ಸುಂಟಿಕೊಪ್ಪ : 17ನೇ ಕೊಡಗು ಜಿಲ್ಲಾ ಸಾಹಿತ್ಯ ಸಮ್ಮೇಳನವು ದಿನಾಂಕ 29 ಮತ್ತು 30 ಮೇ 2026ರಂದು ಸುಂಟಿಕೊಪ್ಪದಲ್ಲಿ ನಡೆಯಲಿದ್ದು, ಇದರ ಭಾಗವಾಗಿ ಹೊರ ತರಲು ಉದ್ದೇಶಿಸಿರುವ ಸ್ಮರಣೆಯ ಸಂಚಿಕೆಗೆ ಲೇಖನ, ಕವನ, ಪ್ರಬಂಧ, ಚುಟುಕು ಸೇರಿದಂತೆ ಸಾಹಿತ್ಯಿಕ ರಚನೆಗಳನ್ನು ಆಹ್ವಾನಿಸಲಾಗಿದೆ.
ಲೇಖನಗಳನ್ನು 800 ಶಬ್ದಗಳಿಗೆ ಅಥವಾ 4 ಪುಟಗಳಿಗೆ ಮೀರದಂತೆ ಹಾಗೂ ಸಾಹಿತ್ಯಿಕ ರಚನೆಗಳನ್ನು ಬಿಳಿ ಹಾಳೆಯ ಒಂದೇ ಬದಿಯಲ್ಲಿ ಕೈ ಬರಹ/ಡಿಟಿಪಿ ಮಾಡಿದ್ದನ್ನು ದಿನಾಂಕ 15 ಮೇ 2026ರೊಳಗೆ ಸ್ಮರಣ ಸಂಚಿಕೆ ಸಮಿತಿ ಸಂಪಾದಕರಿಗೆ ತಲುಪಿಸಿ, ತಮ್ಮ ಭಾವಚಿತ್ರದೊಂದಿಗೆ ಸ್ವ-ವಿವರ ಸಹಿತ ಮೊಬೈಲ್ ಸಂಖ್ಯೆಯನ್ನು ಸ್ಪಷ್ಟವಾಗಿ ಬರೆದು ಕಳುಹಿಸಿ. ಲೇಖನಗಳ ಆಯ್ಕೆ ಅಂತಿಮವಾಗಿ ಸಂಪಾದಕೀಯ ಮಂಡಳಿಯದ್ದೇ ಆಗಿರುತ್ತದೆ. ಇ ಮೇಲ್ ವಿಳಾಸ: [email protected] ಮತ್ತು [email protected] ಗೆ ಕಳುಹಿಸಬೇಕು. ಹೆಚ್ಚಿನ ವಿವರಗಳಿಗೆ 87623 48999 ಮತ್ತು 98450 28918 ಸಂಪರ್ಕಿಸುವಂತೆ ಕೋರಲಾಗಿದೆ. ಸಂಪಾದಕರು, ಸ್ಮರಣ ಸಂಚಿಕೆ ಸಮಿತಿ, ಚಿತ್ರ ಸ್ಟುಡಿಯೋ, ಕನ್ನಡ ವೃತ್ತ, ಸುಂಟಿಕೊಪ್ಪ ಅಂಚೆ 571 237, ಕೊಡಗು ಜಿಲ್ಲೆ, ಈ ವಿಳಾಸಕ್ಕೆ ಕಳುಹಿಸಬೇಕು.
