Subscribe to Updates

    Get the latest creative news from FooBar about art, design and business.

    What's Hot

    ಪುಸ್ತಕ ವಿಮರ್ಶೆ | ಚೇತೋಹಾರಿ ಕೌಟುಂಬಿಕ ಕಥೆಗಳು

    July 23, 2026

    ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಪ್ರಬಂಧಗಳ ಆಹ್ವಾನ | ಆಗಸ್ಟ್ 01

    July 23, 2026

    ತುಳು ಭವನದಲ್ಲಿ ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ಸರಣಿ

    July 23, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಶ್ರೀ ಕೃಷ್ಣ ತುಲಾಭಾರ’ ಕಥಾಕೀರ್ತನ
    Harikathe

    ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಶ್ರೀ ಕೃಷ್ಣ ತುಲಾಭಾರ’ ಕಥಾಕೀರ್ತನ

    May 25, 2026No Comments1 Min Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಸುರತ್ಕಲ್ : ಮಣಿ ಕೃಷ್ಣಸ್ವಾಮಿ ಅಕಾಡೆಮಿ ಮತ್ತು ಸುರತ್ಕಲ್ ನಾಗರಿಕ ಸಲಹಾ ಸಮಿತಿ ಇವರ ಆಶ್ರಯದಲ್ಲಿ ದಿನಾಂಕ 20 ಮೇ 2026ರಂದು ಸುರತ್ಕಲ್ ಅನುಪಲ್ಲವಿಯ ಶ್ರೀ ವಿಶ್ವೇಶತೀರ್ಥ ಸಭಾಂಗಣದಲ್ಲಿ ಹರಿಕಥಾ ಕೀರ್ತನ ಕಾರ್ಯಕ್ರಮವು ನಡೆಯಿತು.

    ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ವಿಜಯ ಬ್ಯಾಂಕಿನ ನಿವೃತ್ತ ಮುಖ್ಯ ಪ್ರಬಂಧಕ ಮತ್ತು ಪುತ್ತೂರು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ಸುಂದರ ಶೆಟ್ಟಿ ಬೆಟ್ಟಂಪಾಡಿ “ಕಥಾ ಕೀರ್ತನೆಯು ಜೀವನ ಮೌಲ್ಯಗಳು ಮತ್ತು ಪೌರಾಣಿಕ ಪ್ರಜ್ಞೆಯನ್ನು ಮೂಡಿಸುವ ಶ್ರೇಷ್ಠ ಕಲೆಯಾಗಿದೆ. ಕಥಾ ಕೀರ್ತನೆಗೆ ಹಿರಿದಾದ, ಪರಂಪರೆಯಿದ್ದು ಧಾರ್ಮಿಕ ಕೇಂದ್ರಗಳು ಈ ಕಲೆಯ ಬೆಳವಣಿಗೆಗೆ ಪ್ರೋತ್ಸಾಹ ನೀಡಬೇಕಾಗಿವೆ” ಎಂದು ನುಡಿದರು.

    ಹರಿಕಥಾ ಪರಿಷತ್‌ನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್‌ ಮಾತನಾಡಿ “ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹರಿದಾಸರ ಸಂಖ್ಯೆ ಕಡಿಮೆಯಾಗುತ್ತಿದ್ದು, ಯುವ ಸಮುದಾಯ ಆಸಕ್ತಿ ತಾಳ ಬೇಕಾಗಿದೆ. ಹರಿಕಥಾ ಪರಿಷತ್ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಸಂಸ್ಥೆಗಳ ಸಹಕಾರ ಅಗತ್ಯ” ಎಂದರು.

    ಕಲಾಸಾರಥಿ ತೋನ್ಸೆ ಪುಷ್ಕಳ ಕುಮಾರ್ ಇವರಿಂದ ‘ಶ್ರೀ ಕೃಷ್ಣ ತುಲಾಭಾರ’ ಕಥಾ ಕೀರ್ತನ ನಡೆಯಿತು. ತಬಲಾದಲ್ಲಿ ದೀಪಕ್ ರಾಜ್ ಉಳ್ಳಾಲ್ ಮತ್ತು ಕೀ ಬೋರ್ಡ್‌ನಲ್ಲಿ ಸತೀಶ್ ಸುರತ್ಕಲ್ ಸಹಕರಿಸಿದರು. ಹರಿಕಥಾ ಪರಿಷತ್‌ನ ಉಪಾಧ್ಯಕ್ಷ ನಾರಾಯಣ ರಾವ್ ಮತ್ತು ವಿಭು ರಾವ್ ಉಪಸ್ಥಿತರಿದ್ದರು. ಮಣಿ ಕೃಷ್ಣಸ್ವಾಮಿ ಅಕಾಡೆಮಿಯ ಕಾರ್ಯದರ್ಶಿ ಪಿ. ನಿತ್ಯಾನಂದ ರಾವ್ ಸ್ವಾಗತಿಸಿ, ಕೃಷ್ಣಮೂರ್ತಿ ವಂದಿಸಿದರು.

    baikady Harikathe Music roovari
    Share. Facebook Twitter Pinterest LinkedIn Tumblr WhatsApp Email
    Previous Article‘ನೃತ್ಯಶಂಕರ’ ಸಮೂಹ ನೃತ್ಯಸರಣಿ 10ರಲ್ಲಿ ನೃತ್ಯ ಪ್ರದರ್ಶನ | ಮೇ 25
    Next Article ವಿವಿಯಲ್ಲಿ ‘ಆನು ಒಲಿದಂತೆ ಹಾಡುವೆ -5’ ಸಾಹಿತ್ಯ ಅವಲೋಕನ ಮತ್ತು ಸಂವಾದ | ಮೇ 27
    roovari

    Add Comment Cancel Reply


    Related Posts

    ಪುಸ್ತಕ ವಿಮರ್ಶೆ | ಚೇತೋಹಾರಿ ಕೌಟುಂಬಿಕ ಕಥೆಗಳು

    July 23, 2026

    ರಾಷ್ಟ್ರೀಯ ವಿಚಾರಸಂಕಿರಣಕ್ಕೆ ಪ್ರಬಂಧಗಳ ಆಹ್ವಾನ | ಆಗಸ್ಟ್ 01

    July 23, 2026

    ತುಳು ಭವನದಲ್ಲಿ ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ ಸರಣಿ

    July 23, 2026

    ಪ್ರತಿಷ್ಠಿತ ‘ಬಿ.ಎಸ್. ಗೋಪಾಲಕೃಷ್ಣ ದತ್ತಿ ಪ್ರಶಸ್ತಿ’ಗೆ ಕೃತಿಗಳ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 02

    July 23, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.