Subscribe to Updates

    Get the latest creative news from FooBar about art, design and business.

    What's Hot

    ವಿಶೇಷ ಲೇಖನ | ಗುರುಕುಲ ಪದ್ದತಿಯಲ್ಲಿ ಸಂಗೀತ ಶಿಕ್ಷಣ ನೀಡಿದ ಪ್ರತಿಭೆ – ತಿರುಮಕೂಡಲು ಗುರುರಾಜಪ್ಪ

    July 9, 2026

    ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ಯಕ್ಷನಂದನ 45ನೇ ವರ್ಷಾಚರಣೆ | ಜುಲೈ 10

    July 9, 2026

    ಮಂಗಳೂರಿನಲ್ಲಿ ಸೋಬಿತ್ ಪಾವ್ಸಾಡಿ, ಕೊಂಕಣಿ ಸಾಹಿತ್ಯ ಸ್ಪರ್ಧೆ | ಜುಲೈ 12

    July 9, 2026
    Facebook Twitter Instagram
    Facebook Twitter Instagram YouTube
    Roovari
    Account
    Membership Plans
    Login
    • Home
    • News
    • Contact US
    Roovari
    ನಿವೃತ್ತ ಬ್ಯಾಂಕ್ ಅಧಿಕಾರಿ, ಉತ್ಕಟ ಕಲಾ ಪ್ರೇಮಿ ವಕ್ವಾಡಿ ಶೇಖರ ಶೆಟ್ಟಿ ನಿಧನ
    Yakshagana

    ನಿವೃತ್ತ ಬ್ಯಾಂಕ್ ಅಧಿಕಾರಿ, ಉತ್ಕಟ ಕಲಾ ಪ್ರೇಮಿ ವಕ್ವಾಡಿ ಶೇಖರ ಶೆಟ್ಟಿ ನಿಧನ

    July 9, 2026No Comments2 Mins Read
    Facebook Twitter Pinterest LinkedIn Tumblr WhatsApp VKontakte Email
    Share
    Facebook Twitter LinkedIn Pinterest Email

    ಮಂಗಳೂರು : ವಿಜಯಾ ಬ್ಯಾಂಕಿನ ನಿವೃತ್ತ ಅಧಿಕಾರಿ, ಯಕ್ಷಗಾನ ಮತ್ತು ವಿವಿಧ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದ ವಕ್ವಾಡಿ ಶೇಖರ ಶೆಟ್ಟಿ (86) ಇವರು ದಿನಾಂಕ 09 ಜುಲೈ 2026ರಂದು ನಿಧನರಾದರು. ಕದ್ರಿಯ ಶ್ರೀಕೃಷ್ಣ ಯಕ್ಷ ಸಭಾ ಮತ್ತು ಯಕ್ಷಾಂಗಣ ಮಂಗಳೂರು ಸಂಸ್ಥೆಗಳಲ್ಲಿ ಸುದೀರ್ಘ ಕಾಲ ಸದಸ್ಯರಾಗಿದ್ದು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ್ದ ಅವರು ಸಾರ್ವಜನಿಕ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದರು. ಬ್ಯಾಂಕಿಂಗ್ ಮತ್ತು ಸಾಮಾಜಿಕ ಸೇವೆಗಾಗಿ ಹಲವು ಸನ್ಮಾನ – ಗೌರವಗಳಿಗೆ ಪಾತ್ರರಾಗಿದ್ದರು.

    ಮೂಲತಃ ಕುಂದಾಪುರ ತಾಲೂಕಿನ ವಕ್ವಾಡಿಯ ಪ್ರತಿಷ್ಠಿತ ಕೃಷಿಕ ಕುಟುಂಬದಲ್ಲಿ ಜನಿಸಿದ ಶೇಖರ ಶೆಟ್ಟರು ಹಲವು ವರ್ಷಗಳಿಂದ ಮಂಗಳೂರಿನಲ್ಲಿ ನಲೆಸಿದ್ದರು. ದೇಶದ ವಿವಿಧ ಭಾಗಗಳಲ್ಲಿ ಬ್ಯಾಂಕಿಂಗ್ ಸೇವೆ ಸಲ್ಲಿಸಿ, ತಮ್ಮ ಸ್ನೇಹಶೀಲ ಹಾಗೂ ವಿನೋದ ಭರಿತ ಮಾತುಗಳಿಂದ ಸಾರ್ವಜನಿಕರ ವಿಶ್ವಾಸ ಗಳಿಸಿದ್ದರು. ಪತ್ನಿ ವಸಂತಿ ಶೆಟ್ಟಿ, ಮೂವರು ಗಂಡು ಮಕ್ಕಳು ಡಾ. ವಿದ್ಯಾಧರ್ ಶೆಟ್ಟಿ, ರೂಪೇಶ್ ಕುಮಾರ್ ಶೆಟ್ಟಿ, ಹರ್ಷಿಷ್ ಕುಮಾರ್ ಶೆಟ್ಟಿ, ಕುಟುಂಬಿಕರು ಹಾಗೂ ಅಪಾರ ಬಂಧು – ಮಿತ್ರರನ್ನು ಅವರು ಅಗಲಿದ್ದಾರೆ.

