Subscribe to Updates

    Get the latest creative news from FooBar about art, design and business.

    What's Hot

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ವಿಶೇಷ ಉಪನ್ಯಾಸ ಮತ್ತು ಏಕವ್ಯಕ್ತಿ ರಂಗ ಪ್ರಯೋಗ | ನವೆಂಬರ್ 29
    Drama

    ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ವಿಶೇಷ ಉಪನ್ಯಾಸ ಮತ್ತು ಏಕವ್ಯಕ್ತಿ ರಂಗ ಪ್ರಯೋಗ | ನವೆಂಬರ್ 29

    November 28, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಧಾರವಾಡ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) ಟ್ರಸ್ಟ್ (ರಿ.) ಧಾರವಾಡ ಮತ್ತು ಜಿ. ಬಿ. ಜೋಶಿ ಮೆಮೋರಿಯಲ್ ಟ್ರಸ್ಟ್ (ರಿ.) ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ‘ಕನ್ನಡ ರಾಜ್ಯೋತ್ಸವ ಮತ್ತು ಆಧುನಿಕ ಕನ್ನಡ ರಂಗಭೂಮಿ ದಿನ’ದ ಕಾರ್ಯಕ್ರಮವನ್ನು ದಿನಾಂಕ 29 ನವೆಂಬರ್ 2026ರ ಭಾನುವಾರ ಸಂಜೆ 6-00 ಗಂಟೆಗೆ ಧಾರವಾಡದ ಸುವರ್ಣ ಸಾಂಸ್ಕೃತಿಕ ಸಮುಚ್ಛಯ ಭವನ, ರಂಗಾಯಣ ಇಲ್ಲಿ ಏರ್ಪಡಿಸಲಾಗಿದೆ. ಇದರ ಅಂಗವಾಗಿ ಖ್ಯಾತರಂಗ ನಿರ್ದೇಶಕ ಡಾ. ಪ್ರಕಾಶ ಗರುಡ ಇವರಿಂದ ‘ಆಧುನಿಕ ಕನ್ನಡ ವೃತ್ತಿ ರಂಗಭೂಮಿ ಉದಯಕ್ಕೆ ಶಾಂತಕವಿಗಳ ಕೊಡುಗೆ’ ಎಂಬ ವಿಷಯದ ಬಗ್ಗೆ ಉಪನ್ಯಾಸ ಹಾಗೂ ‘ಅಯನಾ ಕಲಾತಂಡ ಮೂಡಬಿದರೆ’ ಇವರಿಂದ ‘ಊರ್ಮಿಳಾ’ ಎಂಬ ಏಕವ್ಯಕ್ತಿ ನಾಟಕ ಪ್ರದರ್ಶನವನ್ನು ಏರ್ಪಡಿಸಿದೆ.

    ಈ ನಾಟಕವನ್ನು ಖ್ಯಾತ ರಂಗ ನಿರ್ದೇಶಕ ಡಾ. ಶ್ರೀಪಾದ ಭಟ್ ರವರು ನಿರ್ದೇಶಿಸಿರುತ್ತಾರೆ. ಊರ್ಮಿಳಾ ಪಾತ್ರವನ್ನು ಕುಮಾರಿ ಅಯನಾ ವಿ. ರಮಣ್ ಇವರು ಅಭಿನಯಿಸಿದ್ದಾರೆ. ಇವರು ಭರತನಾಟ್ಯ ಪ್ರದರ್ಶನದಲ್ಲಿ ಅನೇಕ ಬಹುಮಾನವನ್ನು ಪಡೆದಿದ್ದು, ದೇಶ-ವಿದೇಶಗಳಲ್ಲಿ 700ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುತ್ತಾರೆ.

