ಮೂಲ್ಕಿ : ಮೂಲ್ಕಿ ತಾಲೂಕು ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನವು ದಿನಾಂಕ 08 ಫೆಬ್ರವರಿ 2025 ಶನಿವಾರ ಐಕಳ ಪೊಂಪೈ ಕಾಲೇಜಿನಲ್ಲಿ ನಡೆಯಲಿದೆ. ಖ್ಯಾತ ಸಾಹಿತಿ ಶ್ರೀಧರ ಡಿ.ಎಸ್. ಇವರ ಅಧ್ಯಕ್ಷತೆಯಲ್ಲಿ ವಿವಿಧ ಸಾಹಿತಿಗಳ ಉಪಸ್ಥಿತಿಯಲ್ಲಿ ವಿಚಾರಗೋಷ್ಠಿ ಚಿಂತನ-ಮಂಥನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಈ ಸಮ್ಮೇಳನದ ಸಲುವಾಗಿ ಮೂಲ್ಕಿ ತಾಲೂಕಿನ ಸಾಹಿತ್ಯಾಸಕ್ತರಿಗೆ ಸಣ್ಣ ಕಥೆ ರಚನೆ (ಎ 4 ಹಾಳೆಯಲ್ಲಿ ಒಂದು ಪುಟ), ಕವನ ರಚನೆ ಸ್ಪರ್ಧೆ (12 ಸಾಲುಗಳು), ನಾನು ಓದಿದ ಉತ್ತಮ ಪುಸ್ತಕ – ಪ್ರಬಂಧ ಸ್ಪರ್ಧೆ (ಎ 4 ಹಾಳೆಯಲ್ಲಿ ಎರಡು ಪುಟ)ಗಳನ್ನು ಆಯೋಜಿಸಲಾಗಿದೆ. ಮೂಲ್ಕಿ ತಾಲೂಕಿನಲ್ಲಿ ವಾಸವಾಗಿರುವ, ಉದ್ಯೋಗದಲ್ಲಿರುವ ಮತ್ತು ಮೂಲತಃ ಮೂಲ್ಕಿ ತಾಲೂಕಿನವರಾಗಿ ಬೇರೆ ಕಡೆಗಳಲ್ಲಿ ಇರುವ ಸಾಹಿತ್ಯಾಸಕ್ತರು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದಾಗಿದೆ. ಪ್ರತಿ ವಿಭಾಗದಲ್ಲಿ ಉತ್ತಮವಾದ 2 ಬರಹಗಳಿಗೆ ಬಹುಮಾನ ನೀಡಲಾಗುವುದು. ಸ್ಪರ್ಧಿಗಳು ರಘುನಾಥ್ ಕಾಮತ್, ಅಂಚೆ ಕಚೇರಿ ಕಿನ್ನಿಗೋಳಿ, ಮೂಲ್ಕಿ ತಾಲೂಕು – 574150 ದೂರವಾಣಿ 9448887697 ವಿಳಾಸಕ್ಕೆ ದಿನಾಂಕ 31 ಜನವರಿ 2025ರ ಒಳಗಡೆ ತಲುಪಿಸಬೇಕು.
ಮೂಲ್ಕಿ ತಾಲೂಕಿನ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು ಹಾಗೂ ಪದವಿ ಕಾಲೇಜು ಹೀಗೆ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ‘ನಾನು ಓದಿದ ಒಳ್ಳೆಯ ಪುಸ್ತಕ’ ಈ ವಿಚಾರವಾಗಿ ಎ4 ಅಳತೆಯ ಎರಡು ಪುಟ ಮೀರದ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ತಾವು ಓದಿದ ಯಾವುದೇ ಸಾಹಿತ್ಯ ಪ್ರಕಾರದ ಪುಸ್ತಕದ ಕುರಿತಾಗಿ ಬರೆದು ಕಳುಹಿಸಬಹುದು. ಪ್ರತಿ ವಿಭಾಗದಲ್ಲಿ ಉತ್ತಮವಾದ 2 ಬರಹಗಳಿಗೆ ಬಹುಮಾನ ನೀಡಲಾಗುವುದು. ವಿದ್ಯಾರ್ಥಿ ತನ್ನ ಹೆಸರು, ಶಾಲೆ, ತರಗತಿ, ದೂರವಾಣಿ ಸಂಖ್ಯೆಯೊಂದಿಗೆ ಪ್ರಬಂಧವನ್ನು ಜನಾರ್ದನ್, ಪೊಂಪೈ ಪಿ.ಯು. ಕಾಲೇಜು, ಐಕಳ, ಮೂಲ್ಕಿ ತಾಲೂಕು-574141, ಈ ವಿಳಾಸಕ್ಕೆ ದಿನಾಂಕ 31 ಜನವರಿ 2025ರ ಒಳಗಡೆ ತಲುಪಿಸಬೇಕು ಎಂದು ಕ.ಸಾ.ಪ. ಮೂಲ್ಕಿ ಘಟಕಾಧ್ಯಕ್ಷ ಮಿಥುನ ಕೊಡೆತ್ತೂರು ತಿಳಿಸಿದ್ದಾರೆ.