ಕಾಪು : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾಪು ತಾಲೂಕು ಘಟಕದ ವತಿಯಿಂದ ಕಾಪು ತಾಲೂಕು 8ನೇ ಕನ್ನಡ ಸಾಹಿತ್ಯ ಸಮ್ಮೇಳನ 2026 ‘ಜಾನಪದ ಕಾಪು ವೈಭವ’ವನ್ನು ದಿನಾಂಕ 02 ಮತ್ತು 03 ಅಕ್ಟೋಬರ್ 2026ರಂದು ಕಾಪು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಲಾಗಿದೆ. ದಿನಾಂಕ 02 ಅಕ್ಟೋಬರ್ 2026ರಂದು ಸಂಜೆ 4-00 ಗಂಟೆಗೆ ಶೋಭಾ ಯಾತ್ರೆ, 5-30 ಗಂಟೆಗೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ನಡೆಯಲಿದೆ.
ದಿನಾಂಕ 03 ಅಕ್ಟೋಬರ್ 2026ರಂದು 8-30 ಗಂಟೆಗೆ ರಾಷ್ಟ್ರ ಧ್ವಜಾರೋಹಣ, 8-40 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ, 8-45 ಗಂಟೆಗೆ ದೀಪ ಪ್ರಜ್ವಲನ ಮತ್ತು ಪುಸ್ತಕ ಪ್ರದರ್ಶನ ಉದ್ಘಾಟನೆ, 9-00 ಗಂಟೆಗೆ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಲಿದೆ. 11-00 ಗಂಟೆಗೆ ‘ಕಾಪುವಿನ ಜಾನಪದ ಆಚರಣೆಗಳು ವಿಚಾರಗೋಷ್ಠಿ, ಮಧ್ಯಾಹ್ನ ಗಂಟೆ 12-15ಕ್ಕೆ ‘ಸಿರಿಗನ್ನಡ ವಿಶೇಷ ರಸ ಪ್ರಶ್ನೆ’ ಕಾಪು ತಾಲೂಕಿನ ಪದವಿ ವಿದ್ಯಾರ್ಥಿಗಳಿಗೆ, 2-00 ಗಂಟೆಗೆ ‘ಕನ್ನಡ ಭಾಷೆ ಸಂಸ್ಕೃತಿಯ ಬೆಳವಣಿಗೆ’ ಚಿಂತನ ಮಂಥನ, ಸ್ಥಳೀಯರಿಂದ ಸಾಂಸ್ಕೃತಿಕ ವೈವಿಧ್ಯ, 3-00 ಗಂಟೆಗೆ ಸಮಾರೋಪ ಸಮಾರಂಭ ಮತ್ತು ಸಾಧಕರಿಗೆ ಸನ್ಮಾನ ನಡೆಯಲಿದೆ.


