ಕಾಸರಗೋಡು : ಕುತ್ಯಾಳ ಶ್ರೀ ಗೋಪಾಲಕೃಷ್ಣ ಯಕ್ಷಗಾನ ತರಬೇತಿ ಕೇಂದ್ರ (ರಿ.) ಕೂಡ್ಲು ಕಾಸರಗೋಡು ಇದರ ವತಿಯಿಂದ ‘ರಜತ ರಂಗ’ 20ನೇ ಕಾರ್ಯಕ್ರಮ ಹಾಗೂ ಸಂಸ್ಮರಣೆಯನ್ನು ದಿನಾಂಕ 18 ಆಗಸ್ಟ್ 2026ರಂದು ಮಧ್ಯಾಹ್ನ 2-00 ಗಂಟೆಗೆ ವಿಷ್ಣುಮಂಗಲ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕೂಡ್ಲು ಗೋಪಾಲಕೃಷ್ಣ ಶ್ಯಾನುಭೋಗ್ ಇವರ ಸಂಸ್ಮರಣೆ ನಡೆಯಲಿದ್ದು, ರಾಜೇಂದ್ರ ಬಜಕೂಡ್ಲು ಇವರು ಸಂಸ್ಮರಣಾ ಭಾಷಣ ಮಾಡಲಿದ್ದಾರೆ. ಸಭಾ ಕಾರ್ಯಕ್ರಮದ ಬಳಿಕ ತ್ರಿಶಂಕು ಸ್ವರ್ಗ’ ಪ್ರಸಂಗದ ಯಕ್ಷಗಾನ ತಾಳಮದ್ದಲೆ ನಡೆಯಲಿದೆ.

