ನಾಪೋಕ್ಲು : ಕನ್ನಡ ಸಾಹಿತ್ಯ ಪರಿಷತ್ತಿನ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ವತಿಯಿಂದ ನಡೆಯುವ 12ನೇ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 20 ಮೇ 2026ರಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಡಂಗದಲ್ಲಿ ನಡೆಯಲಿದೆ.
ಸಮ್ಮೇಳನದ ಸಾಕ್ಷ್ಯಚಿತ್ರವು ಸ್ಮರಣ ಸಂಚಿಕೆ ರೂಪದಲ್ಲಿ ಹೊರಬರಲಿದೆ. ಈ ಸ್ಮರಣ ಸಂಚಿಕೆಯಲ್ಲಿ ಉದಯೋನ್ಮುಖ ಕವಿಗಳಿಂದ ಹಾಗೂ ಬರಹಗಾರರಿಂದ ಲೇಖನ, ಕವನ, ಚುಟುಕುಗಳನ್ನು ಆಹ್ವಾನ ಮಾಡಲಾಗಿದೆ. ಕವನ ಹಾಗೂ ಚುಟುಕುಗಳು ಒಂದು ಪುಟ ಮೀರದಂತೆ, ಸಾಧಕರು, ವೈಚಾರಿಕ, ಸೈದ್ಧಾಂತಿಕ ಲೇಖನಗಳು ಸ್ವರಚಿತವಾಗಿದೆ. ಲೇಖನವನ್ನು 10 ಮೇ 2026ರೊಳಗೆ ಕಳುಹಿಸುವುದು. ಆಯ್ಕೆಯಾದ ಲೇಖನಗಳನ್ನು ಮಾತ್ರ ಪ್ರಕಟಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸ್ಮರಣ ಸಂಚಿಕೆ ಸಮಿತಿ ವಿಳಾಸ: ಎ.ಟಿ. ಬಾಲಕೃಷ್ಣ ಅರಪಟ್ಟು ಗ್ರಾಮ ಮತ್ತು ಅಂಚೆ, ಕೊಡಗು. ಬಾಲಕೃಷ್ಣ (ದೂ.ಸಂ. 94491 18419), ಬಿದ್ದಂಡ ನಾಣಿ ದೇವಯ್ಯ (ದೂ.ಸಂ. 94497 81423), ನಂಬಿಯಪಂಡ ರಂಜು ನಾಣಯ್ಯ (ದೂ.ಸಂ. 98455 78971) ಇವರನ್ನು ಸಂಪರ್ಕಿಸಬಹುದು.
