Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ
    Commemoration

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ಮಂಗಳೂರಿನ ಯಕ್ಷಾಂಗಣ, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿವಿ ಡಾ. ದಯಾನಂದ ಪೈ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ ಪುತ್ತೂರು ಸಹಯೋಗದಲ್ಲಿ ಮಂಗಳೂರಿನ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಸುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2026’ ಹದಿನಾಲ್ಕನೇ ವರ್ಷದ ನುಡಿ ಹಬ್ಬದ ಆರನೇ ದಿನ ದಿನಾಂಕ 27 ನವೆಂಬರ್ 2026ರಂದು ಸರಣಿ ಸಂಸ್ಮರಣ ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಿದ್ದ ದಿ. ಕೆ. ಕಾಂತ ರೈ ವಿದ್ವಾನ್ ಮೂಡಬಿದ್ರಿ ಸಂಸ್ಮರಣ ಸಮಾರಂಭ ನಡೆಯಿತು.

    ಈ ಸಮಾರಂಭದಲ್ಲಿ ಸ್ಮೃತಿ ದೀಪ ಹಚ್ಚಿ ಮಾತನಾಡಿದ ಹಿರಿಯ ನಾಟಕಕಾರ ಡಾ. ಸಂಜೀವ ದಂಡಕೇರಿ “ಭಾರತೀಯ ಕಲಾ ಪ್ರಕಾರಗಳಲ್ಲಿ ಹಲವಾರು ಉತ್ತಮ ಮೌಲ್ಯಗಳು ಮತ್ತು ಸಂದೇಶಗಳು ಇವೆ. ಕೇವಲ ಮನೋರಂಜನೆಯೇ ಕಲೆಯ ಉದ್ದೇಶವಲ್ಲ; ವಿದ್ವಾಂಸರಾದ ಕಲಾವಿದರು ಅಂತಹ ಸಂದೇಶಗಳನ್ನು ಸಮರ್ಥವಾಗಿ ನೀಡಬಲ್ಲವರಾದ್ದರಿಂದ ಅವರು ಸಮಾಜಕ್ಕೆ ಮಾರ್ಗದರ್ಶಕರಾಗಿರುತ್ತಾರೆ. ವಿದ್ವಾನ್ ಕಾಂತ ರೈಯವರಂತಹ ಯಕ್ಷಗಾನದ ವಿದ್ವಾಂಸರು ಈ ನಿಟ್ಟಿನಲ್ಲಿ ಸ್ಮರಣೀಯರು” ಎಂದು ಹೇಳಿದರು.

    ಮೂಡಬಿದ್ರಿ ಧನಲಕ್ಷ್ಮಿ ಕ್ಯಾಶು ಇಂಡಸ್ಟ್ರೀಸ್ ಮಾಲಕ ಶ್ರೀಪತಿ ಭಟ್, ಬೊಂಡಾಲ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಪ್ರಗತಿ ಹಾರ್ಡ್ ವೇರ್ಸ್ ನ ಲ| ಶ್ರೀನಾಥ್ ಕೊಂಡೆ, ಶಬರಿ ಕ್ಯಾಟರರ್ಸ್ ನ ಲ| ರಾಜೇಶ್ ಶೆಟ್ಟಿ, ಕುಳಾಲು ಮನೆತನದ ಜಯರಾಮ ಸಾಂತ ಮುಖ್ಯ ಅತಿಥಿಗಳಾಗಿದ್ದರು. ಉಳ್ಳಾಲ ಬಂಟರ ಸಂಘದ ಅಧ್ಯಕ್ಷ ಕುಳಾಲು ರವೀಂದ್ರ ರೈ ಕಲ್ಲಿಮಾರ್ ನುಡಿನಮನ ಸಲ್ಲಿಸಿದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ವಂದಿಸಿದರು. ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ, ಸಿದ್ದಾರ್ಥ ಅಜ್ರಿ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು.

    ಸಮಾರಂಭದ ಬಳಿಕ ಹರೀಶ್ ಶೆಟ್ಟಿ ಸೂಡ ಅವರು ಬರೆದ ನೂತನ ತುಳು ಪ್ರಸಂಗ ‘ದಾನಕೋಟಿ ದಾಮಾಜಿ’ ತುಳು ತಾಳಮದ್ದಳೆ ಜರಗಿತು. ಶ್ರೀ ಸುಬ್ರಹ್ಮಣ್ಯ ಯಕ್ಷ ಬಳಗ ಸೂಡ ಸಂಯೋಜನೆಯಲ್ಲಿ ಭಾಗವತರಾಗಿ ಹರೀಶ್ ಶೆಟ್ಟಿ ಸೂಡ ಹಾಗೂ ಆನಂದ ಪಡ್ರೆ, ಸ್ಕಂದ ಕೊನ್ನಾರ್ ಮತ್ತು ಅಕ್ಷಯ್ ಶೆಟ್ಟಿ ಕಲ್ಯಾ ಹಿಮ್ಮೇಳದಲ್ಲಿ ಸಹಕರಿಸಿದರು. ಪ್ರಸಿದ್ಧ ಕಲಾವಿದರಾದ ಡಾ. ಎಂ. ಪ್ರಭಾಕರ ಜೋಶಿ (ಬೀದರ್ ದೊರೆ) ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ದಾಮಾಜಿ ಪಂತ), ಸದಾಶಿವ ಆಳ್ವ ತಲಪಾಡಿ (ಪಾಂಡುರಂಗ ವಿಠಲ), ಡಾ. ಮಹೇಶ ಸಾಣೂರು (ಸುಶೀಲೆ) ಮತ್ತು ಸುರೇಶ್ ಕೊಲಕಾಡಿ (ಮಜೂಮ್ದಾರ) ಅರ್ಥಧಾರಿಗಳಾಗಿ ಭಾಗವಹಿಸಿದ್ದರು.

    baikady commemoration Music roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಅಮೃತ ಪ್ರಕಾಶ ಪತ್ರಿಕೆಯ 123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ
    Next Article ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಅಮೃತ ಪ್ರಕಾಶ ಪತ್ರಿಕೆಯ 123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    November 28, 2026

    ಕನ್ನಡ ಭಾಷಾ ಪಠ್ಯ ಕ್ರಮದ ಆಧಾರಿತವಾಗಿ ಕರಾವಳಿ ನಿರ್ದಿಗಂತದಿಂದ ‘ಓದುವ ಆಟ’ ನಾಟಕ

    November 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.