ಬಂಟ್ವಾಳ : ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘ ಬೊಳುವಾರು ಪುತ್ತೂರು ಮತ್ತು ಶ್ರವಣರಂಗ ಪ್ರತಿಷ್ಠಾನ ಸವಣೂರು ಇದರ ಸಂಯುಕ್ತ ಸಂಯೋಜನೆಯಲ್ಲಿ ‘ಯಕ್ಷಾಷಾಡ 4’ ತಾಳಮದ್ದಳೆ ಕೂಟ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ (ರಿ.) ಮುಡಿಪು ಇವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಇವರ ಸಹಭಾಗಿತ್ವದಲ್ಲಿ ನಡೆಯುವ ವಿಶ್ವಭಾರತಿ ಯಕ್ಷ ಸಂಭ್ರಮ ಯಕ್ಷಗಾನ ತಾಳಮದ್ದಳೆ ಸಪ್ತಾಹದ ಅಂಗವಾಗಿ 21 ಜುಲೈ 2026ರಂದು ಬಿ.ಸಿ. ರೋಡ್ ತುಳು ಶಿವಳ್ಳಿ ಸಭಾ ಭವನದಲ್ಲಿ ‘ಭೀಷ್ಮ ವಿಜಯ’ ಎಂಬ ಆಖ್ಯಾನದ ಪ್ರಸ್ತುತಿಯೊಂದಿಗೆ ಸಂಪನ್ನಗೊಂಡಿತು.

ಹಿಮ್ಮೇಳದಲ್ಲಿ ಭಾಗವತರಾಗಿ ಗಿರೀಶ್ ಮುಳಿಯಾಲ ಹಾಗೂ ಚೆಂಡೆ ಮದ್ದಳೆಗಳಲ್ಲಿ ಮುರಳೀಧರ ನೇರಂಕಿ, ಸಮರ್ಥ ವಿಷ್ಣು ಕಡಂಬಳಿಕೆ, ಅನೀಶ್ ಕೃಷ್ಣ ಪುಣಚ ಸಹಕರಿಸಿದರು. ಮುಮ್ಮೇಳದಲ್ಲಿ ಶುಭಾ ಜೆ.ಸಿ. ಅಡಿಗ (ಭೀಷ್ಮ), ಹರಿಣಾಕ್ಷಿ ಜೆ. ಶೆಟ್ಟಿ (ಪರಶುರಾಮ), ಗಾಯತ್ರಿ ಹೆಬ್ಬಾರ್ (ಅಂಬೆ), ಕಿಶೋರಿ ದುಗ್ಗಪ್ಪ ನಡುಗಲ್ಲು (ಸಾಲ್ವ), ಮನೋರಮಾ ಜಿ. ಭಟ್ (ವೃದ್ಧ ಬ್ರಾಹ್ಮಣ) ಸಹಕರಿಸಿದರು. ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಸ್ವಾಗತಿಸಿ, ವಿಶ್ವ ಭಾರತಿ ಯಕ್ಷ ಸಂಜೀವಿನಿ ಟ್ರಸ್ಟಿನ ಸಂಚಾಲಕ ಪ್ರಶಾಂತ್ ಹೊಳ್ಳ ವಂದಿಸಿದರು. ಕೀರ್ತನಾ ಪ್ರಶಾಂತ್ ಹೊಳ್ಳ ಸಹಕರಿಸಿದರು.
