ಮಂಗಳೂರು : ಸಂತ ಅಲೋಶಿಯಸ್ ಕಾಲೇಜಿನ ಮ್ಯೂಸಿಕ್ ಅಸೋಸಿಯೇಶನ್ ಸಹಯೋಗದಲ್ಲಿ ಮಂಗಳೂರಿನ ಜರ್ನಿ ಥೇಟರ್ ಗ್ರೂಪ್ ಪ್ರಸ್ತುತ ಪಡಿಸಿದ ‘ಜನಪದ ಗೀತೆ ಹಾಗೂ ರಂಗಸಂಗೀತ’ ಗಾಯನ ಕಾರ್ಯಕ್ರಮ ನಗರದ ಸಂತ ಅಲೋಶಿಯಸ್ ಕಾಲೇಜಿನ ಫಾ. ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ದಿನಾಂಕ 11-08-2023ರಂದು ನಡೆಯಿತು.
ಈ ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ರೆ.ಫಾ.ಪ್ರವೀಣ್ ಮಾರ್ಟಿಸ್ ಎಸ್.ಜೆ., ಇ.ಸಿ. ಮತ್ತು ಸಿ.ಸಿ. ಸಂಚಾಲಕರಾದ ಶ್ರೀ ಅಶೋಕ್ ಪ್ರಸಾದ್, ಡಾ.ದಿನೇಶ್ ನಾಯಕ್, ವ್ಯವಸ್ಥಾಪನಾ ವಿಭಾಗದ ನಿರ್ದೇಶಕರಾದ ಡಾ.ಚಾರ್ಲ್ಸ್ ಫುರ್ತಾದೋ, ಎಲ್.ಸಿ.ಆರ್.ಐ ವಿಭಾಗದ ನಿರ್ದೇಶಕರಾದ ಡಾ.ರೋನಾಲ್ಡ್ ನಜ್ರತ್, ಹಣಕಾಸು ಅಧಿಕಾರಿಯಾದ ಫಾ.ವಿನ್ಸೆಂಟ್ ಲೋಬೊ, ಮ್ಯೂಸಿಕ್ ಅಸೋಸಿಯೇಶನ್ನಿನ ಅಧ್ಯಕ್ಷರಾದ ಡಾ.ಸ್ಮಿತಾ ಡಿ.ಕೆ. ಮತ್ತು ಡಾ.ಭಾರತಿ ಉಪಸ್ಥಿತರಿದ್ದರು.
ರೋಹನ್ ಎಸ್.ಉಚ್ಚಿಲ್, ಭವ್ಯ ಶೆಟ್ಟಿ, ಸುನಿಲ್ ಪಲ್ಲಮಜಲು, ಅರ್ಜುನ್ ಆಚಾರ್ಯ, ಶಶಾಂಕ್ ಐತಾಳ್, ಅರ್ಲ್ ಬ್ರ್ಯಾನ್, ರಾಘವ್ ಸೂರಿ, ಸುಧೀಶ್ ಕೂಡ್ಲು, ಚಿನ್ಮಯಿ ಭಟ್, ಮೇಘನಾ ಕುಂದಾಪುರ, ಸಕೇತಾ ಶೆಟ್ಟಿ, ಶರಣ್ಯಾ ಭಟ್, ಮೇಘಾ ಸುರತ್ಕಲ್, ಗೌತಮ್ ಬಿರ್ವ, ಗೌತಮ್ ಶೆಟ್ಟಿ, ರಾಹುಲ್ ಕುಡುಪು ಇವರುಗಳು ಸುಮಧುರವಾಗಿ ಹಾಡಿದರು.