ಕಾಸರಗೋಡು : ಪೆರಿಯ ಕೇಂದ್ರ ವಿಶ್ವವಿದ್ಯಾಲಯದ ಸಮೀಪವಿರುವ ಬೇಕಲ್ ಗೋಕುಲಂ ಗೋಶಾಲಾ ಪರಂಪರಾ ವಿದ್ಯಾಪೀಠ ಇದರ ಆಶ್ರಯದಲ್ಲಿ ದಿನಾಂಕ 01 ಮೇ 2026ರಿಂದ ‘ವೈಶಾಖ ನಟನಂ 2026’ ರಾಷ್ಟ್ರೀಯ ನೃತ್ಯೋತ್ಸವವು ಪೆರಿಯದ ಬೇಕಲ್ ಗೋಕುಲಂ ಗೋಶಾಲೆಯಲ್ಲಿ ಪ್ರಾರಂಭವಾಗಿದೆ. ಪ್ರತಿದಿನ ಬೆಳಿಗ್ಗೆ 8-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಗೋಶಾಲೆಯ ‘ಧೇನು ಮಂಟಪಂ’ ಹಾಗೂ ‘ನಂದಿ ಮಂಟಪಂ’ ಎಂಬ ಎರಡು ವೇದಿಕೆಗಳಲ್ಲಿ ನಿರಂತರವಾಗಿ ನೃತ್ಯೋತ್ಸವ ನಡೆಯಲಿದ್ದು, ಭರತನಾಟ್ಯ, ಮೋಹಿನಿಯಾಟ್ಟಂ, ಕುಚಿಪುಡಿ, ಕಥಕ್ ಮತ್ತು ಕೇರಳ ನಟನಂ ಸೇರಿದಂತೆ ಭಾರತದ ವೈವಿಧ್ಯಮಯ ಶಾಸ್ತ್ರೀಯ ನೃತ್ಯ ಪ್ರಕಾರಗಳು ಅನಾವರಣಗೊಳ್ಳಲಿವೆ.
ದಿನಾಂಕ 10 ಮೇ 2026ರಂದು ಅಪರ್ಣ ಮೋಹನ್ ಇವರಿಂದ ಭರತನಾಟ್ಯ, ಶರತ್ ಆರ್. ಇವರಿಂದ ಕೂಚಿಪುಡಿ, ಅಜಿತಾ ಮತ್ತು ತಂಡದವರಿಂದ ಭರತನಾಟ್ಯ, ಶ್ರೀಮಲ್ಲಿ ಇವರಿಂದ ಭರತನಾಟ್ಯ, ಶ್ರೀನಿಧಿ ಎಲ್. ಇವರಿಂದ ಭರತನಾಟ್ಯ, ಮಾನಸ ನಾಗೇಂದ್ರ ಇವರಿಂದ ಭರತನಾಟ್ಯ, ಆರ್. ಜೈವಂತಿ ಇವರಿಂದ ಭರತನಾಟ್ಯ, ಶ್ವೇತಾ ಗಣೇಶ್ ಇವರಿಂದ ಭರತನಾಟ್ಯ,ತುಷಾರ್ ಯು. ಇವರಿಂದ ತ್ರಿನಾಟ್ಯಾಂ, ವೈಷ್ಣವಿ ನಾಟ್ಯಶಾಲ್ ಇವರಿಂದ ಭರತನಾಟ್ಯ, ಶ್ರೀಜಯ ಸ್ಕೂಲ್ ಆಫ್ ಕ್ಲಾಸಿಕಲ್ ಡಾನ್ಸ್ ಇವರಿಂದ ಭರತನಾಟ್ಯ, ಕೃಷ್ಣ ದಿನೇಶ್ ಮತ್ತು ಪ್ರಜಿತ್ ಇವರಿಂದ ಭರತನಾಟ್ಯ, ಮಾಧುರಿ ಅಚಲ್ ಇವರಿಂದ ಭರತನಾಟ್ಯ, ಲಕ್ಷ್ಮಿ ಜಿ. ಇವರಿಂದ ಮೋಹಿನಿಯಟ್ಟಂ, ನೃತ್ಯಾಂಜಲಿ ವಿದ್ಯಾಲಯ ಇವರಿಂದ ಭರತನಾಟ್ಯ, ನೃತ್ಯೋದಯ ಇವರಿಂದ ಭರತನಾಟ್ಯ, ನಾಟ್ಯಗೃಹಂ ಮಾಹೆ ಇವರಿಂದ ಭರತನಾಟ್ಯ, ರಚನಾ ನಾರಾಯಣನ್ ಕುಟ್ಟಿ ಇವರಿಂದ ಕೂಚಿಪುಡಿ ‘ಧೇನು ಮಂಟಪಂ’ ಹಾಗೂ ‘ನಂದಿ ಮಂಟಪಂ’ದಲ್ಲಿ ಪ್ರಸ್ತುತಗೊಳ್ಳಲಿದೆ.

