Subscribe to Updates

    Get the latest creative news from FooBar about art, design and business.

    What's Hot

    ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜುಲೈ 15

    June 29, 2026

    ಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಚೆನ್ನವೀರ ಕಣವಿ ಜನ್ಮದಿನಾಚರಣೆ | ಜೂನ್ 30

    June 29, 2026

    ಮೈಸೂರು ಕಲಾಮಂದಿರದಲ್ಲಿ ಅಕ್ಕ ನಾಗಲಾಂಬಿಕೆಯ ಬದುಕು ಜೀವಂತಗೊಳಿಸಿದ ಏಕವ್ಯಕ್ತಿ ನಾಟಕ

    June 29, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜುಲೈ 15
    Drama

    ಕಲಾವಿದರು ಮತ್ತು ತಂತ್ರಜ್ಞರಿಂದ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜುಲೈ 15

    June 29, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಕಾರ್ಕಳ : ಕರಾವಳಿ ರಂಗಾಯಣ ಕಾರ್ಕಳ ತಾನು ಸಿದ್ಧಪಡಿಸುವ ನಾಟಕಗಳು ಹಾಗೂ ರಂಗ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮೂರು ಜನ ತಂತ್ರಜ್ಞರು (ಸಂಗೀತ/ಧ್ವನಿ ಸಂಯೋಜಕರು-1, ಬೆಳಕಿನ ವಿನ್ಯಾಸ-1, ರಂಗಸಜ್ಜಿಕೆ-ಪರಿಕರ-1) ಹಾಗೂ 12 ಮಂದಿ ಕಲಾವಿದರನ್ನು ಆಯ್ಕೆ ಮಾಡಿಕೊಳ್ಳಲು ತೀರ್ಮಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 15 ಜುಲೈ 2026 ಆಗಿದ್ದು, ರಂಗಭೂಮಿಯಲ್ಲಿ ಅನುಭವವಿರುವ ಆಸಕ್ತ ಕಲಾವಿದರು ಮತ್ತು ತಂತ್ರಜ್ಞರು ಅರ್ಜಿ ಸಲ್ಲಿಸಬಹುದು. ರಾಷ್ಟ್ರೀಯ ನಾಟಕ ಶಾಲೆಯ ಪದವಿ/ರಾಜ್ಯದ ಯಾವುದೇ ರಂಗಶಿಕ್ಷಣ ಕೇಂದ್ರದ ರಂಗಶಿಕ್ಷಣ ಪದವಿ/ಡಿಪ್ಲೋಮೋ/ ರಾಜ್ಯ ಸರ್ಕಾರ ಅಂಗೀಕೃತ ವಿಶ್ವವಿದ್ಯಾಲಯದಿಂದ ನಾಟಕ ವಿಭಾಗದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದವರಿಗೆ ಹಾಗೂ ಆಯಾ ತಾಂತ್ರಿಕ ವಿಷಯಗಳಲ್ಲಿ (ಸಂಗೀತ, ಧ್ವನಿ-ಬೆಳಕು, ರಂಗಸಜ್ಜಿಕೆ-ಪರಿಕರ) ಪರಿಣತಿ ಪಡೆದವರಿಗೆ ಆದ್ಯತೆ ನೀಡಲಾಗುವುದು. ರಂಗಭೂಮಿ ಅನುಭವ ಅಪೇಕ್ಷಣೀಯ. ಆಸಕ್ತ ಕಲಾವಿದರು ಹಾಗೂ ತಂತ್ರಜ್ಞರನ್ನು ನಿಯಮಾನುಸಾರ ತಾತ್ಕಾಲಿಕವಾಗಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

