Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕನ್ನಡ ಭಾಷಾ ಪಠ್ಯ ಕ್ರಮದ ಆಧಾರಿತವಾಗಿ ಕರಾವಳಿ ನಿರ್ದಿಗಂತದಿಂದ ‘ಓದುವ ಆಟ’ ನಾಟಕ
    Drama

    ಕನ್ನಡ ಭಾಷಾ ಪಠ್ಯ ಕ್ರಮದ ಆಧಾರಿತವಾಗಿ ಕರಾವಳಿ ನಿರ್ದಿಗಂತದಿಂದ ‘ಓದುವ ಆಟ’ ನಾಟಕ

    November 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ತೆಕ್ಕಟ್ಟೆ : ಪ್ರಕಾಶ್ ರಾಜ್ ಫೌಂಡೇಶನ್ ಸಾರಥ್ಯದಲ್ಲಿ ಕರಾವಳಿ ನಿರ್ದಿಗಂತದ ತಂಡವು ಪಿಎಂಶ್ರೀ ಕೆಪಿಎಸ್ ಶಾಲೆ ತೆಕ್ಕಟ್ಟೆಯಲ್ಲಿ ದಿನಾಂಕ 25 ನವೆಂಬರ್ 2026ರಂದು ಪ್ರೌಢಶಾಲೆಯ ಕನ್ನಡ ಭಾಷಾ ಪಠ್ಯಕ್ರಮ ಆಧಾರಿತ ‘ಓದುವ ಆಟ’ ಎಂಬ ನಾಟಕ ರೂಪಕ ಕಲಾಭಿನಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿತು. ಇಂತಹ ಹಲವಾರು ನಾವಿನ್ಯಪೂರ್ಣ ಪ್ರಯೋಗದ ಹರಿಕಾರ ಶ್ರೀ ಗಣೇಶ ಮಂದಾರ್ತಿಯವರ ಸಂಗೀತ ಸಂಯೋಜನೆ, ವರ್ಣ ವಿನ್ಯಾಸ ಹಾಗೂ ನಿರ್ದೇಶನದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನಗೊಂಡಿತು.

    ಕಾರ್ಯಕ್ರಮವನ್ನು ಕಾಲೇಜಿನ ಪ್ರಭಾರ ಉಪಪ್ರಾಂಶುಪಾಲರಾದ ಶ್ರೀಮತಿ ಸಿಂತಿಯ ಪಿರೇರಾರವರು ಉದ್ಘಾಟಿಸಿ, ನಾಟಕವು ಮಕ್ಕಳನ್ನು ಕಲ್ಪನಾ ಲೋಕಕ್ಕೆ ಕೊಂಡೊಯ್ಯುವ ಸಾಧನ, ಇದರಿಂದ ಮಕ್ಕಳು ಮನರಂಜನೆಯ ಜೊತೆಗೆ ಪಾಠವನ್ನು ಕಲಿಯಲು ಅನುಕೂಲವಾಗುತ್ತದೆ ಎಂದರು. ಹಿರಿಯ ಶಿಕ್ಷಕರಾದ ಶ್ರೀ ಅಶೋಕ್ ಸೋಮಯಾಜಿಯವರು ಸ್ವಾಗತಿಸಿ, ತಾವು ಬೆಳೆಯುವ ಜೊತೆಗೆ ಮಕ್ಕಳನ್ನು ಬೆಳೆಸುತ್ತಿರುವ ಸಂಸ್ಥೆಯಾದ ನಿರ್ದಿಗಂತದ ಪ್ರಯತ್ನವನ್ನು ಶ್ಲಾಘಿಸಿದರು. ಶ್ರೀ ಗಣೇಶ ಮಂದಾರ್ತಿಯವರು ಕಾರ್ಯಕ್ರಮದ ಔಚಿತ್ಯದ ಕುರಿತು ಪ್ರಾಸ್ತವಿಕ ಮಾತುಗಳನ್ನಾಡಿದರು. ಧಮನಿ (ರಿ.) ತೆಕ್ಕಟ್ಟೆ, ಶ್ರೀಶ ತೆಕ್ಕಟ್ಟೆರವರು ಕಾರ್ಯಕ್ರಮದ ಸಂಯೋಜನೆಯಲ್ಲಿ ನೆರವಾದರು.

