ಮಂಗಳೂರು : ಸೋಮೇಶ್ವರ ಕೊಲ್ಯದಲ್ಲಿರುವ ನಾಟ್ಯನಿಕೇತನ (ರಿ.) ಆಯೋಜಿಸುವ ‘ಕರ್ನಾಟಕ ರಾಜ್ಯೋತ್ಸವ’, ‘ಶಾಂತಲಾ ನಾಟ್ಯ’ ಪ್ರಶಸ್ತಿ’ ಪುರಸ್ಕೃತ ನೃತ್ಯ ಗುರು ನಾಟ್ಯಾಚಾರ್ಯ ಶ್ರೀ ಉಳ್ಳಾಲ ಮೋಹನ್ ಕುಮಾರ್ ಇವರ 90ನೇ ವರ್ಷಾಚರಣೆಯ ಪ್ರಯುಕ್ತ ನೃತ್ಯಶ್ರೀ ಸರಣಿ-ಮಾಲಿಕೆ 30ರ ‘ನಾಟ್ಯ ಮೋಹನ ನವತ್ಯುತ್ಸಹ’ ಕಾರ್ಯಕ್ರಮವನ್ನು ದಿನಾಂಕ 27 ಸೆಪ್ಟೆಂಬರ್ 2026ರಂದು ಸಂಜೆ 6-00 ಗಂಟೆಗೆ ಕೊಲ್ಯದ ನಾಟ್ಯನಿಕೇತನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಕರ್ನಾಟಕ ಕಲಾತಿಲಕ ನಾಟ್ಯಾಚಾರ್ಯ ಶ್ರೀ ಉಳ್ಳಾಲ್ ಮೋಹನ್ ಕುಮಾರ್ ಇವರಿಂದ ದೇವತಾ ದೀಪ ಪ್ರಜ್ವಲನೆಯೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಡಾ. ಆರ್. ಮನೋಜ್ ಕುಮಾರ್ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ತುಮಕೂರಿನ ಶ್ರೀ ಸಾಯಿ ರಾಮನ್ ನೃತ್ಯ ಕೇಂದ್ರದ ನಿರ್ದೇಶಕರಾದ ವಿದ್ವಾನ್ ಡಾ. ಸಾಗರ್ ಟಿ.ಎಸ್. ಇವರು ನೃತ್ಯ ಪ್ರಸ್ತುತಿ ನೀಡಲಿದ್ದಾರೆ.

