ಮಂಗಳೂರು: ಕನ್ನಡ ರಾಜ್ಯೋತ್ಸವ ಸಮಿತಿ ಹಾಗೂ ಕಲ್ಕೂರ ಪ್ರತಿಷ್ಠಾನ, ಏರ್ಪಡಿಸುವ ಕನ್ನಡ ರಾಜ್ಯೋತ್ಸವ ಸಮಾರಂಭದ ಪ್ರಯುಕ್ತ ರಾಜ್ಯೋತ್ಸವ ಕವಿಗೋಷ್ಠಿಗೆ ಸ್ವರಚಿತ ಕವನಗಳನ್ನು ಆಹ್ವಾನಿಸಲಾಗಿದೆ. ಕನ್ನಡ ನಾಡು, ನುಡಿ ಸಂಸ್ಕೃತಿ, ಪರಿಸರ ಸಹಿತ ಪ್ರಸ್ತುತ ವಿದ್ಯಮಾನ ಹಾಗೂ ರಾಷ್ಟ್ರೀಯತೆ ವಿಷಯಾಧಾರಿತ ಕವನಗಳನ್ನು ಕಳುಹಿಸಲು ಅವಕಾಶವಿದೆ.
ಸ್ಪರ್ಧೆಯನ್ನು ಪ್ರೌಢ ಶಾಲಾ ವಿಭಾಗ, ಕಾಲೇಜು ವಿಭಾಗ ಹಾಗೂ ಮುಕ್ತ ವಿಭಾಗ ಒಟ್ಟು 3 ವಿಭಾಗಗಳಲ್ಲಿ ಆಯೋಜಿಸಲಾಗಿದೆ. ಕವನಗಳು ಗರಿಷ್ಟ 5 ಚರಣಗಳಿಗೆ ಮೀರಬಾರದು ಹಾಗೂ ಈ ಹಿಂದೆ ಎಲ್ಲೂ ಪ್ರಕಟವಾಗಿರಬಾರದು. ಪ್ರೌಢಶಾಲಾ ವಿಭಾಗ / ಕಾಲೇಜು ವಿಭಾಗದ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯೋಪಾಧ್ಯಾಯರ ಸಹಿ ಹಾಗೂ ಮೊಹರುಳ್ಳ ದೃಢೀಕರಣ ಪತ್ರವನ್ನು ತಾವೇ ಬರೆದ ಕವನದೊಂದಿಗೆ ಲಗತ್ತಿಸಿರಬೇಕು.
ಕವನಗಳನ್ನು 30 ಅಕ್ಟೋಬರ್ 2024ರ ಒಳಗಾಗಿ ರಾಜ್ಯೋತ್ಸವ ಕವನ ಸ್ಪರ್ಧಾ ವಿಭಾಗ, ಕಲ್ಕೂರ ಪ್ರತಿಷ್ಠಾನ, ಶ್ರೀಕೃಷ್ಣ ಸಂಕೀರ್ಣ, ಕೊಡಿಯಾಲ್‌ಬೈಲ್, ಮಂಗಳೂರು-575003 ಈ ವಿಳಾಸಕ್ಕೆ ಕಳುಹಿಸಿ ಕೊಡುವಂತೆ ಪ್ರತಿಷ್ಠಾನದ ಅಧ್ಯಕ್ಷ ಹಾಗೂ ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ನಿಕಟಪೂರ್ವ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Next Article ಗಂಜೀಫಾ ರಘುಪತಿ ಭಟ್‌ಗೆ ಕಾಳಿದಾಸ ಸಮ್ಮಾನ್ ಪ್ರಶಸ್ತಿ
Related Posts
Comments are closed.