ಬೆಂಗಳೂರು : ಬೆಂಗಳೂರು ಆರ್ಟ್ ಫೌಂಡೇಶನ್ ಇದರ ವತಿಯಿಂದ ಕಲಾನ್ವೇಷಕರ ಸ್ಮರಣೆ ಡಾ. ಅ.ಲ. ನರಸಿಂಹನ್ ಮತ್ತು ಎನ್. ಮರಿಶಾಮಾಚಾರ್ ಕುರಿತಾದ ಒಂದು ದಿನದ ವಿಚಾರಸಂಕಿರಣವನ್ನು ದಿನಾಂಕ 07 ಜೂನ್ 2026ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಕಸ್ತೂರಿಬಾ ರಸ್ತೆಯಲ್ಲಿರುವ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮವನ್ನು ಖ್ಯಾತ ಸಾಹಿತಿ ನಾಡೋಜ ಬರಗೂರು ರಾಮಚಂದ್ರಪ್ಪ ಇವರು ಉದ್ಘಾಟನೆ ಮಾಡಲಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷರಾದ ಡಾ. ಎಂ.ಎಸ್. ಮೂರ್ತಿ ಇವರು ಅಧ್ಯಕ್ಷತೆ ವಹಿಸಲಿದ್ದಾರೆ. ಗೋಷ್ಠಿ 1ರ ಅಧ್ಯಕ್ಷತೆಯನ್ನು ಹಿರಿಯ ಲೇಖಕ ಕೆ.ವಿ. ಸುಬ್ರಮಣ್ಯಂ ಇವರು ವಹಿಸಲಿದ್ದು, ‘ಡಾ. ಅ.ಲ. ನರಸಿಂಹನ್ ಮತ್ತು ಎನ್. ಮರಿಶಾಮಾಚಾರ್ ಇವರ ಕೊಡುಗೆ ಬಹುಮುಖ ವ್ಯಕ್ತಿತ್ವ’ ಎಂಬ ವಿಷಯದ ಬಗ್ಗೆ ಸಮಕಾಲೀನ ಕಲಾವಿದ ರವಿಕುಮಾರ್ ಕಾಶಿ, ‘ಅ.ಲ.ನ. ಸಂಶೋಧಕರಾಗಿ ಅಂತರ್ ಶಿಸ್ತಿಯತೆ’ ಎಂಬ ವಿಷಯದ ಬಗ್ಗೆ ಸಂಶೋಧಕ ಡಾ. ಸುಂಕಂ ಗೋವರ್ಧನ ಇವರು ವಿಷಯ ಮಂಡನೆ ಮಾಡಲಿದ್ದಾರೆ. ಗೋಷ್ಠಿ 2ರ ಅಧ್ಯಕ್ಷತೆಯನ್ನು ಕಲಾ ಇತಿಹಾಸಕಾರರಾದ ಹೆಚ್.ಎ. ಅನಿಲ್ ಕುಮಾರ್ ಇವರು ವಹಿಸಲಿದ್ದು, ‘ಕೆನ್ ಕಲಾ ಶಾಲೆ – ಶ್ರೀ ಎನ್. ಮರಿಶಾಮಾಚಾರ್ ಮತ್ತು ಅ.ಲ. ನರಸಿಂಹನ್’ ವಿಷಯದ ಬಗ್ಗೆ ಶ್ರೀಮತಿ ಅಲಕ ರಾವ್ ಮತ್ತು ಬಿ. ಜಯರಾಂ ವಿಷಯ ಮಂಡನೆ ಮಾಡಲಿದ್ದಾರೆ. 3-00 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕಲಾ ಇತಿಹಾಸಕಾರರಾದ ಡಾ. ಆರ್.ಎಚ್. ಕುಲಕರ್ಣಿ ಇವರು ಸಮಾರೋಪ ನುಡಿಗಳನ್ನಾಡಲಿದ್ದಾರೆ.