    ಕಲಾವಿದರಿಗೆ ವಯಸ್ಸಿನ ಮಿತಿ 18ರಿಂದ 32 ವರ್ಷ. ತಂತ್ರಜ್ಞರಿಗೆ ವಯಸ್ಸಿನ ಮಿತಿ ಇರುವುದಿಲ್ಲ, ಆಸಕ ಕಲಾವಿದರು ಬಿಳಿ ಹಾಳೆಯ ಮೇಲೆ ಸ್ವವಿವರದೊಂದಿಗೆ ದಿನಾಂಕ 15 ಜುಲೈ 2026 ಸಂಜೆ 5-00 ಗಂಟೆಯೊಳಗೆ ವಿಶೇಷ ಕರ್ತವ್ಯಾಧಿಕಾರಿ, ಕರಾವಳಿ ರಂಗಾಯಣ ಕಛೇರಿ, ಕೋಟಿ ಚೆನ್ನಯ ಥೀಂ ಪಾರ್ಕ್, ಕಸಬಾ ಗ್ರಾಮ, ಕಾರ್ಕಳ ತಾಲೂಕು – 574104, ಉಡುಪಿ ಜಿಲ್ಲೆ-ಈ ವಿಳಾಸಕ್ಕೆ ಅಂಚೆ ಅಥವಾ ಇ-ಮೇಲ್ ವಿಳಾಸ [email protected] ನಲ್ಲಿ ಅರ್ಜಿಯನ್ನು ಸಲ್ಲಿಸುವುದು. ಹೆಚ್ಚಿನ ಮಾಹಿತಿಗಾಗಿ 9980765355, 9900987866, 7676501443, 8123471121, 08258-200845 ಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಸಂದರ್ಶನದ ದಿನಾಂಕ ಮುಂದಿನ ದಿನಗಳಲ್ಲಿ ತಿಳಿಸಲಾಗುವುದು.

    ಆಯ್ಕೆಯಾದ ಕಲಾವಿದರು ರಂಗಾಯಣದ ನಿಯಮ ಮತ್ತು ಷರತ್ತುಗಳಿಗೆ ಬದ್ಧರಾಗಿರಬೇಕು. ತಂತ್ರಜ್ಞರಿಗೆ ರೂ.25,000/- (ಇಪ್ಪತ್ತೈದು ಸಾವಿರ), ಮೊದಲ ವರ್ಷದ ಕಲಾವಿದರಿಗೆ ರೂ.18,000/-(ರೂಪಾಯಿ ಹದಿನೆಂಟು ಸಾವಿರ), ಎರಡನೇ ವರ್ಷದ ಕಲಾವಿದರಿಗೆ (ರಾಷ್ಟ್ರೀಯ ನಾಟಕ ಶಾಲೆ, ಇತರೆ ರಂಗಾಯಣ, ರಂಗಶಿಕ್ಷಣ ಕೇಂದ್ರದಲ್ಲಿ ತಿರುಗಾಟ ಅನುಭವ ಇರುವ ಕಲಾವಿದರು) ಮಾಸಿಕ ಗೌರವ ಸಂಭಾವನೆ ರೂ.20,000/- (ರೂಪಾಯಿ ಇಪ್ಪತ್ತು ಸಾವಿರ) ನೀಡಲಾಗುವುದು.

    ಸಂದರ್ಶನ ವೇಳೆ ಹಾಜರು ಪಡಿಸಬೇಕಾದ ಮೂಲ ದಾಖಲಾತಿಗಳು
    1. ಜನ್ಮ ದಿನಾಂಕ ದೃಢೀಕರಣ ಪತ್ರ
    2. ಎನ್.ಎಸ್.ಡಿ. / ಡಿಪ್ಲೋಮೋ ಪ್ರಮಾಣ ಪತ್ರ
    3. ರಂಗ ಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ
    4. ರಂಗ ಭೂಮಿ ಅನುಭವ ಕುರಿತು ಸ್ವವಿವರ ಪತ್ರ (ಅಗತ್ಯ ದಾಖಲೆಗಳೊಂದಿಗೆ)
    5. ಆಧಾರ್ ಕಾರ್ಡ್

    baikady drama roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಚೆನ್ನವೀರ ಕಣವಿ ಜನ್ಮದಿನಾಚರಣೆ | ಜೂನ್ 30
    roovari

    Add Comment Cancel Reply


    Related Posts

    ಧಾರವಾಡದ ವಿದ್ಯಾರಣ್ಯ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಚೆನ್ನವೀರ ಕಣವಿ ಜನ್ಮದಿನಾಚರಣೆ | ಜೂನ್ 30

    June 29, 2026

    ಮೈಸೂರು ಕಲಾಮಂದಿರದಲ್ಲಿ ಅಕ್ಕ ನಾಗಲಾಂಬಿಕೆಯ ಬದುಕು ಜೀವಂತಗೊಳಿಸಿದ ಏಕವ್ಯಕ್ತಿ ನಾಟಕ

    June 29, 2026

    ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದಿಂದ ತಿಂಗಳ ಯಕ್ಷಗಾನ ತಾಳಮದ್ದಲೆ | ಜೂನ್ 30

    June 29, 2026

    ಮಣ್ಣಗುಡ್ಡೆ ಸರಕಾರಿ ಶಾಲೆಯಲ್ಲಿ 119ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    June 29, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.