ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 06 ಜೂನ್ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-15’ ಶೀರ್ಷಿಕೆಯಡಿ ಕವಿಗೋಷ್ಟಿಯನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ.
ಸಂತ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾಲಯ) ಮಂಗಳೂರು ಇಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆದ ಡಾ. ವಿಜಯಲಕ್ಷ್ಮೀ ನಾಯಕ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಡೆಪ್ಯೂಟಿ ಚೀಫ್ ಟ್ರಾಫಿಕ್ ವಾರ್ಡನ್ ಆಗಿರುವ ಶ್ರೀ ಫ್ರಾನ್ಸಿಸ್ ಮ್ಯಾಕ್ಸಿಂ ಮೊರಾಸ್ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಿಗಳಾದ ಶ್ರೀಮತಿ ಫೆಲ್ಸಿ ಲೋಬೊ ದೆರೆಬಯ್ಲ್ರವರು ಕವಿಗೋಷ್ಟಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ವಲೇರಿಯನ್ ಮೊರಾಸ್ ತಾಕೊಡೆ, ಸ್ಮಿತಾ ಶೆಣೈ, ರೆಮಿ ಕಾಟಿಪಳ್ಳ, ಡಾ. ಫ್ಲಾವಿಯಾ ಕ್ಯಾಸ್ತೆಲಿನೊ, ಅನಿಲ್ ಜೆ. ಕುವೆಲ್ಲೊ, ರಾಧಿಕ ಪೈ, ಪೆದ್ರು ಪ್ರಭು ತಾಕೊಡೆ, ಮರ್ಲಿನ್ ಮಸ್ಕರೇನ್ಹಸ್, ಅಲ್ರೀಶಾ ರೊಡ್ರಿಗಸ್ ಮತ್ತು ಲವೀನ ದಾಂತಿ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
