ಮಂಗಳೂರು : ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದಿಂದ ಕೊಂಕಣಿ ಶಬ್ದ ರತ್ನಾಕರ್ ದಿ. ಮಂದರ್ಕೆ ಮಾಧವ್ ಪೈ ಸ್ಮರಣಾರ್ಥ ‘ಸೋಬಿತ್ ಪಾವ್ಸಾಡಿ’ ಎಂಬ ವಿಷಯದಲ್ಲಿ ಕೊಂಕಣಿ ಸಾಹಿತ್ಯ ಮತ್ತು ಇತರ ಸ್ಪರ್ಧೆಗಳು ದಿನಾಂಕ 12 ಜುಲೈ 2026ರಂದು ಮಂಗಳೂರಿನ ಸುಜೀರ್ ಸಿ.ವಿ. ನಾಯಕ್ ಸಭಾಂಗಣದಲ್ಲಿ ನಡೆಯಲಿದೆ.
ಕೊಂಕಣಿ ಭಾಷೆಯನ್ನು ಉತ್ತೇಜಿಸುವ ಮತ್ತು ವಿವಿಧ ವಯೋಮಾನದ ಸಮುದಾಯ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ. ಕಾರ್ಯಕ್ರಮವನ್ನು ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಪ್ರಾಂಶುಪಾಲ ಡಾ. ಜಯವಂತ ನಾಯಕ್ ಉದ್ಘಾಟಿಸಲಿದ್ದಾರೆ. ದಿ. ಮಂದರ್ಕೆ ಮಾಧವ ಪೈ ಅವರ ಪುತ್ರರಾದ ರವೀಂದ ಪೈ, ಸುರೇಂದ್ರ ಪೈಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟನಾ ಸಮಿತಿ ಅಧ್ಯಕ್ಷರಾದ ಡಾ. ಎ. ರಮೇಶ್ ಪೈ ತಿಳಿಸಿದ್ದಾರೆ.
