ಕಾಸರಗೋಡು : ಕಾಸರಗೋಡಿನ ಬದಿಯಡ್ಕ ಬಳಿಯ ವೀಣಾವಾದಿನಿ ಸಂಗೀತ ಹಾಗೂ ವೈದಿಕ – ತಾಂತ್ರಿಕ ವಿದ್ಯಾಪೀಠದ ವತಿಯಿಂದ ‘ಸತ್ಸಂಗೀತಂ’ ವಿದ್ಯಾರ್ಥಿಗಳಿಂದ ಸರಣಿ ಕಾರ್ಯಕ್ರಮವನ್ನು ದಿನಾಂಕ 11 ಜುಲೈ 2026ರಂದು ಸಂಜೆ 5-30 ಗಂಟೆಗೆ ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಗಮ ಪೆರ್ಲ ಇವರ ಹಾಡುಗಾರಿಕೆಗೆ ಗೌತಮ್ ಭಟ್ ಪಿ.ಜಿ. ಇವರು ವಯೋಲಿನ್, ಪರಾಶರ ಉಪ್ಪಂಗಳ ಇವರು ಮೃದಂಗ ಹಾಗೂ ಹರಿಪ್ರಸಾದ್ ಉಪ್ಪಂಗಳ ಇವರು ಘಟಂನಲ್ಲಿ ಸಾಥ್ ನೀಡಲಿದ್ದಾರೆ.

