ್, ಸುರಭಿ (ರಿ.) ಬೈಂದೂರಿನ ಅಧ್ಯಕ್ಷ ನಾಗರಾಜ ಪಿ. ಉಪಸ್ಥಿತರಿದ್ದರು. ಗಣಪತಿ ಹೋಬಳಿದಾರ್ ನಿರ್ವಹಿಸಿ, ಸುರಭಿಯ ಸುಧಾಕರ ಪಿ. ವಂದಿಸಿದರು.

     

    Share. Facebook Twitter Pinterest LinkedIn Tumblr WhatsApp Email
    Previous Articleದತ್ತಿನಿಧಿ ಕಥಾ ಸ್ಪರ್ಧೆ, ನಾಟಕ ಹಸ್ತಪ್ರತಿ ಸ್ಪರ್ಧೆಗೆ ಸಾಹಿತ್ಯ ಕೃತಿ ಆಹ್ವಾನ
    Next Article ಪುತ್ತೂರು ನೃತ್ಯೋಪಾಸನಾ ಕಲಾ ಕೇಂದ್ರ ಕಲಾ ಅಕಾಡೆಮಿಯಾಗಿ ಮರುನಾಮಕರಣ
    roovari

    Add Comment Cancel Reply


    Related Posts

    ಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಚೆನ್ನವೀರ ಕಣವಿ ಜನ್ಮದಿನಾಚರಣೆ | ಜೂನ್ 30

    June 29, 2026

    ಮಣ್ಣಗುಡ್ಡೆ ಸರಕಾರಿ ಶಾಲೆಯಲ್ಲಿ 119ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    June 29, 2026

    Book Review | ‘Bhishma’s Vow’ – A Heartrending Narrative

    June 29, 2026

    ‘ಏಕದಿನ ಸಾಹಿತ್ಯ ಅಭಿಯಾನ’ದಲ್ಲಿ ವಿದ್ಯಾರ್ಥಿಗಳಿಂದ ಕವನ ವಾಚನ ಹಾಗೂ ರಸ ಪ್ರಶ್ನೆ

    June 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.