ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಉರ್ವಾ ಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನ ಇದರ ವತಿಯಿಂದ ‘ತುಳು ಮಹಾಕಾವ್ಯದ ಸೇಸೆ’ ಕವಿ ಮಂದಾರ ಕೇಶವ ಭಟ್ ಇವರು ರಚಿಸಿರುವ ‘ಮಂದಾರ ರಾಮಾಯಣ’ ತುಳು ಮಹಾಕಾವ್ಯದ ವಾಚನ, ವ್ಯಾಖ್ಯಾನ ಕಾರ್ಯಕ್ರಮವನ್ನು ದಿನಾಂಕ 29 ಸೆಪ್ಟೆಂಬರ್ 2026ರಂದು ಸಂಜೆ 4-00 ಗಂಟೆಗೆ ಮಂಗಳೂರಿನ ಉರ್ವಾಸ್ಟೋರ್ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆಯೋಜಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಸುರೇಶ್ ರಾವ್ ಅತ್ತೂರು ಕಾವ್ಯ ವಾಚನ ನಡೆಸಲಿದ್ದು, ಯಕ್ಷಗಾನ ಕಲಾವಿದರಾದ ಸದಾಶಿವ ಆಳ್ವ ತಲಪಾಡಿ ಇವರು ಕಾವ್ಯ ವ್ಯಾಖ್ಯಾನ ನಡೆಸಲಿದ್ದಾರೆ ಎಂದು ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ತಿಳಿಸಿದ್ದಾರೆ.

