ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಅಕಾಡೆಮಿ ಸಭಾಂಗಣದಲ್ಲಿ ದಿನಾಂಕ 04 ಜುಲೈ 2026ರಂದು ಸಂಜೆ 4-00 ಗಂಟೆಗೆ ‘ಕಾವ್ಯಾಂ ವ್ಹಾಳೊ-16’ ಶೀರ್ಷಿಕೆಯಡಿ ಕವಿಗೋಷ್ಠಿಯನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡೆಮಿ ಅಧ್ಯಕ್ಷರಾದ ಶ್ರೀ ಜೋಕಿಂ ಸ್ಟ್ಯಾನಿ ಆಲ್ವಾರಿಸ್‌ರವರು ವಹಿಸಿಕೊಳ್ಳಲಿದ್ದಾರೆ.
ಮಂಗಳೂರು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕರಾದ ಗೋಕುಲ್ ದಾಸ್ ನಾಯಕ್ರವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಹಿರಿಯ ಬ್ರಾಸ್ ಬ್ಯಾಂಡ್ ಕಲಾವಿದರಾಗಿರುವ ಶ್ರೀ ಮೆಲ್ವಿನ್ ಡಿಸೋಜಾ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು. ಖ್ಯಾತ ಕವಯಿತ್ರಿಯಾದ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ರವರು ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಲಿದ್ದು, ಎಡಿ ಕಾಡ್ದೊಸ್ ತಾಕೊಡೆ, ಜಯಶ್ರೀ ಶೆಣೈ, ರಾಮಚಂದ್ರ ಪೈ, ಜೆನೆಲಿಯಾ ಡಿ ಅಲ್ಮೇಡಾ, ಗ್ರೇಶಿಯನ್ ಪಾಲಡ್ಕ, ಸೋನಿಯಾ ಡಿಕೋಸ್ತ, ರಾಘವೇಂದ್ರ ಪ್ರಭು ಕರ್ವಾಲು, ಜ್ಯೂಲಿಯೆಟ್ ಫೆರ್ನಾಂಡಿಸ್, ರೇಮಂಡ್ ಡಿಕೂನಾ, ತಾಕೊಡೆ, ಅಲನಿ ಡಿಸೋಜ, ವಿಲಿಯಂ ಮಾಡ್ತಾ, ಅಲ್ಲಿಪಾದೆ ಮತ್ತು ಅಜಯ್ ಡಿಸೋಜ ಇವರು ತಮ್ಮ ಕವಿತೆಗಳನ್ನು ವಾಚಿಸುವರು. ಕೊಂಕಣಿ ಭಾಂದವರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕೋರಲಾಗಿದೆ.
