ಹುಬ್ಬಳ್ಳಿ : ಕವಯತ್ರಿ ವಿಭಾ ಇವರ ನೆನಪಿನಲ್ಲಿ ನೀಡುವ ‘ವಿಭಾ ಸಾಹಿತ್ಯ ಪ್ರಶಸ್ತಿ-2026’ಗೆ ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ.
ಅನುವಾದಿತ ಕವಿತೆಗಳು, ಚುಟುಕು, ಹನಿಗವನಗಳನ್ನು ಪರಿಗಣಿಸುವುದಿಲ್ಲ. ಹಸ್ತಪ್ರತಿ ಕಳಿಸಲು ಕೊನೆಯ ದಿನಾಂಕ 30 ಜೂನ್ 2026. ಡಿಟಿಪಿ, ಬರವಣಿಗೆ ಮಾಡಿದ ಹಸ್ತಪ್ರತಿಯನ್ನು ಕಳಿಸಬಹುದು. ಪ್ರಶಸ್ತಿಯು ರೂ.10,೦೦೦/- ನಗದು, ಫಲಕ ಒಳಗೊಂಡಿದೆ. ಹಸ್ತಪ್ರತಿ ಕಳುಹಿಸಬೇಕಾದ ವಿಳಾಸ : ಸುನಂದಾ ಮತ್ತು ಪ್ರಕಾಶ ಕಡಮೆ, ಸಂಚಾಲಕರು, ವಿಭಾ ಸಾಹಿತ್ಯ ಪ್ರಶಸ್ತಿ-2026, ನಂ.90, ‘ನಾಗಸುಧೆ ಜಗಲಿ’, 6/ಬಿ ಕ್ರಾಸ್, ಕಾಳಿದಾಸನಗರ, ವಿದ್ಯಾನಗರ ವಿಸ್ತೀರ್ಣ, ಹುಬ್ಬಳ್ಳಿ- 580031. ಮೊಬೈಲ್ ಸಂಖ್ಯೆ : 93806 13683.
