ಮಂಗಳೂರು : ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲಾ ಶಾಸ್ತ್ರೀಯ ನೃತ್ಯ ಕಲಾವಿದರ ಸಂಘಟನೆ ‘ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ (ರಿ.) ಮಂಗಳೂರು’ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದಲ್ಲಿ ಪ್ರಸ್ತುತ ಪಡಿಸುವ ‘ನಟರಾಜ್ಯೋತ್ಸವ’ ನೃತ್ಯ ಕಾರ್ಯಕ್ರಮವನ್ನು ದಿನಾಂಕ 29 ನವೆಂಬರ್ 2026ರಂದು ಸಂಜೆ 4-30 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕರಾವಳಿ ನೃತ್ಯಕಲಾ ಪರಿಷತ್ ಇದರ ಅಧ್ಯಕ್ಷರಾದ ವಿದುಷಿ ರಾಜಶ್ರೀ ಉಳ್ಳಾಲ್ ಇವರ ಸಭಾಧ್ಯಕ್ಷತೆಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಗುರು ಉಳ್ಳಾಲ್ ಮೋಹನ್ ಕುಮಾರ್ ಇವರು ದೀಪ ಪ್ರಜ್ವಲನೆ ಮಾಡಲಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯದ ಉದಯೋನ್ಮುಖ ಪುರುಷ ಕಲಾವಿದರಾದ ಉಪಾಧ್ಯೆ ಸ್ಕೂಲ್ ಆಫ್ ಡ್ಯಾನ್ಸ್ ಮತ್ತು ಶ್ರೀ ಮಾವಿನ್ ಖೂ ಇವರ ಶಿಷ್ಯ ವಿದ್ವಾನ್ ಶೋಭಿತ್ ರಮೇಶ್ ಬೆಂಗಳೂರು, ಗುರು ಶ್ರೀ ಕಣ್ಣನ್ ಆರ್. ಮತ್ತು ಶ್ರೀ ಮಾವಿನ್ ಖೂರವರ ಶಿಷ್ಯ ವಿದ್ವಾನ್ ಪವನ್ ಮೈಸೂರು, ಡಾ. ವಿದ್ಯಾಲಕ್ಷ್ಮೀ ಕುಂಬ್ಳೆಯವರ ಶಿಷ್ಯ ವಿದ್ವಾನ್ ಸಾತ್ವಿಕ್ ನೀರಮಾಲೆ ಕೇರಳ, ವಿದುಷಿ ಮಂಜರಿಚಂದ್ರರವರ ಶಿಷ್ಯ ವಿದ್ವಾನ್ ಸರ್ವೇಶ್ ಭಟ್ ಉಡುಪಿ, ವಿದ್ವಾನ್ ಕೆ. ಭವಾನಿ ಶಂಕರ್ ರವರ ಶಿಷ್ಯ ವಿದ್ವಾನ್ ಸಾತ್ವಿಕ್ ಉಡುಪಿ, ವಿದುಷಿ ನಯನ ವಿ. ರೈ ಮತ್ತು ಸ್ವಸ್ತಿಕಾ ಆರ್.ರವರ ಶಿಷ್ಯ ವಿದ್ವಾನ್ ಶೋಭಿತ್ ಬಿ. ಪುತ್ತೂರು, ವಿದುಷಿ ಶಾಲಿನಿ ಆತ್ಮಭೂಷಣ್ ರವರ ಶಿಷ್ಯ ತೇಜಸ್ವಿರಾಜ್ ಪುತ್ತೂರು ಮತ್ತು ವಿದುಷಿ ವಿದ್ಯಾಶ್ರೀ ರಾಧಾಕೃಷ್ಣರವರ ಶಿಷ್ಯ ಆನಂತಕೃಷ್ಣ ಸಿ.ವಿ. ಮಂಗಳೂರು ಏಕವ್ಯಕ್ತಿ ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