    ನಿರ್ದಿಗಂತ ತಂಡವು ಶ್ರೀನಿವಾಸ ಉಡುಪರ ‘ಕಂಬಳಿ ಹುಳು ಮತ್ತು ಚಿಟ್ಟೆ’ ಎಂಬ ಕವಿತೆಯ ಮಾರ್ಮಿಕ ಅಭಿನಯನದೊಂದಿಗೆ ಓದುವ ಆಟವನ್ನು ಪ್ರಾರಂಭಿಸಿದರು. ಜೈನ ಪರಂಪರೆಯ ಬಾಹುಬಲಿಯ ಕಥೆಯನ್ನು ಸಾರುವ ‘ನನ್ನ ಹಾಗೆಯೇ’ ಪದ್ಯ, ‘ಮಗ್ಗದ ಸಾಹೇಬ’, ‘ಹಕ್ಕಿಗಳು ನಾವು’, ‘ಕುಮಾರವ್ಯಾಸ ಭಾರತದ ಉತ್ತರನ ಪೌರುಷ’, ಬೆಟಗೇರಿ ಕೃಷ್ಣ ಶರ್ಮರ ‘ಕಳ್ಳರ ಗುರುಪಾಠ’ ಸೇರಿದಂತೆ ಹಳೆಗನ್ನಡ, ನಡುಗನ್ನಡ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜನಪದ ಸಾಹಿತ್ಯವನ್ನು ಒಳಗೊಂಡ ನಾಟಕ ರೂಪಕಗಳು ಮಕ್ಕಳ ಎದಿರು ಮನರಂಜನೆಯ ಜೊತೆಗೆ ಸುಲಲಿತ, ಸಂತಸ ಕಲಿಕೆಯ ಹೊಸ ಆಯಾಮವನ್ನು ತೆರೆದಿಟ್ಟಿತು. ನಾಟಕದಲ್ಲಿ ನುರಿತ ತಂಡದ ಸದಸ್ಯರ ಅದ್ಬುತ ಹಾಗೂ ಪರಿಣಾಮಕಾರಿ ನಟನಾ ಕೌಶಲ್ಯವು ಎಲ್ಲರ ಮೆಚ್ಚುಗೆಯ ಮನ್ನಣೆ ಗಳಿಸಿ, ವೇದಿಕೆಯಲ್ಲಿ ಹೊಸ ಝಲಕನ್ನು ಮೂಡಿಸಿತು. ನಾಟಕದುದ್ದಕ್ಕೂ ಬಳಸಲಾದ ಸರಳ ವಸ್ತ್ರವಿನ್ಯಾಸ, ಆಕರ್ಷಕ ಸಂಗೀತ ಸಂಯೋಜನೆ, ಸುಲಭ ಪದಗಳ ಬಳಕೆ, ನವರಸಗಳ ಮಿಲಿತ ಭಾವಾಭಿನಯ ಮಕ್ಕಳ ಮನಸೆಳೆಯುವಲ್ಲಿ ಪ್ರಮುಖ ಪಾತ್ರವಹಿಸಿತು. ಈ ಸಂದರ್ಭದಲ್ಲಿ ಸಹ ಶಿಕ್ಷಕರು, ಬಿಎಡ್ ಪ್ರಶಿಕ್ಷಣಾರ್ಥಿಗಳು ಉಪಸ್ಥಿತರಿದ್ದರು.

    baikady drama Literature roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಕೋಟ ಕಾರಂತ ಥೀಂ ಪಾರ್ಕಿನಲ್ಲಿ ‘ಕಿನ್ನರಿ 2026’ ಪ್ರತಿಭೆಗಳ ತುತ್ತೂರಿ | ನವೆಂಬರ್ 29
    Next Article ಅಮೃತ ಪ್ರಕಾಶ ಪತ್ರಿಕೆಯ 123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026

    ಅಮೃತ ಪ್ರಕಾಶ ಪತ್ರಿಕೆಯ 123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    November 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.