ಮಂಗಳೂರು : ರಂಗಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಸಮಿತಿ ಹಾಗೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ಕನ್ನಡ ವಿಭಾಗ ಜಂಟಿಯಾಗಿ ಆಯೋಜಿಸುವ ಕಾರ್ಯಕ್ರಮವು ದಿನಾಂಕ 30 ನವೆಂಬರ್ 2026ರಂದು ಸಂಜೆ 5-00 ಗಂಟೆಗೆ ಸಂತ ಅಲೋಶಿಯಸ್ ಕಾಲೇಜಿನ ಎರಿಕ್ ಮಥಾಯಸ್ ಸಭಾಂಗಣದಲ್ಲಿ ನಡೆಯಲಿದೆ.
ಹಿರಿಯ ಯಕ್ಷಗಾನ ಕಲಾವಿದ ಎನ್. ವಸಂತ ಗೌಡರಿಗೆ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ’ ಪ್ರದಾನ ಮಾಡಿ ಗೌರವಿಸಲಾಗುವುದು. ಸಭಾ ಕಾರ್ಯಕ್ರಮದ ನಂತರ ‘ಭರತಾಗಮನ’ ಎಂಬ ಪ್ರಸಂಗದ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದ್ದು, ಸತೀಶ್ ಶೆಟ್ಟಿ ಬೋಂದೆಲ್ ಭಾಗವತರು, ವಿಘ್ನೇಶ್ ಬೋ ಳೂ ರು ಚೆಂಡೆ ಮತ್ತು ಜಯರಾಮ ಆಚಾರ್ಯ ಮದ್ದಲೆ ಹಾಗೂ ಮುಮ್ಮೇಳದಲ್ಲಿ ಜಯಪ್ರಕಾಶ್ ಪೆರ್ಮುದೆ, ಪನೆಯಾಲ ರವಿರಾಜ ಭಟ್, ಗಣೇಶ್ ಕನ್ನಡಿಕಟ್ಟೆ ಮತ್ತು ಹರಿ ರಾಜ್ ಶೆಟ್ಟಿಗಾರ್ ಮುಂತಾದ ಕಲಾವಿದರು ಭಾಗವಹಿಸಲಿದ್ದಾರೆ.

