ಮೂಲ್ಕಿ : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಕಿನ್ನಿಗೋಳಿಯ ಅನಂತ ಪ್ರಕಾಶನದ ಆಶ್ರಯದಲ್ಲಿ ಶ್ರೀಮತಿ ಗಾಯತ್ರಿ ಸಚ್ಚಿದಾನಂದ ಉಡುಪರ ಸ್ಮರಣಾರ್ಥ ರಾಜ್ಯಮಟ್ಟದ ಉಚಿತ ಕಥಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನಂತ ಪ್ರಕಾಶನದ ಗೌರವ ಸಲಹೆಗಾರರಾದ ಸಾಲಿಗ್ರಾಮ ಗಣೇಶ್ ಶೆಣೈ ತಿಳಿಸಿದ್ದಾರೆ.
ಕಥಾ ಸ್ಪರ್ಧೆಯಲ್ಲಿ ಭಾಗವಹಿಸುವವರು ವಿಷಯ ಆಯ್ಕೆ ಅವರದ್ದು. ಪ್ರಥಮ ಬಹುಮಾನ ರೂ.7,500/- ಮತ್ತು ಅನಂತ ಪ್ರಕಾಶನದ ರೂ.2,500/- ಬೆಲೆಯ ಪುಸ್ತಕಗಳು, ದ್ವಿತೀಯ ಬಹುಮಾನ ರೂ.5,000/- ಮತ್ತು ಅನಂತ ಪ್ರಕಾಶನದ ರೂ.1,500/- ಬೆಲೆಯ ಪುಸ್ತಕಗಳು, ತೃತೀಯ ಬಹುಮಾನ ರೂ.3,000/- ಮತ್ತು ಅನಂತ ಪ್ರಕಾಶನದ ರೂ.1,500/- ಬೆಲೆಯ ಪುಸ್ತಕಗಳು. ಸಮಾಧಾನಕರ ಬಹುಮಾನ ರೂ.1,000/- ಮತ್ತು ಅನಂತ ಪ್ರಕಾಶನದ ರೂ.1,000/- ಬೆಲೆಯ ಪುಸ್ತಕಗಳನ್ನು ವಿತರಿಸಲಾಗುವುದು ಎಂದು ಅನಂತ ಪ್ರಕಾಶನ ಮಾಸ ಪತ್ರಿಕೆಯ ಪ್ರಧಾನ ಸಂಪಾದಕರಾದ ಕೊಡುತ್ತೂರು ಸಚ್ಚಿದಾನಂದ ಉಡುಪರು ತಿಳಿಸಿದ್ದಾರೆ.
ಸ್ವಂತ ರಚನೆಯ ಕಥೆ 4,000 ಪದಗಳು, 4-5 ಪುಟಗಳಲ್ಲಿ ಬರೆದು ದಿನಾಂಕ 31 ಆಗಸ್ಟ್ 2026ರೊಳಗೆ ಈ ಕೆಳಗಿನ ವಿಳಾಸಕ್ಕೆ ಅಂಚೆ ಮೂಲಕ ಕಳಿಸಬೇಕಾಗಿ ಆನಂತ ಪ್ರಕಾಶನದ ಸಹ ಸಂಪಾದಕರಾದ ಮಿಥುನ ಕೊಡೆತ್ತೂರು ವಿನಂತಿಸಿದ್ದಾರೆ. ಕಥೆ ಬರೆದು ಕಳಿಸುವ ವಿಳಾಸ : ಅನಂತ ಪ್ರಕಾಶ ಗಾಯತ್ರಿ ಪ್ರಕಾಶನ, ಪಿ.ಬಿ. ಸಂಖ್ಯೆ 15, ಕಿನ್ನಿಗೋಳಿ-574150 ಮೂಲ್ಕಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ, ಹೆಚ್ಚಿನ ಮಾಹಿತಿಗಾಗಿ 94811 41795 ಈ ಸನೀಹವಾಣಿಗೆ ಸಂಪರ್ಕಿಸಬಹುದು.
