ಬೆಂಗಳೂರು : ಶ್ರೀ ಮಾಲೂರು ಸೂರಪ್ಪ ದತ್ತಿ ಆಶ್ರಯದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಂ.ವಿ. ಸೂರಪ್ಪ ಸ್ಮರಣಾರ್ಥ ಮೊದಲ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ದಿನಾಂಕ 16 ಮೇ 2026ರಂದು ಸಂಜೆ 6-00 ಗಂಟೆಗೆ ಬೆಂಗಳೂರಿನ ಬಸವನ ಗುಡಿ ರಸ್ತೆಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ. ವೈ.ವಿ. ಗುಂಡೂರಾವ್ ಇವರು ‘ಹಾಸ್ಯ ಸ್ವಾರಸ್ಯ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಎಂ.ವಿ. ಸೂರಪ್ಪ ಇವರ ಪುತ್ರರಾದ ಎಂ.ಎಸ್. ನರಸಿಂಹ ಮೂರ್ತಿ ಇವರು ತಮಗೆಲ್ಲರಿಗೂ ಆದರದ ಸ್ವಾಗತ ಬಯಸಿದ್ದಾರೆ.

