Subscribe to Updates

    Get the latest creative news from FooBar about art, design and business.

    What's Hot

    ಬೈಲೂರು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಸನ್ನಿಧಿಯಲ್ಲಿ ತುಳು ಯಕ್ಷಗಾನ ಸಂಭ್ರಮ

    June 20, 2026

    ಉಪ್ಪಿನಕುದ್ರು ಗೊಂಬೆ ಮನೆಯಲ್ಲಿ ‘ಏಕವ್ಯಕ್ತಿ ಪ್ರದರ್ಶನ’ | ಜೂನ್ 21

    June 19, 2026

    ದೃಶ್ಯಕಲೆ ಪದವಿ ಪ್ರವೇಶಾತಿಗೆ ಅರ್ಜಿ ಆಹ್ವಾನ | ಕೊನೆಯ ದಿನಾಂಕ ಜೂನ್ 22

    June 19, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಕನ್ನಡ ನಾಟಕ ಪ್ರದರ್ಶನ | ಜೂನ್ 12 ಮತ್ತು 13
    Drama

    ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಕನ್ನಡ ನಾಟಕ ಪ್ರದರ್ಶನ | ಜೂನ್ 12 ಮತ್ತು 13

    June 10, 2024No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೂಡುಬಿದಿರೆ : ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಮತ್ತು ಆಳ್ವಾಸ್ ರಂಗ ಅಧ್ಯಯನ ಕೇಂದ್ರ ಇವುಗಳ ಆಶ್ರಯದಲ್ಲಿ ಮೈಸೂರಿನ ರಂಗಾಯಣ ಅಭಿನಯಿಸುವ ಸಿ. ಬಸವ ಲಿಂಗಯ್ಯ ಇವರ ಪರಿಕಲ್ಪನೆ, ಸಂಗೀತ ಮತ್ತು ನಿರ್ದೇಶನದಲ್ಲಿ ‘ಗೋರ್ ಮಾಟಿ’ (ನನ್ನ ಜನ) ವಿಶೇಷ ಕನ್ನಡ ನಾಟಕದ ಎರಡು ಪ್ರದರ್ಶನಗಳನ್ನು ದಿನಾಂಕ 12-06-2024 ಮತ್ತು 13-06-2024ರಂದು ಮೂಡುಬಿದಿರೆಯ ಸ್ಕೌಟ್ ಗೈಡ್ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

    ಇದು ಬರಿ ನಾಟಕವಲ್ಲ ಬಂಜಾರ ಜನಾಂಗದ ಕಲೆ, ಸಂಸ್ಕೃತಿ, ಬದುಕು ಬವಣೆಗಳ ಸಂಕಥನ. ಕಾಲಚಕ್ರದಲ್ಲಿ ಸಿಲುಕಿ ನುಜ್ಜುಗುಜ್ಜಾದ ಅನೇಕ ಜನ ಸಮುದಾಯಗಳಲ್ಲಿ ಬಂಜಾರ ಜನಾ೦ಗವೂ ಒಂದು. ‘ಗೋರ್‌ಮಾಟಿ’ ಅ೦ದರೆ ನಮ್ಮವರು ಎಂಬರ್ಥದಲ್ಲಿ ಬಳಸಲಾಗಿದ್ದು ಭಾರತದ ಮೂಲ ನಿವಾಸಿಗಳಲ್ಲಿ ವರ್ಣರಂಜಿತ ಸ೦ಸ್ಕೃತಿಯನ್ನು ಹೊಂದಿರುವ ಒ೦ದು ಜನ ಸಮುದಾಯ. ಇಡೀ ದೇಶದ ಅನೇಕ ರಾಜ್ಯಗಳಲ್ಲಿ ವಿವಿಧ ಜಾತಿ ಸ್ವರೂಪದಲ್ಲಿ ಹರಿದು ಹಂಚಿಹೋಗಿರುವ ಬಂಜಾರರ ಜೀವನದ ಕತೆಯೇ ಈ ‘ಗೋರ್‌ಮಾಟಿ’. ವೃತ್ತಿಪರ ಕಲಾವಿದರ ಪರಿಪಕ್ವ ಅಭಿನಯ, ಹಾಡು, ಕುಣಿತ, ವಿಶೇಷ ವಸ್ತ್ರವಿನ್ಯಾಸ, ರಂಗ ಪರಿಕರಗಳಿಂದ ಕೂಡಿದ ಈ ಪ್ರಯೋಗವನ್ನು ನಾಡಿನ ಶ್ರೇಷ್ಠ ನಿರ್ದೇಶಕರಾದ, ಸಿ. ಬಸವಲಿ೦ಗಯ್ಯನವರು ನಿರ್ದೇಶಿಸಿದ್ದಾರೆ. ಪ್ರತಿಯೊಬ್ಬರೂ ನೋಡಬೇಕಾದ ನಾಟಕ ‘ಗೋರ್‌ಮಾಟಿ’.

    Share. Facebook Twitter Pinterest LinkedIn Tumblr WhatsApp Email
    Previous Articleಕೊರವಡಿಯಲ್ಲಿ ‘ಯಕ್ಷ ಗಾನ ವೈಭವ’
    Next Article ಬಂಟ್ವಾಳದಲ್ಲಿ ‘ಜೀವಸತ್ವ’ ಒಗಟು ಸಂಕಲನದ ಕೃತಿ ಲೋಕಾರ್ಪಣೆ
    roovari

    Add Comment Cancel Reply


    Related Posts

    ‘ಸ್ವಾತಂತ್ರ್ಯದ ಓಟ’ ಇತಿಹಾಸ, ಮಾನವೀಯತೆ ಮತ್ತು ಸ್ವಾತಂತ್ರ್ಯದ ನಿಜಾರ್ಥದ ರಂಗಯಾನ | ಜೂನ್ 20 ಮತ್ತು 21

    June 19, 2026

    ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ‘ತಲೆದಂಡ’ ನಾಟಕ ಪ್ರದರ್ಶನ | ಜೂನ್ 21

    June 19, 2026

    ಸಂತ ಅಲೋಶಿಯಸ್ ಕಾಲೇಜಿನಲ್ಲಿ ‘ನಾನು ಕಾರಂತ’ ಕನ್ನಡ ನಾಟಕ ಪ್ರದರ್ಶನ | ಜೂನ್ 19

    June 19, 2026

    ಸಂಗೀತ ನಾಟಕ ಅಕಾಡೆಮಿಯ ಅಕಾಡೆಮಿ ರತ್ನ, ಅಕಾಡೆಮಿ ಮತ್ತು ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ ಪ್ರಕಟ

    June 18, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.