    ಕದ್ರಿ ಹಿಲ್ಸ್ ಪ್ರವಾಸೀ ಮಂದಿರದ ಮುಂಭಾಗದ ಸಂಗೀತಾ ಅಪಾರ್ಟ್ ಮೆಂಟ್ ನಲ್ಲಿರುವ ಅವರ ನಿವಾಸದಲ್ಲಿ ಅವರ ಆಪ್ತರು ಮತ್ತು ಹಿತೈಷಿಗಳು ಅಂತಿಮ ದರ್ಶನ ಪಡೆದರು. ಬೆಂಗಳೂರಿನಲ್ಲಿ ಉದ್ಯೋಗಿಯಾಗಿರುವ ಮೃತರ ದ್ವಿತೀಯ ಪುತ್ರ ಬರಬೇಕಾಗಿದ್ದು ಸಂಜೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆದಿವೆಯೆಂದು ಅವರ ಕಿರಿಯ ಪುತ್ರ ಹರ್ಷಿಷ್ ಕುಮಾರ್ ಶೆಟ್ಟಿ ತಿಳಿಸಿದ್ದಾರೆ. ವಕ್ವಾಡಿ ಶೇಖರ ಶೆಟ್ಟಿ ಅವರ ನಿಧನಕ್ಕೆ ಯಕ್ಷಾಂಗಣ ಮಂಗಳೂರು, ಶ್ರೀಕೃಷ್ಣ ಯಕ್ಷ ಸಭಾ ಕದ್ರಿ, ಕಲ್ಕೂರಾ ಪ್ರತಿಷ್ಠಾನ ಮಂಗಳೂರು, ವಿಜಯಾ ಬ್ಯಾಂಕಿನ ಸಹೋದ್ಯೋಗಿಗಳು ಹಾಗೂ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ಬಂಟರ ಸಂಘಗಳು ಸಂತಾಪ ವ್ಯಕ್ತಪಡಿಸಿವೆ.

    ಯಕ್ಷಾಂಗಣದ ನುಡಿನಮನ: ಆತ್ಮೀಯ ಬಳಗದಲ್ಲಿ ‘ಮೀಸೆ ಮಾವ’ ಎಂಬ ಅಕ್ಕರೆಗೆ ಪಾತ್ರರಾಗಿದ್ದ ವಕ್ವಾಡಿಯವರು ಯಕ್ಷಾಂಗಣದ ಸಪ್ತಾಹ ಕಾರ್ಯಕ್ರಮಗಳಲ್ಲಿ ಯುವಕರಂತೆ ಓಡಾಡಿ ಸಹಕಾರ ನೀಡುತ್ತಿದ್ದರೆಂದು ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ಹೇಳಿದ್ದಾರೆ. 2024ರಲ್ಲಿ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜರಗಿದ 11ನೇ ವರ್ಷದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ’ದಲ್ಲಿ ಹಿರಿಯ ಸದಸ್ಯರ ನೆಲೆಯಲ್ಲಿ ಶೇಖರ ಶೆಟ್ಟಿಯವರನ್ನು ಸಪತ್ನಿಕರಾಗಿ ಸನ್ಮಾನಿಸಲಾಗಿದೆ. ಶೆಟ್ಟರ ನಿಧನದಿಂದ ಹಿರಿಯ ಮಾರ್ಗದರ್ಶಕರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದವರು ನುಡಿನಮನ ಸಲ್ಲಿಸಿದ್ದಾರೆ.

    baikady roovari yakshagana
    Share. Facebook Twitter Pinterest LinkedIn Tumblr WhatsApp Email
    Previous Articleಬೆಂಗಳೂರಿನ ರಂಗ ಶಂಕರದಲ್ಲಿ ‘ತುಘಲಕ್’ ನಾಟಕ ಪ್ರದರ್ಶನ | ಜುಲೈ 11
    Next Article ಬಳ್ಳಪದವು ನಾರಾಯಣೀಯಂ ಆವರಣದಲ್ಲಿ ‘ಸತ್ಸಂಗೀತಂ’ ಸರಣಿ ಕಾರ್ಯಕ್ರಮ | ಜುಲೈ 11
    roovari

    Add Comment Cancel Reply


    Related Posts

    ಶ್ರೀ ನಂದನೇಶ್ವರ ದೇವಸ್ಥಾನದಲ್ಲಿ ಯಕ್ಷನಂದನ 45ನೇ ವರ್ಷಾಚರಣೆ | ಜುಲೈ 10

    July 9, 2026

    ಮಂಗಳೂರಿನಲ್ಲಿ ಸೋಬಿತ್ ಪಾವ್ಸಾಡಿ, ಕೊಂಕಣಿ ಸಾಹಿತ್ಯ ಸ್ಪರ್ಧೆ | ಜುಲೈ 12

    July 9, 2026

    ರಾಜ್ಯಮಟ್ಟದ ಉಚಿತ ಕಥಾ ಸ್ಪರ್ಧೆಗೆ ಆಹ್ವಾನ | ಕೊನೆಯ ದಿನಾಂಕ ಆಗಸ್ಟ್ 31

    July 9, 2026

    ಶಿವಮೊಗ್ಗದ ಕ.ಸಾ.ಪ.ದಿಂದ ದತ್ತಿನಿಧಿ ಕಾರ್ಯಕ್ರಮ | ಜುಲೈ 9, 10 ಮತ್ತು 14

    July 9, 2026

    Add Comment Cancel Reply


    Facebook Twitter Instagram YouTube
    • Shipping, Refunds & Cancellation
    • Terms & Conditions
    • Privacy Policy
    • Contact US
    © 2026 Roovari | Baikady Studios. All Rights Reserved.

    Type above and press Enter to search. Press Esc to cancel.

    Sign In or Register

    Welcome Back!

    Login below or Register Now.


    Lost password?

    Register Now!

    Already registered? Login.


    A password will be e-mailed to you.