ಮಂಗಳೂರು : ಯಕ್ಷನಂದನದ 45ನೇ ವರ್ಷಾಚರಣೆ ದಿನಾಂಕ 10 ಜುಲೈ 2026ರಂದು ಮಧ್ಯಾಹ್ನ ಗಂಟೆ 2-15ಕ್ಕೆ ಪಿ.ಎ. ಐತಾಳರು ಬರೆದ ‘ನರಕಾಸುರ ಮೋಕ್ಷ’ ಮತ್ತು ‘ಬ್ರಹ್ಮಕಪಾಲ’ ಪ್ರಸಂಗಗಳ (ಇಂಗ್ಲೀಷ್ ಸಂಭಾಷಣೆ) ದೃಶ್ಯಾವಳಿಗಳನ್ನು ಪಣಂಬೂರು ಶ್ರೀ ನಂದನೇಶ್ವರ ದೇವಸ್ಥಾನದ ರಾಮರಮಣ ಮಂಟಪದಲ್ಲಿ ಪ್ರದರ್ಶನಗೊಳ್ಳಲಿದೆ.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕ್ಷೇತ್ರ ಕಟೀಲು ಕಮಲಾದೇವಿ ಪ್ರಸಾದ ಆಸ್ರಣ್ಣರು ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮ ಅಧ್ಯಕ್ಷ ಎನ್. ಪ್ರಕಾಶ್ ಕಾರಂತ್ ವಹಿಸಲಿದ್ದು, ಮುಖ್ಯ ಅತಿಥಿಯಾಗಿ ಪ್ರಸಿದ್ಧ ಯಕ್ಷಗಾನ ಕಲಾವಿದ ಹಾಗೂ ವಿಮರ್ಶಕ ಡಾ. ಎಂ. ಪ್ರಭಾಕರ ಜೋಶಿ ಭಾಗವಹಿಸಲಿದ್ದಾರೆ.

