ಮಡಿಕೇರಿ : ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆ ಹಾಸ್ಯ ಲೇಖನ ಸ್ಪರ್ಧೆ ನಡೆಸಲು ಉದ್ದೇಶಿಸಲಾಗಿರುತ್ತದೆ. ಅರೆಭಾಷೆ ಹಾಸ್ಯ ಲೇಖನ ಸ್ವಂತ ರಚನೆಯಾಗಿರಬೇಕು. ಬೇರೆ ಎಲ್ಲೂ ಪ್ರಕಟವಾಗಿರಬಾರದು. ಕನಿಷ್ಟ ಐಧುನೂರು ಪದಗಳಿದ್ದು ಒಂದು ಸಾವಿರ ಪದ ಮೀರಬಾರದು. ಹೊಸ ಆಲೋಚನೆ ಹೊಸ ಹೊಳಹುಗಳ ಬರಹವಾಗಿರಬೇಕು.
ಹಾಸ್ಯ ಲೇಖನಕ್ಕೆ ಪ್ರಥಮ ಬಹುಮಾನ 5,000/-, ದ್ವಿತೀಯ ಬಹುಮಾನ 3,000/- ಹಾಗೂ ತೃತೀಯ ಬಹುಮಾನ 2,000/- ಒಳಗೊಂಡಿದೆ. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿದೆ. ಬರಹ ಕಳುಹಿಸಲು ಮೇ 10 ಅಂತಿಮ ದಿನವಾಗಿದೆ.
ಬರಹಗಳನ್ನು ಅಂಚೆ ಮೂಲಕ ಅಥವಾ ಅಕಾಡೆಮಿ ವಾಟ್ಸಾಪ್ ನಂ. 6362522677 ಮೂಲಕ ಅಥವಾ ಇ-ಮೇಲ್ [email protected] ಮೂಲಕ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ರಿಜಿಸ್ಟ್ರಾರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ, ರಾಜಸೀಟ್ ರಸ್ತೆ, ಮಡಿಕೇರಿ, ಕೊಡಗು ಜಿಲ್ಲೆ, ಮೊಬೈಲ್ ನಂ. 6362522677 ಸಂಪರ್ಕಿಸಬಹುದು ಎಂದು ಅಕಾಡೆಮಿ ರಿಜಿಸ್ಟ್ರಾರ್ ಅವರು ಕೋರಿದ್ದಾರೆ.
