ಬೆಂಗಳೂರು : ನಿರುದ್ಯೋಗಿ ಯುವಕ ಮತ್ತು ಯುವತಿಯರಿಗಾಗಿ ಕೆನರಾ ಬ್ಯಾಂಕ್ ಒದಗಿಸುವ ಉಚಿತ ಶಿಲ್ಪಕಲಾ ಶಿಕ್ಷಣ ಪಡೆಯಲಿಚ್ಛಿಸುವ ಆಸಕ್ತರಿಗೆ ಜೂ. 15ರಂದು ಸಂದರ್ಶನ ನಡೆಯಲಿದೆ.
ನಿರುದ್ಯೋಗಿ ಯುವಕ, ಯುವತಿಯರಿಗಾಗಿ ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ಮತ್ತು ಕುಂಭಕಲೆ ವಿಭಾಗಗಳಲ್ಲಿ ಕೆನರಾ ಬ್ಯಾಂಕ್ ಉಚಿತ ತರಬೇತಿ ನೀಡುತ್ತಿದೆ. ಈವರೆಗೂ 1,400ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಶಿಲ್ಪಕಲಾ ಶಿಕ್ಷಣ ಒದಗಿಸಿದೆ. ಮರ ಮತ್ತು ಕಲ್ಲು ಕೆತ್ತನೆ ಹಾಗೂ ಲೋಹ ಶಿಲ್ಪ ವಿಭಾಗಗಳಲ್ಲಿ 18 ತಿಂಗಳು, ಕುಂಭಕಲೆಗೆ ಆರು ತಿಂಗಳು ತರಬೇತಿ ನೀಡಲಾಗುತ್ತದೆ. 35 ವರ್ಷದೊಳಗಿನ ಆಸಕ್ತರು ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಅದೇ ದಿನ ಸ್ಥಳದಲ್ಲೇ ತರಬೇತಿಗೆ ಆರಂಭಿಸಲಾಗುವುದು.
ಸಂದರ್ಶನಕ್ಕೆ ಬೆಂಗಳೂರು ಸಮೀಪದ ಜೋಗರದೊಡ್ಡಿ (ಬಿಡದಿ ಹೋಬಳಿ, ರಾಮನಗರ ಜಿಲ್ಲೆ)ಯಲ್ಲಿರುವ ಕೆನರಾ ಬ್ಯಾಂಕ್, ಕೆ.ಪಿ.ಜೆ. ಪ್ರಭು ಕರಕುಶಲ ತರಬೇತಿ ಸಂಸ್ಥೆಗೆ ಹಾಜರಾಗಬೇಕು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ. ಮೊ.ಸಂ: 9481739830, 9164984414.
