ಕುಂದಾಪುರ : ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇವರ ವತಿಯಿಂದ ಆಯೋಜಿಸಿದ ‘ನಲಿ ಕುಣಿ -2026’ ಇಪ್ಪತ್ತು ದಿನಗಳ ಯಕ್ಷಗಾನ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಪ್ರತಿಭಾ ಪ್ರದರ್ಶನವನ್ನು ದಿನಾಂಕ 03 ಮೇ 2026ರಂದು ಸಂಜೆ 4-30 ಗಂಟೆಗೆ ಗುಂಡ್ಮಿ ಸಾಲಿಗ್ರಾಮದ ಸದಾನಂದ ರಂಗ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭದ ಅಧ್ಯಕ್ಷತೆಯನ್ನು ಯಕ್ಷಗಾನ ಕಲಾಕೇಂದ್ರ ಹಂಗಾರಕಟ್ಟೆ ಐರೋಡಿ ಇದರ ಅಧ್ಯಕ್ಷರಾದ ಆನಂದ ಸಿ. ಕುಂದರ್ ಇವರು ವಹಿಸಲಿದ್ದಾರೆ. 4-30ರಿಂದ 5-30 ಹಾಗೂ 6-30ರಿಂದ 7-30ರ ತನಕ ಶಿಬಿರಾರ್ಥಿಗಳ ಕಲಿಕಾ ಪ್ರದರ್ಶನ ನಡೆಯಲಿದೆ.

