ಕೋಟೇಶ್ವರ : ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆ ಹಾಗೂ ಯಕ್ಷ ನುಡಿಸಿರಿ ಬಳಗ ಸಿದ್ಧಾಪುರ ಸಹಯೋಗದಲ್ಲಿ ದಿನಾಂಕ 26 ಅಕ್ಟೋಬರ್ 2026ರಂದು ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ‘ಅರ್ಥಾಂಕುರ-36’ದಲ್ಲಿ ‘ಭೀಷ್ಮೋತ್ಪತ್ತಿ’ ತಾಳಮದ್ದಳೆ ನಡೆಯಿತು.
ಈ ಕಾರ್ಯಕ್ರಮದಲ್ಲಿ ಭಾಗವಹಿಸದ್ದ ಗತಕಾಲದ ಶಿರಸಿ ಮೇಳದಲ್ಲಿ ಯಜಮಾನರಾಗಿದ್ದ ಕೃಷ್ಣ ನಾಯಕ್ ಕೋಟೇಶ್ವರ ಮಾತನಾಡಿ “ತಾಳಮದ್ದಳೆ ಕಲಾ ಪ್ರಕಾರ ಅತ್ಯಂತ ವಿರಳವಾಗುತ್ತಿರುವ ಕಾಲಘಟ್ಟದಲ್ಲಿ ತಿಂಗಳಿಗೆ ನಾಲ್ಕು ತಾಳಮದ್ದಳೆಯನ್ನು ಸಂಘಟಿಸುತ್ತಾ ಹೊಸ ತಲೆಮಾರಿನ ಅರ್ಥದಾರಿಗಳನ್ನು ಪರಿಶೋಧಿಸುತ್ತಿರುವ ಉಭಯ ಸಂಸ್ಥೆಗಳ ಕಾರ್ಯ ಶ್ಲಾಘ್ಯಾಯೋಗ್ಯ ವಿಚಾರ. ಹಿಂದೆ ಪುರಾಣ ಪ್ರವಚನಗಳು ದೇಗುಲದಲ್ಲಿ ಆಗಾಗ ನಡೆಯುತ್ತಿದ್ದವು. ಇತ್ತೀಚೆಗೆ ಬಹಳ ವಿರಳವಾಗುತ್ತಿರುವ ಕಾಲಕ್ಕೆ ಮತ್ತೆ ಪುರಾಣ ಕಥೆಗಳನ್ನು ಮನನ ಮಾಡಿಕೊಳ್ಳುವುದಕ್ಕೆ ಅನುಕೂಲವಾಗುವಂತೆ ದೇಗುಲಗಳಲ್ಲಿ ತಾಳಮದ್ದಳೆ ಆಯೋಜಿಸುತ್ತಾ ಗೆದ್ದಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ದೇಗುಲದ ಅಧ್ಯಕ್ಷರಾದ ಗೋಪಾಲಕೃಷ್ಣ ಶೆಟ್ಟಿ ಮಾರ್ಕೋಡು ದೇಗುಲದ ಚರಿತ್ರೆಯ ಪುಸ್ತಕವನ್ನು ಅತಿಥಿಗಳಿಗೆ ಹಸ್ತಾಂತರಿಸಿದರು. ಕಲಾವಿದರಾದ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ, ಅಬ್ದುಲ್ ರವೂಫ್, ಚಂದ್ರಿಕಾ ಧನ್ಯ ಉಪಸ್ಥಿತರಿದ್ದರು.
