ಮೈಸೂರು : ನಿರಂತರ ಫೌಂಡೇಶನ್ (ರಿ) ಮೈಸೂರು ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾ ಆಡಳಿತ ಮೈಸೂರು ಇವರ ಸಹಯೋಗದೊಂದಿಗೆ ಬಸವ ಜಯಂತಿ ಪ್ರಯುಕ್ತ ಬಸವಣ್ಣನವರ ವಚನಗಳನ್ನಾದರಿಸಿದ ‘ಕೂಡಲಸಂಗಮ’ ದೃಶ್ಯ ರೂಪಕವನ್ನು ದಿನಾಂಕ 19 ಏಪ್ರಿಲ್ 2026ರಂದು ಸಂಜೆ 6-00 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರಸಾದ್ ಕುಂದೂರು ಸಾಹಿತ್ಯ ಮತ್ತು ವಿನ್ಯಾಸ, ಡಾ. ಸಿ. ಅಶ್ವತ್ ಸಂಗೀತ ಹಾಗೂ ಸುಗುಣ ಎಂ.ಎಂ. ನಿರ್ದೇಶನ ಮಾಡಿರುತ್ತಾರೆ.