    ಊರ್ಮಿಳಾ ರಾಮಾಯಣದ ಪ್ರಮುಖ ಹಾಗೂ ತ್ಯಾಗಮಯ ಪಾತ್ರವಾದ ಊರ್ಮಿಳೆಯ ಕಥೆಯನ್ನು ಪ್ರಧಾನವಾಗಿರಿಸಿಕೊಂಡ ಸ್ತ್ರೀ ಸಂವೇದನೆಯ ಅಪರೂಪದ ರಂಗಪ್ರಯೋಗವಾಗಿದೆ. ಮೇಲ್ನೋಟಕ್ಕೆ ಅವಳ ಜೀವನವೆಲ್ಲಾ ಶಾಂತವಾದ ಒಳಹರಿವಿನಂತೆ ಕಂಡರೂ ಒಳಗೆಲ್ಲಾ ತೀವ್ರತೆಯಲ್ಲಿ ಬೆಂದ ಕುರುಹುಗಳಿವೆ. ಪ್ರೀತಿಸುವುದು, ಧ್ವೇಷಿಸುವುದು, ಸಹಿಸುವುದು, ತಿರಸ್ಕರಿಸುವುದು ಎಲ್ಲದರಲ್ಲೂ ತೀವ್ರತೆಯ ಛಾಯೆ, ರಾಜಕೀಯ ಒಳಸುಳಿಗಳು, ಅಧಿಕಾರದಾಹ, ಬಿಳಿ ತೊಗಲ ದಬ್ಬಾಳಿಕೆ, ವರ್ಣ ಸಂಘರ್ಷ ಇತ್ಯಾದಿಗಳ ಕುರಿತು ಊರ್ಮಿಳಾ ರಾಮಾಯಣವನ್ನು ವರ್ತಮಾನಿಕರಿಸುತ್ತಾಳೆ. ಈ ನಾಟಕವನ್ನು ಶ್ರೀ ಎಚ್.ಎಸ್. ವೆಂಕಟಮೂರ್ತಿರವರು ರಚಿಸಿರುತ್ತಾರೆ. ಈ ನಾಟಕವು 60 ನಿಮಿಷದ್ದಾಗಿದ್ದು, ಪ್ರೇಕ್ಷಕರಿಗೆ ಅತ್ಯುತ್ತಮ ಮನೋರಂಜನೆಯನ್ನು ನೀಡುತ್ತದೆ. ಪ್ರದರ್ಶನಕ್ಕೆ ಪ್ರವೇಶ ದರ ರೂ.200/-ರನ್ನು ನಿಗದಿಪಡಿಸಲಾಗಿದ್ದು, ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ನಾಟಕಕ್ಕೆ ಆಗಮಿಸಿ ಉದಯೋನ್ಮುಖ ಕಲಾವಿದೆಯನ್ನು ಪ್ರೋತ್ಸಾಹಿಸಬೇಕಾಗಿ ಕೋರಿದೆ.

    baikady drama Literature Music roovari theatre
    Share. Facebook Twitter Pinterest LinkedIn Tumblr WhatsApp Email
    Previous Articleಮಂಗಳೂರಿನ ರಾಮಕೃಷ್ಣ ಮಠದಲ್ಲಿ ಉದ್ಘಾಟನೆಗೊಂಡ ‘ಮಂಗಳೂರು ಸಂಗೀತೋತ್ಸವ’
    Next Article ವಿಶೇಷ ಲೇಖನ | ವಚನ ಸಾಹಿತ್ಯದ ಸಂಶೋಧಕ, ಚಿಂತಕ ಮತ್ತು ವಿಚಾರಕ್ರಾಂತಿಯ ಹರಿಕಾರ ಡಾ. ಎಂ. ಎಂ. ಕಲಬುರ್ಗಿ
    roovari

    Add Comment Cancel Reply


    Related Posts

    ಮಂಗಳೂರಿನ ಪುರಭವನದಲ್ಲಿ ‘ನಟರಾಜ್ಯೋತ್ಸವ’ ನೃತ್ಯ ಪ್ರಸ್ತುತಿ | ನವೆಂಬರ್ 29

    November 28, 2026

    ಅಲೋಶಿಯಸ್ ಕಾಲೇಜಿನಲ್ಲಿ ‘ಕುಂಬ್ಳೆ ಸುಂದರ ರಾವ್ ಸಂಸ್ಮರಣಾ ಪ್ರಶಸ್ತಿ 2026’ | ನವೆಂಬರ್ 30

    November 28, 2026

    ಯಕ್ಷಾಂಗಣ ತಾಳಮದ್ದಳೆ ಸಪ್ತಾಹದಲ್ಲಿ ವಿದ್ವಾನ್ ಕಾಂತ ರೈ ಸಂಸ್ಮರಣೆ – ತುಳು ತಾಳಮದ್ದಳೆ

    November 28, 2026

    ಅಮೃತ ಪ್ರಕಾಶ ಪತ್ರಿಕೆಯ 123ನೇಯ ಸಾಹಿತ್ಯ ಅಭಿರುಚಿ ಕಾರ್ಯಕ್ರಮ

    November 28, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.