ಉಡುಪಿ : ಸುಮನಸಾ ಕೊಡವೂರು-ಉಡುಪಿ (ರಿ.) ಸಂಸ್ಥೆಯ ರಜತ ಸಂಭ್ರಮದ ಸರಣಿ ಕಾರ್ಯಕ್ರಮಗಳಲ್ಲಿ ಯಕ್ಷರಂಗದ ಸವ್ಯಸಾಚಿ ದಿ. ಜಯಂತ್ ಕುಮಾರ್ ತೋನ್ಸೆ ಸ್ಮರಣೆಯಲ್ಲಿ ‘ಯಕ್ಷಪಥ’ ಚಿಣ್ಣರ ಯಕ್ಷ ಹೆಜ್ಜೆ ಕಲಿಕಾ ಶಿಬಿರದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 12 ಅಕ್ಟೋಬರ್ 2026ರಂದು ಕೊಡವೂರಿನ ವಿಪ್ರಶ್ರೀ ಕಲಾಭವನದಲ್ಲಿ ನಡೆಯಿತು.

ರಜತ ಸಂಭ್ರಮ ಸಮಿತಿಯ ಗೌರವಾಧ್ಯಕ್ಷರು, ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷರು ಎಂ.ಎಲ್. ಸಾಮಗರವರು ಈ ಶಿಬಿರವನ್ನು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಶಿಬಿರದ ಗುರುಗಳಾದ ಶೈಲೇಶ್ ತೀರ್ಥಹಳ್ಳಿ, ಸಂಸ್ಥೆಯ ಅಧ್ಯಕ್ಷರಾದ ಪ್ರಕಾಶ್ ಜಿ. ಕೊಡವೂರು ಗೌರವಾಧ್ಯಕ್ಷರಾದ ಎಂ.ಎಸ್. ಭಟ್ ಸಂಚಾಲಕರಾದ ಭಾಸ್ಕರ್ ಪಾಲನ್, ಶಿಬಿರದ ಸಂಯೋಜಕರಾದ ಅಕ್ಷತ್ ಅಮೀನ್ ಉಪಸ್ಥಿತರಿದ್ದರು.
