ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ‘ಆಬೊಲಿಂ’ ಮಹಿಳಾ ಕವಿಗೋಷ್ಠಿ, ದಿನಾಂಕ 07 ಮಾರ್ಚ್ 2025ರಂದು ಸಂಜೆ ಘಂಟೆ 4.00ರಿಂದ ಮಂಗಳೂರಿನ ಕೊಂಕಣಿ ಅಕಾಡೆಮಿ ಕಚೇರಿಯಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತೆ ಸುಚಿತ್ರಾ ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ‘ನಮ್ಮ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ ಅಂದು ಇಂದು’ ವಿಷಯದ ಬಗ್ಗೆ ಆಪ್ತ ಸಮಾಲೋಚಕಿ ಡಾ. ಜೂಡಿ ಪಿಂಟೊ ಮಾತನಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಗ್ರೇಸ್ ನೊರೊನ್ಹಾ ಅವರನ್ನು ಸಮ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದ ಬಳಿಕ ಡಾ. ಆನ್ನಿ ಕ್ಯಾಸ್ತೆಲಿನೊ ಕವಿ ಗೋಷ್ಠಿ ನಡೆಸಿಕೊಡಲಿದ್ದಾರೆ.

