Subscribe to Updates

    Get the latest creative news from FooBar about art, design and business.

    What's Hot

    ಕಾಸರಗೋಡಿನಲ್ಲಿ ‘ರಜತ ರಂಗ’ 20ನೇ ಕಾರ್ಯಕ್ರಮ ಹಾಗೂ ಸಂಸ್ಮರಣೆ

    August 17, 2026

    ‘ಚಿಂತನ- ಮಂಥನ’ ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ

    August 17, 2026

    ಎನ್. ಜಗದೀಶ ಕೊಪ್ಪ ಇವರು ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಆಯ್ಕೆ

    August 17, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ‘ಸಹಜ ರಂಗ 2026’ ರಂಗ ತರಬೇತಿ ಶಿಬಿರಕ್ಕೆ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 27
    Dance

    ‘ಸಹಜ ರಂಗ 2026’ ರಂಗ ತರಬೇತಿ ಶಿಬಿರಕ್ಕೆ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 27

    August 17, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮೈಸೂರು : ನಿರಂತರ ಫೌಂಡೇಶನ್ (ರಿ.), ಮೈಸೂರು ಆಯೋಜಿಸುವ ‘ಸಹಜ ರಂಗ 2026’ ಕಾಲೇಜು ವಿದ್ಯಾರ್ಥಿಗಳಿಗೆ ರಂಗ ತರಬೇತಿ ಶಿಬಿರವನ್ನು ದಿನಾಂಕ 30 ಆಗಸ್ಟ್ 2026ರಿಂದ 30 ಸೆಪ್ಟೆಂಬರ್ 2026ರವರೆಗೆ ಪ್ರತಿ ಸಂಜೆ 4-45ರಿಂದ 8-15ರವರೆಗೆ ಮೈಸೂರಿನ ಮಾನಸಗಂಗೋತ್ರಿ ಗಾಂಧಿ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. 18ರಿಂದ 35 ವರ್ಷದೊಳಗಿನ ಕಾಲೇಜು ವಿದ್ಯಾರ್ಥಿಗಳು ಹಾಗೂ ರಂಗಾಸಕ್ತರು ಈ ಶಿಬಿರದಲ್ಲಿ ಭಾಗವಹಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 27 ಆಗಸ್ಟ್ 2026.

    ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿರುವ 18ರಿಂದ 35 ವರ್ಷದೊಳಗಿನ ವಿದ್ಯಾರ್ಥಿಗಳು ಹಾಗೂ ರಂಗಾಸಕ್ತರಿಗೆ ಒಂದು ಸುವರ್ಣಾವಕಾಶ! ನಿಮ್ಮೊಳಗಿನ ಕಲಾವಿದನನ್ನು ಗುರುತಿಸಿ, ರಂಗಭೂಮಿಯ ವಿವಿಧ ಆಯಾಮಗಳನ್ನು ಅರಿತುಕೊಂಡು, ಅಭಿನಯ, ಸೃಜನಶೀಲತೆ ಹಾಗೂ ರಂಗಕೌಶಲ್ಯಗಳನ್ನು ಬೆಳೆಸಿಕೊಳ್ಳಲು ‘ಸಹಜರಂಗ 2026’ ರಂಗ ತರಬೇತಿ ಶಿಬಿರಕ್ಕೆ ನಿಮ್ಮನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ.

    ರಂಗ ಶಿಬಿರದಲ್ಲಿನ ಪಠ್ಯಕ್ರಮಗಳು : ರಂಗಭೂಮಿ ಚರಿತ್ರೆ, ರಂಗಭೂಮಿ ಮತ್ತು ಭಾಷೆ, ರಂಗ ಸಂಗೀತ, ಅಭಿನಯ, ರಂಗಭೂಮಿ ಮತ್ತು ಪರಿಸರ, ರಂಗಭೂಮಿ ಮತ್ತು ನೆಲ, ಜಲ, ರಂಗಭೂಮಿ ಮತ್ತು ಸಿನಿಮಾ, ಜನಪದ ರಂಗಭೂಮಿ, ಕಥಾಲೋಕ ಮತ್ತು ನಾಟಕ, ಕಾವ್ಯ ಮತ್ತು ನಾಟಕ, ನಾಟಕ ರಚನೆ, ನಾಟಕ ಓದುವಿಕೆ / ವಾಚನ, ರಂಗ ವಿಮರ್ಶೆ, ರಂಗಸಜ್ಜಿಕೆ, ಬೆಳಕು, ವಸ್ತ್ರ ವಿನ್ಯಾಸ, ರಂಗ ಸಂಘಟನೆ.

    ಶಿಬಿರದ ನಂತರವೂ ಶಿಬಿರಾರ್ಥಿಗಳಿಗೆ ಮುಂದಿನ ಕಲಿಕೆ ಹಾಗೂ ರಂಗಚಟುವಟಿಕೆಗಳಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗುವುದು. ರಂಗಭೂಮಿಯ ಬಗ್ಗೆ ನಿಮ್ಮ ಆಸಕ್ತಿ, ನಿಮ್ಮ ಪ್ರತಿಭೆ ಮತ್ತು ನಿಮ್ಮ ಕನಸುಗಳಿಗೆ ಒಂದು ವೇದಿಕೆ — ಸಹಜರಂಗ 2026. ಬನ್ನಿ… ರಂಗಭೂಮಿಯನ್ನು ಕಲಿಯೋಣ, ಅನುಭವಿಸೋಣ, ಸೃಷ್ಟಿಸೋಣ! ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 8951755267 / 9611074424 / 9980273167.

    baikady dance drama Literature Music roovari theatre workshop
    Share. Facebook Twitter Pinterest LinkedIn Tumblr WhatsApp Email
    Previous Articleಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಸರಣಿ ಉದ್ಘಾಟನೆ
    Next Article ಎನ್. ಜಗದೀಶ ಕೊಪ್ಪ ಇವರು ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಆಯ್ಕೆ
    roovari

    Add Comment Cancel Reply


    Related Posts

    ಕಾಸರಗೋಡಿನಲ್ಲಿ ‘ರಜತ ರಂಗ’ 20ನೇ ಕಾರ್ಯಕ್ರಮ ಹಾಗೂ ಸಂಸ್ಮರಣೆ

    August 17, 2026

    ‘ಚಿಂತನ- ಮಂಥನ’ ಯಕ್ಷಗಾನ ಮಹಿಳಾ ಕಲಾವಿದರುಗಳ ಸಮಾವೇಶ

    August 17, 2026

    ಎನ್. ಜಗದೀಶ ಕೊಪ್ಪ ಇವರು ‘ವಿ.ಕೃ. ಗೋಕಾಕ್ ಪ್ರಶಸ್ತಿ’ಗೆ ಆಯ್ಕೆ

    August 17, 2026

    ಅಜೆಕಾರು ಕಲಾಭಿಮಾನಿ ಬಳಗದ ತಾಳಮದ್ದಳೆ ಸರಣಿ ಉದ್ಘಾಟನೆ

    August 17, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.